ಹುಬ್ಬಳ್ಳಿ: ಇದೇ 28 ರಂದು ನಡೆಯಲಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷದಿಂದ ಡಾ. ಆರ್.ಎಂ ಕುಬೇರಪ್ಪ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರು ಶಿಕ್ಷಕರ ಸಮಸ್ಯೆಗಳನ್ನ ಬಗೆಹರಿಸಲು ಯೋಗ್ಯ ಅಭ್ಯರ್ಥಿಯಾಗಿದ್ದಾರೆ ಎಂದು ಶಾಸಕ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಎಚ್.ಕೆ.ಪಾಟೀಲ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಪದವೀಧರರ ಕ್ಷೇತ್ರ ಅತ್ಯಂತ ಪ್ರಜ್ಞಾವಂತರ ಕ್ಷೇತ್ರವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ನಿಶ್ಚಿತವಾಗಿದೆ. ಕ್ಷೇತ್ರದ ನಾಲ್ಕೂ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಪದವೀಧರರ ಹಾಗೂ ಪ್ರಜ್ಞಾವಂತರ ಅಭಿಪ್ರಾಯವನ್ನ ಸಂಗ್ರಹ ಮಾಡಿದ್ದೇವೆ ಎಂದರು.

ಕೇಂದ್ರ ಸರ್ಕಾರದ 2 ಕೋಟಿ ಉದ್ಯೋಗಾವಕಾಶ ಭರವಸೆ ಎಲ್ಲಿ ಹೋಯ್ತು?, ಕೇಂದ್ರ ಸರ್ಕಾರದ ಹುಸಿ ಭರವಸೆಗಳು ಜನಸಾಮಾನ್ಯರಲ್ಲಿ ಬೇಸರ ತರಿಸಿದೆ.

ಜನರಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಇರುವ ಆಶಾ ಭಾವನೆ ಕಿತ್ತು ಹೋಗಿದೆ. ಈಗ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಪರಿಸ್ಥಿತಿಯನ್ನು ನೋಡಿ  ಕಾಂಗ್ರೆಸ್ ಪಕ್ಷದ ಬಗ್ಗೆ ಜನತೆಯಲ್ಲಿ ಒಲವು ಜಾಸ್ತಿಯಾಗುತ್ತಿದೆ ಎಂದರು.

Leave a Reply

Your email address will not be published. Required fields are marked *

You May Also Like

ಕುಂಟೋಜಿ ಗ್ರಾಮದಲ್ಲಿ ಸಾಮೂಹಿಕ ವಿವಾಹ

ಸಾಮೂಹಿಕ ವಿವಾಹಗಳಿಂದ ಸಮಾನತೆ ಸಾರುವುದರ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ. ನವಜೋಡಿಗಳು ಆದರ್ಶ ದಂಪತಿಗಳಾಗಿ ಚಿಕ್ಕ ಹಾಗೂ ಚೊಕ್ಕ ಸಂಸಾರ ನಡೆಸಿ, ಮುಂದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ, ಸಂಸ್ಕಾರ ನೀಡುವ ಸಂಕಲ್ಪ ಮಾಡಬೇಕು ಎಂದು ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.

ಮದ್ಯಕ್ಕೆ ಕೊಡುವ ಪ್ರೋತ್ಸಾಹ ವಿದ್ಯೆಗೆ ನೀಡಿ- ಗುರುಶಾಂತ ಸ್ವಾಮೀಜಿ

ವರದಿ: ಗುಲಾಬಚಂದ ಜಾಧವ ಆಲಮಟ್ಟಿ : ಬಹಳಷ್ಟು ಯುವಕರ ಮನಸ್ಥಿತಿಯಿಂದು ಕೆಟ್ಟು ಹೋಗುತ್ತಲ್ಲಿದೆ. ದುಷ್ಚಟಗಳ ದಾಸರಾಗಿ…

ಎಂಎಚ್ಎಂ ಶಾಲೆಯಲ್ಲಿ ಸ್ನೇಹ ಸಮ್ಮೇಳನ ಸಂಭ್ರಮ ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪಗೆ ಭಾರತರತ್ನ ಪ್ರಶಸ್ತಿ ನೀಡಿ

ಚಿತ್ರವರದಿ : ಗುಲಾಬಚಂದ ಜಾಧವಆಲಮಟ್ಟಿ(ವಿಜಯಪುರ ಜಿಲ್ಲೆ) : ಉತ್ಕಟ ಕಾಯಕದ ತತ್ವ ಶಾಸ್ತ್ರ ಪರಿಪಾಲಿಸಿ ಶರಣ…

ಮಧುಮಗನ ತಾಯಿಗೆ ಕೊರೊನಾ ಪಾಸಿಟಿವ್ ಮದುವೆ ರದ್ದು

ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ನಡೆಯಬೇಕಿದ್ದ ಮದುವೆ ಯನ್ನು ಗುಳೇದಗುಡ್ಡ ತಾಲೂಕು ಆಡಳಿತದ ಅಧಿಕಾರಿಗಳು…