ನವದೆಹಲಿ : ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಅವರ ಕಾಲೆಳೆಯುವ ಕಾರ್ಯವನ್ನು ನೆಟ್ಟಿಗರು ಮಾಡುತ್ತಿದ್ದಾರೆ.    

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ 41ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀನಾಯ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್‌ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, 20 ಓವರ್‌ ಗಳಲ್ಲಿ 9 ವಿಕೆಟ್ ಕಳೆದುಕೊಂಡು 114 ರನ್‌ ಗಳಿಸಿತ್ತು. ಆದರೆ, ಒಂದು ವಿಕೆಟ್ ಪಡೆಯುವಲ್ಲಿ ಕೂಡ ಚೆನ್ನೈ ವಿಫಲವಾಗಿತ್ತು. ಅಲ್ಲದೇ, ಭರ್ಜರಿ ಬ್ಯಾಟಿಂಗ್ ಮಾಡಿದ್ದ ಮುಂಬಯಿ ತಂಡ, ಇಶಾನ್‌ ಕಿಶಾನ್‌ (68) ಹಾಗೂ ಕ್ವಿಂಟನ್‌ ಡಿ ಕಾಕ್‌(46) ರನ್ ಗಳಿಗೆ ಭರ್ಜರಿಯಾಗಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಏರಿದೆ. 

ಹೀಗಾಗಿ ಧೋನಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿಯೇ ದೊಡ್ಡ ಸೋಲು ಅನುಭವಿಸಿದ್ದಾರೆ ಎಂದು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. 

ಆದರೆ, ಚೆನ್ನೈ ಫ್ರಾಂಚೈಸಿ ಫ್ಲೇ ಆಫ್‌ ಹಾದಿ ಸಂಪೂರ್ಣವಾಗಿ ಬಂದ್ ಆಗಿದೆ. ಆಡಿದ 11 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಜಯ ಗಳಿಸಿದೆ. 13 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಧೋನಿ ನಾಕೌಟ್‌ ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. 

ಮಾಡು ಇಲ್ಲವೆ ಮಡಿ ಪರಿಸ್ಥಿತಿಯಲ್ಲಿ ಆಡಿದ ಚೆನ್ನೈ ಸೂಪರ್‌ ಕಿಂಗ್ಸ್ ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆರಂಭ ಪಡೆದಿದೆ. ದಾಖಲೆಯ ಗೆಲುವು ದಾಖಲಿಸಿರುವ ಮುಂಬಯಿ ತಂಡ, ಮೊದಲ ಸ್ಥಾನಕ್ಕ ಜಿಗಿಯಿತು. ಅಲ್ಲದೇ, 14 ಅಂಕಗಳನ್ನೇ ಪಡೆದಿರುವ ದೆಹಲಿ ಹಾಗೂ ಬೆಂಗಳೂರು ತಂಡ ಎರಡು ಹಾಗೂ ಮೂರನೇ ಸ್ಥಾನಕ್ಕೆ ಏರಿವೆ. 

Leave a Reply

Your email address will not be published. Required fields are marked *

You May Also Like

ಕ್ಯಾಪ್ಟನ್ ಕೂಲ್ ಗೆ ಕ್ರೀಕೆಟ್ ದಿಗ್ಗಜರ ಅಭಿನಂದನೆ

ಕ್ರೀಕೆಟ್ ನಲ್ಲಿ ಭಾರತದ ಸಾಧನೆಯನ್ನು ಹೆಚ್ಚಿಸಿದ ಕೀರ್ತಿ ಎಂ.ಎಸ್.ಧೋನಿ ಅವರಿಗೆ ಸಲ್ಲುತ್ತದೆ. ಇತ್ತಿಚೆಗಷ್ಟೆ ವೃತ್ತಿ ಜೀವನಕ್ಕೆ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದ ಧೋನಿ ನಡೆಯಿಂದ ಅಭಿಮಾನಿಗಳಿಗೆ ಬೇಸರ ಮೂಡಿತ್ತು. ಧೋನಿ ಕ್ರೀಡಾ ಸಾಧನೆ ಬಗ್ಗೆ ಬಿಸಿಸಿಐ ಮೆಚ್ಚುಗೆ ವ್ಯಕ್ತ ಪಡಿಸಿದೆ.

ಡ್ಯಾರೆನ್ ಜನಾಂಗೀಯ ನಿಂದನೆಗೆ ಒಳಗಾಗಿದ್ದು ಸತ್ಯವೇ?

ಹೈದರಾಬಾದ್:  ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದೆ ಎಂದು ವೆಸ್ಟ್…

ದೇಶದ ಅತ್ಯನ್ನತ ಕ್ರೀಡಾ ಪ್ರಶಸ್ತಿಗಳ ಪಟ್ಟಿ ಪ್ರಕಟ

ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರಗಳಾದ ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ, ದ್ರೋಣಾಚಾರ್ಯ, ಧ್ಯಾನ್ ಚಂದ್, ತೇನ್ ಸಿಂಗ್ ರಾಷ್ಟ್ರೀಯ ಸಾಹಸ ಕ್ರೀಡೆ ಪ್ರಶಸ್ತಿಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸೇರಿದಂತೆ ಹಲವರು ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬಹುದಾದ ತಂಡ ಕೈಬಿಟ್ಟಿದ್ದಕ್ಕೆ ನಾಯಕ ಹೇಳಿದ್ದೇನು?

ದುಬೈ : ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬೇಕಾದ ಪಂದ್ಯವನ್ನು ಹೈದ್ರಾಬಾದ್ ಕೈ ಚೆಲ್ಲಿದೆ. ಹೀಗಾಗಿ ಟೀಕೆಗಳು ವ್ಯಕ್ತವಾಗುತ್ತಿವೆ.