ಮುಂಬಯಿ : ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ್ದು, ಓರ್ವ ಸಿನಿಮಾ ನಟಿ ಸೇರಿದಂತೆ ಮೂವರು ಧಾರವಾಹಿ ನಟಿಯರನ್ನು ರಕ್ಷಿಸಲಾಗಿದೆ.

ಪೊಲೀಸರು, ಗ್ರಾಹಕರ ಸೋಗಿನಲ್ಲಿ ಹೋಗಿ ಹೈ ಟೆಕ್ ವೇಶ್ಯಾವಾಟಿಕೆ ಮೇಲೆ ದಾಳಿ ನಡೆಸಿದ್ದಾರೆ.  ಅಡ್ಡೆ ಮೇಲೆ ಅಪರಾಧ ವಿಭಾಗದ 11ನೇ ಯುನಿಟ್ ಪೊಲೀಸರು ದಾಳಿ ನಡೆಸಿದ್ದು, ಓರ್ವ ಸಿನಿಮಾ ನಟಿಯನ್ನು ಬಂಧಿಸಿದ್ದಾರೆ. ಅಲ್ಲದೆ ಮೂವರು ಧಾರಾವಾಹಿ ನಟಿಯರನ್ನು ರಕ್ಷಿಸಿದ್ದಾರೆ.

ನಟಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ. ಉಳಿದ ಮೂವರು ನಟಿಯರು ವಿವಿಧ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಟಿಯರು ಹಾಗೂ ಬೆಳ್ಳಿ ಡ್ಯಾನ್ಸ್ ಮಾಡುತ್ತಿದ್ದ ಹುಡುಗಿಯರು ಸೆಕ್ಸ್ ದಂಧೆ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಸಿಕ್ಕ ನಂತರ ಪೊಲೀಸರು  ದಾಳಿ ನಡೆಸಿದ್ದಾರೆ. ನಕಲಿ ಗ್ರಾಹಕರನ್ನು ಕಳುಹಿಸಿ,ಮೂವರು ಮಹಿಳೆಯರಿಗೆ ರೂ. 10.50 ಲಕ್ಷ ವ್ಯವಹಾರ ಕುದುರಿಸಿ ಪೊಲೀಸರು ಬಲೆ ಬೀಸಿದ್ದಾರೆ. 

ಆ ನಂತರ ಹಿರಿಯ ಹಿರಿಯ ಇನ್ಸ್ ಪೆಕ್ಟರ್ ಮಹೇಶ್ ತವಾಡೆ ಅವರ ನೇತೃತ್ವದ ತಂಡ ಗೋರೆಗಾಂವ್ ನ 5 ಸ್ಟಾರ್ ಹೊಟೇಲ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ ನಟಿಯರನ್ನು ಬಂಧಿಸಿದ್ದಾರೆ. ಐಪಿಸಿ ಹಾಗೂ ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ವನ್ರಾಯ್ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. 

Leave a Reply

Your email address will not be published. Required fields are marked *

You May Also Like

ಹತ್ರಾಸ್ ಸಂತ್ರಸ್ತೆಯ ಸಹೋದರ ಸಂಬಂಧಿ, ಆರೋಪಿ 100 ಬಾರಿ ಫೋನ್ ನಲ್ಲಿ ಮಾತನಾಡಿದ್ದೇಕೆ?

ಲಖನೌ : ದೇಶದಲ್ಲಿ ಸದ್ಯ ಹತ್ರಾಸ್ ಬಾಲಕಿಯ ಅತ್ಯಾಚಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಿದೆ.

ಕೊರೊನಾ ಪರೀಕ್ಷೆ: ದೇಶಾದ್ಯಂತ ಸಮಂಜಸ ದರ ನಿಗದಿಗೆ ಸುಪ್ರೀಂ ಸೂಚನೆ

ದೆಹಲಿ: ಕೊರೊನಾ ಪರೀಕ್ಷೆಗೆ ಸಮಂಜಸ ದರ ನಿಗದಿಮಾಡಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಭೂಷಣ್ ಹೇಳಿದ್ದಾರೆ.…

ಕೊರೊನಾದ ಮಧ್ಯೆಯೂ ಸಂಗ್ರಹವಾದ ಜಿಎಸ್ ಟಿ ಮೊತ್ತ ಎಷ್ಟು ಗೊತ್ತಾ?

ನವದೆಹಲಿ : ಹಣಕಾಸು ಇಲಾಖೆ ಜಿಎಸ್‌ಟಿ ಸಂಗ್ರಹದ ಮಾಹಿತಿ ಬಿಡುಗಡೆ ಮಾಡಿದ್ದು, ಜೂನ್ ತಿಂಗಳಲ್ಲಿ ಒಟ್ಟು…

ಶ್ರೀಮಂತರ ಪಟ್ಟಿಯಲ್ಲಿ ಕೆಳಕ್ಕೆ ಇಳಿದ ಮುಖೇಶ್ ಅಂಬಾನಿ!

ಮುಂಬಯಿ : ಫೋರ್ಬ್ಸ್ ಪಟ್ಟಿಯಲ್ಲಿ ಹಿಂದಕ್ಕೆ ಬಿದ್ದಿರುವ ಭಾರತೀಯ ಉದ್ಯಮಿ ಮುಖೇಶ್ ಅಂಬಾನಿ ಅವರು 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.