ಲಖನೌ : ದೇಶದಲ್ಲಿ ಸದ್ಯ ಹತ್ರಾಸ್ ಬಾಲಕಿಯ ಅತ್ಯಾಚಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಿದೆ.

ಅತ್ಯಾಚಾರ ಹಾಗೂ ಹತ್ಯೆಗೀಡಾದ ಸಂತ್ರಸ್ತೆಯ ರಕ್ತ ಸಂಬಂಧಿ ಮತ್ತು ಮುಖ್ಯ ಆರೋಪಿ ಸಂದೀಪ್ ಠಾಕೂರ್ ನಡುವೆ 100 ಬಾರಿ ಕರೆ ಮಾಡಿ ಮಾತನಾಡಿರುವುದು ತಿಳಿದು ಬಂದಿದೆ. 

ಬಾಲಕಿಯ ಸಹೋದರ ಮತ್ತು ಮುಖ್ಯ ಆರೋಪಿ ಸಂದೀಪ್ ಠಾಕೂರ್ ಅವರ ಹೆಸರಿನಲ್ಲಿ ನೋಂದಾಯಿಸಲಾದ ದೂರವಾಣಿ ಸಂಖ್ಯೆಯಿಂದ ಅಕ್ಟೋಬರ್ 2019 ಮತ್ತು ಮಾರ್ಚ್ 2020ರ ನಡುವೆ 100 ಬಾರಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. 

ಹತ್ರಾಸ್ ಜಿಲ್ಲೆಯ ಬೂಲ್ಗರಿ ಗ್ರಾಮದಲ್ಲಿ ತಾಯಿಯೊಂದಿಗೆ ಹೊಲಕ್ಕೆ ಹೋಗಿದ್ದ ಬಾಲಕಿಯನ್ನು ಪಾಪಿಗಳು ಹೊತ್ತೊಯ್ದು ಅತ್ಯಾಚಾರ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದು ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಜೆಎಲ್ ಎನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳ. 

ಆಗ್ರಾದ ಎಫ್‌ ಎಸ್‌ ಎಲ್ ನೀಡಿದ ವರದಿಯನ್ನು ಉಲ್ಲೇಖಿಸಿ ಪೊಲೀಸರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿಲ್ಲ ಎಂದು ಹೇಳಿದ್ದರು. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

You May Also Like

ಈ ಮಹಿಳಾ ಪೇದೆಯ ಧೈರ್ಯಕ್ಕೆ ಇಡೀ ದೇಶವೇ ತಲೆ ಬಾಗುತ್ತಿದೆ!

ಹೈದರಾಬಾದ್ : ಚಲಿಸುತ್ತಿದ್ದ ರೈಲಿನಿಂದ ಕಾಲುಜಾರಿ ಬೀಳುತ್ತಿದ್ದ ವ್ಯಕ್ತಿಯನ್ನು ಮಹಿಳಾ ಪೊಲೀಸರೊಬ್ಬರು ಕಾಪಾಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಕಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಕೊರೊನಾದ ಮಧ್ಯೆಯೂ ಸಂಗ್ರಹವಾದ ಜಿಎಸ್ ಟಿ ಮೊತ್ತ ಎಷ್ಟು ಗೊತ್ತಾ?

ನವದೆಹಲಿ : ಹಣಕಾಸು ಇಲಾಖೆ ಜಿಎಸ್‌ಟಿ ಸಂಗ್ರಹದ ಮಾಹಿತಿ ಬಿಡುಗಡೆ ಮಾಡಿದ್ದು, ಜೂನ್ ತಿಂಗಳಲ್ಲಿ ಒಟ್ಟು…

ಜಗತ್ತಿನಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 2.33 ಲಕ್ಷ

ಲಂಡನ್ : ಜಗತ್ತಿನಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. ಈ ಮಹಾಮಾರಿಗೆ 2.33 ಲಕ್ಷ ಜನ ಬಲಿಯಾಗಿದ್ದಾರೆ.…

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಜ.28 ರಂದು ಮಸ್ಕಿಯಲ್ಲಿ ಪ್ರತಿಭಟನೆ.

ವರದಿ: ವಿಠಲ ಕೆಳೂತ್ ಮಸ್ಕಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ…