ನವದೆಹಲಿ: ಮ್ಯಾಚ್ ವಿನ್ನರ್ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 40ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಯಸ್ಸು 40 ಆದರೂ ಧೋನಿ ಯಾವ ಯುವಕರಿಗೆ ಕಡಿಮೆ ಇಲ್ಲ. ಧೋನಿ ತಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ದೇಹ ದಂಡನೆ, ನಿಯಮಿತ ಆಹಾರ ಹೀಗೆ ಹಲವು ವಿಧಾನಗಳನ್ನು ಧೋನಿ ಅಳವಡಿಸಿಕೊಂಡಿದ್ದಾರೆ.

ಸದೃಢ ದೇಹಕ್ಕಾಗಿ ಧೋನಿ ತಮ್ಮ ಕೆಲ ಸಮಯವನ್ನು ಜಿಮ್ ನಲ್ಲಿ ಕಳೆಯುತ್ತಾರೆ. ಈ ಹಿಂದೆ ಒಂದು ಸಂದರ್ಶನದಲ್ಲಿ ತಾವು ಒನ್ ಲೆಗ್ ಡೆಡ್ ಲಿಫ್ಟ್, ರಿವರ್ಸ್ ಲಂಗ್ಸ್, ಲ್ಯಾಟರಲ್ ಪುಲ್ ಡೌನ್, ವಿ ಗ್ರೂಪ್ ಪುಲ್ ಡೌನ್, ಡಬಲ್ ಲಂಗ್ಸ್, ಡಬಲ್ ಚೆಸ್ಟ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿಯೂ ಈ ಇವರು ಇನ್ನೂ ದೇಹವನ್ನು ದಂಡಿಸುತ್ತಿದ್ದಾರೆ. ತಮ್ಮ ಕರಿಯರ್ ಕಟ್ಟಿದ್ದ ಕ್ರಿಕೆಟ್ ಜೊತೆಗೆ ಫುಟ್ಬಾಲ್, ಟೆನ್ನಿಸ್, ಬ್ಯಾಡ್ಮಿಂಟನ್ ಆಟಗಳನ್ನು ಇವರು ಆಡುತ್ತಾರೆ.

ಪ್ರತಿದಿನ ಬೆಳಗ್ಗೆ ಬ್ರೆಡ್ ಅಥವಾ ಪರೋಟಾ ಜೊತೆ ಒಂದು ಗ್ಲಾಸ್ ಹಾಲು ಕುಡಿಯಲು ಧೋನಿ ಇಷ್ಟಪಡುತ್ತಾರೆ. ದೇಹ ದಂಡನೆ ಬಳಿಕ ಪ್ರೋಟಿನ್ ನಿಂದ ಕೂಡಿದ ಜ್ಯೂಸ್ ಕುಡಿಯುತ್ತಾರೆ. ಇನ್ನೂ ಊಟಕ್ಕೆ ದಾಲ್, ಚಿಕನ್, ಹಸಿರು ತರಕಾರಿಯಿಂದ ಮಾಡಿದ ರೊಟ್ಟಿ ಮತ್ತು ಸಲಾಡ್ ಸೇವಿಸುತ್ತಾರೆ. ನಿದ್ದೆಗೂ ಪ್ರಾಮುಖ್ಯತೆ ನೀಡುತ್ತಾರೆ.

Leave a Reply

Your email address will not be published.

You May Also Like

ಕೊರೋನಾ ಸೋಂಕಿತರ ಸಂಖ್ಯೆ ಬಹಿರಂಗಕ್ಕೂ ಮೀನಾಮೇಷವೇ..?

ಲಾಕ್ ಡೌನ್ ಸಡಿಲಿಕೆಯಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಕೇಂದ್ರ ಸರ್ಕಾರ ಅಂಕಿಸಂಖ್ಯೆಯನ್ನು ಬಹಿರಂಗ ಪಡಿಸಲು ಮೀನಾಮೇಷ ಎಣಿಸುತ್ತಿದೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ.

ಆಮ್ಲಜನಕ ಪೂರೈಸುವಲ್ಲಿ ಸರ್ಕಾರ ಸಮರ್ಥವಿದೆ : ಸಚಿವ ಸುಧಾಕರ್

ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಸುವಲ್ಲಿ ನಮ್ಮ ಸರ್ಕಾರ ಸಮರ್ಥವಿದೆ. ಈಗಾಗಲೇ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ನಿಮ್ಮೊಡನಿದ್ದೂ ನಿಮ್ಮಂತಾಗದೆ

ಪ್ರಸ್ತುತ ಸಂದರ್ಭದಲ್ಲಿ ನಿಸಾರ್ ಅಹ್ಮದ್ ಅವರು ರಚಿಸಿದ ನಿಮ್ಮೊಡನಿದ್ದೂ ನಿಮ್ಮಂತಾಗದೆ ಎನ್ನುವ ಕವನ ಇಂದಿನ ದಿನಮಾನಗಳಲ್ಲಿ ವಾಸ್ತವಕ್ಕೆ ಹತ್ತಿರವಾಗಿದ್ದು, ನಮ್ಮನ್ನಗಲಿದ ಸಾಹಿತಿ ಕೆ.ಎಸ್.ನಿಸಾರ್ ಅಹ್ಮದ್ ಅವರಿಗೆ ‘ಉತ್ತರ ಪ್ರಭ’ದ ನುಡಿ ನಮನ…