ಗಜೇಂದ್ರಗಡ: ಸಾಮೂಹಿಕ ವಿವಾಹಗಳಿಂದ ಸಮಾನತೆ ಸಾರುವುದರ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ. ನವಜೋಡಿಗಳು ಆದರ್ಶ ದಂಪತಿಗಳಾಗಿ ಚಿಕ್ಕ ಹಾಗೂ ಚೊಕ್ಕ ಸಂಸಾರ ನಡೆಸಿ, ಮುಂದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ, ಸಂಸ್ಕಾರ ನೀಡುವ ಸಂಕಲ್ಪ ಮಾಡಬೇಕು ಎಂದು ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.
ಸಮೀಪದ ಕುಂಟೋಜಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರರ ೫೬ನೇ ವರ್ಷದ ಮಹಾ ಪುರಾಣ, ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಆಶಿರ್ವಚನ ನೀಡಿದರು. ನಮ್ಮ ಸಂಸ್ಕ್ರತಿ -ಸಂಸ್ಕಾರಗಳನ್ನು ಅನುಸರಿಸುವ ಮೂಲಕ ಸತಿ-ಪತಿಗಳು ಪರಸ್ಪರ ಅರಿತುಕೊಂಡು ಜೀವನ ನಡೆಸಬೇಕು ಎಂದರು.
ಮಾಜಿ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಗ್ರಾಮದಲ್ಲಿ ಹಲವು ವರ್ಷಗಳಿಂದ ಎಲ್ಲರೂ ಒಂದಾಗಿ ಶರಣರ ಪುರಾಣ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ಎಲ್ಲರೂ ಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.
ಚಳಗೇರಿಯ ವೀರಸಂಗಮೇಶ್ವರ ಸ್ವಾಮೀಜಿ, ಯಲಬುರ್ಗಾ ಸಿದ್ದರಾಮೇಶ್ವರ ಮಠದ ಸಿದ್ದರಾಮೇಶ್ವರ ಸ್ವಾಮೀಜಿ, ಯಲಬುರ್ಗಾ ಶ್ರೀಧರ ಮುರಡಿ ಮಠದ ಬಸವಲಿಂಗೇಶ್ವರ ಸ್ವಾಮೀಜಿ, ಜಿಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ, ಬಾದಿಮನಾಳ ಶಿವಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಅಂದಪ್ಪ ಬಿಚ್ಚೂರ, ಹೆಚ್.ಎಸ್.ಸೋಂಪುರ, ಪ್ರಶಾಂತ ರಾಠೋಡ, ವೀರಣ್ಣ ಕಾರಡಗಿಮಠ, ಕುಮಾರ ಹಿರೇಮಠ, ಶರಣಪ್ಪ ಕತ್ತಿ, ಮುತ್ತಪ್ಪ ಗೋನಾಳ, ಮಲ್ಲಯ್ಯ ಹಿರೇಮಠ, ತೋಟಯ್ಯ ಹಿರೇಮಠ, ಹೇಮಂತ ಪೂಜಾರ, ಬಸಪ್ಪ ಚೂಟಿ ಇದ್ದರು.

Leave a Reply

Your email address will not be published. Required fields are marked *

You May Also Like

ಸ್ಟೋನ್ ಕ್ರಷರ್ ನಿಂದಾಗುತ್ತಿರುವ ತೊಂದರೆ ತಪ್ಪಿಸಿ: ಲಕ್ಷ್ಮೇಶ್ವರದಲ್ಲಿ ರೈತರ ಮನವಿ

ಲಕ್ಷ್ಮೇಶ್ವರ: ತಾಲೂಕಿನ ಆದರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋಗಿಹಾಳ ಗ್ರಾಮದಲ್ಲಿ ನಡೆಯುತ್ತಿರುವ ವನಶ್ರೀ ಸ್ಟೋನ್ ಕ್ರಷರ್‌ನಿಂದ…

ಗಜೇಂದ್ರಗಡ ಮಾರುಕಟ್ಟೆಯಲ್ಲಿ ಜಮಜಂಗುಳಿ: ಕೋವಿಡ್ ಗೆ ಕ್ಯಾರೆ ಇಲ್ಲ..!

ಕೋವಿಡ್ 2ನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಆದರೆ ಕೋಟೆ ನಾಡಿನಲ್ಲಿ ಯಾವುದೇ ಮುಂಜಾಗ್ರತಾ ತೆಗೆದುಕೊಳ್ಳದೇ ಸಾರ್ವಜನಿಕರು ಗುಂಪು ಗುಂಪಾಗಿ ಮೈಮರೆತು ಓಡಾಡುತ್ತಿರುವ ದೃಶ್ಯ ಮಂಗಳವಾರ ಕಂಡು ಬಂದಿತು.

ಲಕ್ಷ್ಮೇಶ್ವರದಲ್ಲಿ ಹತ್ತಿ ಗಿರಣಿಗೆ ಬೆಂಕಿ: ಲಕ್ಷಾಂತರ ರೂ. ಹಾನಿ..!

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹತ್ತಿ ಗಿರಣಿಗೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹತ್ತಿ, ಬೆಂಕಿಗೆ ಆಹುತಿಯಾದ ಘಟನೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಎಟಿಎಂ ಕಳೆದ್ರೆ ಚಿಂತಿಸದಿರಿ, ನೀವು ಮಾಡಬೇಕಾಗಿದ್ದು ಏನು ಗೊತ್ತಾ?

ಅದೆಷ್ಟೋ ಜನ ಎಟಿಎಂ ಕಾರ್ಡ್ಗಳನ್ನು ಕಳೆದುಕೊಂಡು ಪರಿತಪಿಸಿದ್ದುಂಟು. ಮಾನಸಿಕ ನೆಮ್ಮದಿ ಕಳೆದುಕೊಂಡು ಇನ್ನಿಲ್ಲದೇ ಚಿಂತಿಸಿದ್ದುಂಟು. ಆದ್ರೆ ಇದೀಗ ಎಟಿಎಂ ಕಾರ್ಡ್ ಕಳೆದೊಯ್ತು ಅಂತ ಚಿಂತಿಸುವ ಅವಶ್ಯಕತೆ ಇಲ್ಲ. ನಿಮ್ಮ ಚಿಂತೆಗೊಂದು ಪರಿಹಾರ ಇಲ್ಲಿದೆ.