ಬೆಂಗಳೂರು: ರಾಜ್ಯಾದ್ಯಂತ ವಿಪರೀತ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಬೆಂಬಿಡದೆ ಮಳೆ ಸುರಿಯುತ್ತಿದೆ.  

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕೋಡಿ, ಕಲಬುರಗಿ, ಬಾಗಲಕೋಟೆ ಸೇರಿದಂತೆ ಹಲವೆಡೆ ವಿಪರೀತ ಮಳೆಯಾಗಿದ್ದು, 9 ಜನ ಸಾವನ್ನಪ್ಪಿದ್ದಾರೆ. 

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮತ್ತು ಬಳ್ಳಾರಿಯ ಬೈರಾಪುರದಲ್ಲಿ ಸಿಡಿಲಿಗೆ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಕೊಪ್ಪಳದ ಗೆದಗೇರಿ ತಾಂಡಾದಲ್ಲಿ, ವಿಜಯಪುರದ ಹತ್ತಳ್ಳಿಯಲ್ಲಿ, ಬೆಳಗಾವಿಯ ಅಷ್ಟಗಾದಲ್ಲಿ ತಲಾ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಬೆಳಗಾವಿಯ ಚಿಕ್ಕ ಉಳ್ಳಿಗೇರಿಯಲ್ಲಿ ಮರ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯ ಗಣೇಶ ನಗರ ಸಂಪೂರ್ಣ ಜಲಾವೃತವಾಗಿದೆ. ಧಾರವಾಡ ನಗರದಲ್ಲಿ ಸತತ ಎರಡು ಗಂಟೆಗಳ ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ. ನೂರಾರು ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದ್ದಾರೆ. 

ಚಿಕ್ಕೋಡಿಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಹಳ್ಳ- ಕೆರೆಗಳು ತುಂಬಿ ಹರಿಯುತ್ತಿವೆ. ಗದಗ ಜಿಲ್ಲೆಯಲ್ಲಿ ಕೂಡ ವಿಪರೀತ ಮಳೆಯಾಗಿದೆ. ಹಲವು ರಸ್ತೆಗಳು ಸಂಪೂರ್ಣವಾಗಿ ಜಲಾ  ವೃತವಾಗಿವೆ. ರಸ್ತೆಗಳು ಬಂದ್ ಆಗಿವೆ.

Leave a Reply

Your email address will not be published. Required fields are marked *

You May Also Like

ರೋಣ ಎಪಿಎಮ್‌ಸಿ ಅಧ್ಯಕ್ಷರಾಗಿ ರಾಜಣ್ಣ,ಉಪಾಧ್ಯಕ್ಷರಾಗಿ ಶಿವಾನಂದ ಆಯ್ಕೆ

ಕೃಷಿ ಉತ್ಪನ್ನ ಮಾರುಕಟ್ಟೆ(ಕೇಂದ್ರ ಕಚೇರಿ ಹೊಳೆಆಲೂರ) ಸಮಿತಿಯ ಕೊನೆಯ ಅವಧಿಗೆ ನೂತನ ಅಧ್ಯಕ್ಷರಾಗಿ ರೋಣ ರೈತ ಕ್ಷೇತ್ರದ ಸದಸ್ಯ ಅಂದಾನಪ್ಪ ಉರ್ಫ ರಾಜಣ್ಣ ಹೂಲಿ,ಉಪಾಧ್ಯಕ್ಷರಾಗಿ ಹೊಳೆಆಲೂರ ಕ್ಷೇತ್ರದ ಸದಸ್ಯ ಶಿವಾನಂದ ಅರಹುಣಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶ್ರೀ ವೀರೆಶ್ವರ ಪೂಣ್ಯಾಶ್ರಮ ಅಂದಮಕ್ಕಳ ಶಾಲೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ

ಶ್ರೀ ವೀರೆಶ್ವರ ಪೂಣ್ಯಾಶ್ರಮ ಅಂದಮಕ್ಕಳ ಶಾಲೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಶಸ್ತಿ

ಸಾಹಿತ್ಯ ಪರಿಷತ್ತು ಡಿಜಟಲಿಕರಣವಾಗಬೇಕು : ಚನ್ನೆಗೌಡ

ಕನ್ನಡ ಸಾಹಿತ್ಯ ಪರಿಷತ್ತು ಒಂದು ಸಂಸ್ಥೆಯಾಗಿ ಬೆಳೆಯಬೇಕಾಗಿದೆ. ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಚುಣಾಯಿತನಾದರೆ ಸಾಹಿತ್ಯ ಪರಿಷತ್ತನ್ನು ಸಾರ್ವಜನಿಕರಿಗೆ ವಿಶ್ವವಿದ್ಯಾಲಯದಂತೆ ಬೆಳಕು ಚೆಲ್ಲುವ ಕೆಲಸವನ್ನು ಸಾಹಿತ್ಯ ಪರಿಷತ್ತಿನ ಮೂಲಕ ಮಾಡುವೆ ಎಂದು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ವಿ.ಸಿ. ಚನ್ನೇಗೌಡ ಹೇಳಿದರು.