ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ನಡೆಯಬೇಕಿದ್ದ ಮದುವೆ ಯನ್ನು ಗುಳೇದಗುಡ್ಡ ತಾಲೂಕು ಆಡಳಿತದ ಅಧಿಕಾರಿಗಳು ರದ್ದು ಮಾಡಿಸಿದ್ದಾರೆ,
ಗುಳೇದಗುಡ್ಡ ಪಟ್ಟಣದ ಯುವತಿ ಬಳ್ಳಾರಿ ಜಿಲ್ಲೆಯ ಯುವಕನ ಜೊತೆ ಇಂದು ಮದುವೆ ನಡೆಯಬೇಕಿತ್ತು, ಆದ್ರೆ ಯುವಕನ ತಾಯಿಗೆ ಕೊರೊನಾ ಪಾಸಿಟಿವ್ ಇದೆ ಎನ್ನುವ ಮಾಹಿತಿ ಇದೆ, ಅವರು ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,
ಇತ್ತ ಮದುವೆಯ ಯುವಕ ಹಾಗೂ ಸಂಬಂಧಿಕರು ಸೇರಿ ಬಳ್ಳಾರಿ ಯಿಂದ ಬಸ್ ತೆಗೆದುಕೊಂಡು ಮದುವೆಗೆ ಬಂದಿದ್ದರು ಈ ವಿಷಯ ತಿಳಿದು ರಾತ್ರಿಯೇ ಗುಳೇದಗುಡ್ಡ ತಾಲ್ಲೂಕು ಆಡಳಿತ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮದುವೆಯನ್ನು ರದ್ದು ಮಾಡಿಸಿ ಬಂದವರನ್ನು ವಾಪಸು ಕಳುಹಿಸಿದ್ದಾರೆ, ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಗಳು ದಿನೇ ದಿನೇ ಹೆಚ್ಚಾಗಿದ್ದು ಇನ್ನೊಂದು ಅವಾಂತರ ತಪ್ಪಿದಂತಾಗಿದೆ, ಬಾಗಲಕೋಟೆ ನಗರದಲ್ಲಿ ಇತ್ತೀಚೆಗೆ ಅಷ್ಟೇ ಮದುವೆಯ ಆರತಕ್ಷತೆ ನಡೆದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ.

Leave a Reply

Your email address will not be published. Required fields are marked *

You May Also Like

ಇಂಧನ ಬೆಲೆ ಏರಿಕೆ ಖಂಡಿಸಿ ಕರವೇಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ದೇಶದಲ್ಲಿ ಇಂಧನ ಬೆಲೆ, ವಿದ್ಯುತ್ ಬೆಲೆ ಏರಿಕೆಯನ್ನು ಖಂಡಿಸಿ, ಶೀಘ್ರವಾಗಿ ಬೆಲೆ ಏರಿಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ) ಬಣದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪೆಟ್ರೋಲ್ ಟ್ಯಾಕ್ಸ ಇಳಿಸಿದ ಸರ್ಕಾರ

ಪೆಟ್ರೋಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡು ಪ್ರತಿ ಲೀ. ದರ 100 ರು ಗಡಿ ದಾಟಿದ್ದು, ವಾಹನ ಸವಾರರ ಆಕ್ರೋಶಕ್ಕೆ ಮಣಿದ ರಾಜಸ್ಥಾನ ಸರ್ಕಾರವು ತೆರಿಗೆ ಇಳಿಕೆ ಮಾಡಿದೆ.

ಚುನಾವಣೆ ಮುಂದೂಡಲು ಸರ್ಕಾರದ ಹುನ್ನಾರ: ತಾಪಂ ರದ್ದು ವಿಚಾರಕ್ಕೆ ಶಾಸಕ ಎಚ್.ಕೆ. ಪಾಟೀಲ ಕಿಡಿ

ರಾಜ್ಯ ಸರ್ಕಾರ ತಾಲೂಕು ಪಂಚಾಯತಿಯನ್ನು ರದ್ದು ಪಡಸಲು ಮುಂದಾಗಿದ್ದು, ಸAವಿಧಾನದಲ್ಲಿ ತಿದ್ದುಪಡಿಯಾಗಿದ್ದನ್ನು ರಾಜ್ಯ ಸರಕಾರ ರದ್ದು ಪಡಿಸೋಕೆ ಬರುವದಿಲ್ಲ. ಆದರೆ ಯಾವ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲ್ ಪ್ರಶ್ನಿಸಿದರು.