ನವದೆಹಲಿ:  ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಕಡಿಮೆಯಾಗಿರುವ ಸಂತಸ ಹಂಚಿಕೊಂಡಿದ್ದಾರೆ. 

ಜನತಾ ಕರ್ಫ್ಯೂ ನಂತರ ಸಾಕಷ್ಟು ಕಷ್ಟಗಳನ್ನು ಜನರು ಅನುಭವಿಸಿದ್ದಾರೆ. ಈ ಸಂಕಷ್ಟದ ನಡುವೆಯೂ ಜನರು ತಮ್ಮ ಬದುಕಿಗಾಗಿ ಹೊರ ಬರುತ್ತಿದ್ದಾರೆ. ದೇಶದಲ್ಲಿ ಸದ್ಯಕ್ಕೆ ಲಾಕ್ ಡೌನ್ ತೆರವಾಗಿರಬಹುದು. ಆದರೆ, ವೈರಸ್ ತೊಲಗಿಲ್ಲ. ಕಳೆದ ಎಂಟು ದಿನಗಳಿಂದ ಕಾಪಾಡಿಕೊಂಡ ಸ್ಥಿತಿಯನ್ನೇ ದೇಶದ ಜನರು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಮನವಿ ಮಾಡಿದ್ದಾರೆ.

ದೇಶದಲ್ಲಿ ಕೊರೊನಾ ಗುಣಮುಖ ಪ್ರಮಾಣ ಶೇ. 83ರಷ್ಟಕ್ಕೆ ಬಂದು ನಿಂತಿದೆ. ಅಭಿವೃದ್ಧಿ ರಾಷ್ಟ್ರಗಳಲ್ಲಿ ಕೊರೊನಾ ಮರಣ ಪ್ರಮಾಣ ಹೆಚ್ಚಿದ್ದಿರೂ ನಮ್ಮಲ್ಲಿ ಮಾತ್ರ ಗಣನೀಯ ಇಳಿಕೆ ಕಂಡಿದೆ. ದೇಶದಲ್ಲಿ 2 ಸಾವಿರ ಲ್ಯಾಬ್ ಗಳಲ್ಲಿ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. 90 ಲಕ್ಷದಷ್ಟು ಬೆಡ್ ಗಳ ವ್ಯವಸ್ಥೆ ಇದೆ. ಸರ್ಕಾರ, ನಾಗರಿಕರನ್ನು ಉಳಿಸುವ ವಿಷಯದಲ್ಲಿ ತುಂಬಾ ಶ್ರಮ ವಹಿಸುತ್ತಿದೆ. ಆದರೆ, ಜನರು ಮಾತ್ರ ಬೇಜವಾಬ್ದಾರಿತನ ಪ್ರದರ್ಶಿಸಬಾರದು ಎಂದು ಮನವಿ ಮಾಡಿದ್ದಾರೆ. 

ಇನ್ನೂ ಕೊರೊನಾಗೆ ಲಸಿಕೆ ಸಿಕ್ಕಿಲ್ಲ. ಹೀಗಾಗಿ ಜನರು ಈ ಸಂದರ್ಭದಲ್ಲಿಯೇ ಖುಷಿ ಪಡುವುದು ಸರಿಯಲ್ಲ. ಕೆಲಸ ಪೂರ್ಣವಾಗದೇ ಸಂತೋಷಪಡುವುದು ಉತ್ತಮವಲ್ಲ. ಸದ್ಯ ಸಾಲು ಸಾಲು ಹಬ್ಬಗಳು ಬರುತ್ತಿವೆ. ಈ ಸಂದರ್ಭದಲ್ಲಿ ಜಾಗೃತಿಯಿಂದ ಹಬ್ಬ ಆಚರಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕೊರೊನಾ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಮನವಿ ಮಾಡಿದ ಅವರು, ದೇಶದ ಜನತೆಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

You May Also Like

ಕನ್ನಡ ರಾಜ್ಯೋತ್ಸವ ದಿನದಂದ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಲು ಮುಂದಾದ ಮಹಾರಾಷ್ಟ್ರ ಸಚಿವರು!

ಬೆಳಗಾವಿ : ರಾಜ್ಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ತಯಾರಿ ನಡೆದಿದೆ. ಆದರೆ, ಮಹಾರಾಷ್ಟ್ರ ಸರ್ಕಾರ, ಇದನ್ನು ವಿರೋಧಿಸುವ ಪ್ರಯತ್ನ ನಡೆಸುತ್ತಿದೆ.

ರಾಜ್ಯದಲ್ಲಿ ಇನ್ನೂ ಎಷ್ಟು ತಿಂಗಳು ಇರಲಿದೆ ಅಪಾಯ!

ಬೆಂಗಳೂರು: ರಾಜ್ಯಕ್ಕೆ ಇನ್ನೂ ಮೂರು ತಿಂಗಳು ಮಹಾ ಆಪತ್ತು ಕಾದಿದೆ ಎಂಬ ಸ್ಫೋಟಕ ಸತ್ಯವೊಂದು ತಜ್ಞರಿಂದ…

ಲಡಾಖ್‍ನಲ್ಲಿ ಪ್ರಧಾನಿ ಮೋದಿ ತೆರೆಯಿತೆ ಲಡಾಯಿಯ ಹಾದಿ?

ಜೂನ್ 15ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸಂಘರ್ಷ ವಲಯಗಳಾದ ಲಡಾಕ್ ಮತ್ತು ಲೇಹ್ ಪ್ರದೇಶಕ್ಕೆ ಇಂದು ಭೇಟಿ ನೀಡಿ, ದೇಶದ ಸೈನಿಕ ಪಡೆಗಳಿಗೆ ನೈತಿಕ ಸ್ಥೈರ್ಯ ತುಂಬಿದರು.

ಕೊರೋನಾ ಸೋಂಕಿತ ಮಹಿಳೆ ಸಾವು

ಕೊರೋನಾ ಸೋಂಕಿತ ಮಹಿಳೆ ಸಾವುವಿಜಯಪುರ : ಕೊರೊನಾ ಪೀಡಿತ ಮಹಿಳೆ ಸಾವನ್ನಪ್ಪಿದ ಘಟನೆ ಇಜಯಪುರ ಜಿಲ್ಲೆಯಲ್ಲಿ…