ನವದೆಹಲಿ : ಹಣಕಾಸು ಇಲಾಖೆ ಜಿಎಸ್‌ಟಿ ಸಂಗ್ರಹದ ಮಾಹಿತಿ ಬಿಡುಗಡೆ ಮಾಡಿದ್ದು, ಜೂನ್ ತಿಂಗಳಲ್ಲಿ ಒಟ್ಟು ರೂ. 90,918 ಕೋಟಿ ಸಂಗ್ರಹವಾಗಿದೆ ಎಂದು ಹೇಳಿದೆ.
ಲಾಕ್‌ಡೌನ್‌ ಪರಿಣಾಮದಿಂದ ಏಪ್ರಿಲ್ ನಲ್ಲಿ ರೂ. 32,294 ಕೋಟಿ, ಹಾಗೂ ಮೇ ತಿಂಗಳಿನಲ್ಲಿ ರೂ. 62,009 ಕೋಟಿ ಜಿಎಸ್ ಟಿ ಸಂಗ್ರಹವಾಗಿದೆ. ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ವೇಗ ಪಡೆದುಕೊಳ್ಳುತ್ತಿದ್ದು ಜೂನ್ ನಲ್ಲಿ ಜಿಎಸ್‌ಟಿ ಸಂಗ್ರಹ ಗಣನೀಯವಾಗಿ ಸುಧಾರಿಸಿದೆ.
ಕೇಂದ್ರದ ಜಿಎಸ್‌ಟಿ ರೂ. 18,980 ಕೋಟಿ, ರಾಜ್ಯದ ಜಿಎಸ್‌ಟಿ ರೂ. 23,970 ಹಾಗೂ ಆಮದು ವಸ್ತುಗಳ ಮೇಲಿನ ಜಿಎಸ್‌ಟಿ ರೂ. 15,709 ಕೋಟಿ ಒಳಗೊಂಡಂತೆ ಐಜಿಎಸ್‌ಟಿ ರೂ. 40,302 ಕೋಟಿ, ರೂ. 7,655 ಕೋಟಿ ಸೆಸ್ ಸಂಗ್ರಹ ಸೇರಿದಂತೆ ಜೂನ್ ತಿಂಗಳಲ್ಲಿ ರೂ. 90,918 ಕೋಟಿ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಐಜಿಎಸ್‌ಟಿಯಿಂದ ಸಂಗ್ರವಾದ ತೆರಿಗೆಯಲ್ಲಿ ರೂ. 11,117 ಕೋಟಿ ಹಣವನ್ನು ರಾಜ್ಯ ಸರ್ಕಾರಗಳಿಗೆ ಕೇಂದ್ರ ನೀಡಲಿದೆ. ಒಟ್ಟು ಜೂನ್ ತಿಂಗಳ ಒಟ್ಟು ವ್ಯವಹಾರದ ಬಳಿಕ ಕೇಂದ್ರ ರೂ. 32,305 ಕೋಟಿ ಹಾಗೂ ರಾಜ್ಯಗಳು ರೂ. 35,087 ಕೋಟಿ ಪಾಲು ಹೊಂದಿವೆ.
ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಲು ಸರ್ಕಾರ ಸಮಯಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಏಪ್ರಿಲ್, ಮಾರ್ಚ್ ಮತ್ತು ಫೆಬ್ರವರಿ ಕೆಲವು ರಿಟರ್ನ್ಸ್ ಜುಲೈನಲ್ಲಿ ಪಾವತಿಯಾಗುವ ಸಾಧ್ಯತೆಗಳಿದೆ.
ಕರ್ನಾಟಕದಲ್ಲಿ 2019ರ ಜೂನ್‌ ತಿಂಗಳಲ್ಲಿ ರೂ. 6,659 ಕೋಟಿ ಸಂಗ್ರಹವಾಗಿದ್ದರೆ ಈ ವರ್ಷದ ಜೂನ್‌ನಲ್ಲಿ ಶೇ.1 ರಷ್ಟು ಹೆಚ್ಚಳವಾಗಿದ್ದು ರೂ. 6,710 ಕೋಟಿ ಸಂಗ್ರಹವಾಗಿದೆ.

Leave a Reply

Your email address will not be published.

You May Also Like

ಬೆಳಗಾವಿ ಹಾಗೂ ಹಾಸನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಹಾಗೂ ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಕೆ.ಗೋಪಾಲಯ್ಯ ಅವರು ಹಾಸನ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಗೊಂಡಿದ್ದಾರೆ.

ಕೊರೋನಾ ಕಾವ್ಯ-6

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಸಾಹಿತಿ ಎ.ಎಸ್.ಮಕಾನದಾರ್ ಕರಕಲಾದ ಕಾನನದಲ್ಲಿಯೂ ಕೊಸ ಗರಿಕೆಯನ್ನು ಕಾಣುವ ಕನಸುಗಾರನ ಭಾವ ಈ ಕಾವ್ಯದಲ್ಲಿ ಮೂಡಿದೆ.

ಸುಕ್ಕಾ ಹೊಡದ್ ಒಂಚೂರು ಉಪ್ಪಿನಕಾಯಿ ಒಳಗೋದ ಕೂಡ್ಲೆ ಏನಾತಂತೀರಿ…!

ಹೊಗ್ಗೋ ನಿನ್ನ ತಲಿ ದಿಮ್ ಹಿಡದಂಗಾಗಿ ಹ್ಯಂಗ್ಯಂಗರ ಮಾತಾಡಾಕತ್ತಿನಿ ಅನಸಾಕತ್ತೈತಿ ನಂಗ. ಅಯ್ಯೋ ನಂಗು ಹಂಗಾ ಅನಾಸಾಕತ್ತೈತಿ. ತಲಿ ದಿಮ್ಮಿನ ವಿಷಯ ಹೋಗ್ಲಿ ಹ್ಯಾಂಗಿತ್ತು ಮೊದಲ ದಿನದ ಅನುಭವ….!