ದುಬೈ : ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡದ ನಾಯಕ ಕೆ.ಎಲ್‌. ರಾಹುಲ್‌ ಅವರು ಭಾರತದ ಪರ ಮತ್ತೊಂದು ದಾಖಲೆ ಬರೆದಿದ್ದಾರೆ.

ಸದ್ಯ ನಡೆಯುತ್ತಿರುವ ಐಪಿಎಲ್ ನಲ್ಲಿ ರಾಹುಲ್ ಅವರು ಹೆಚ್ಚು ರನ್ ಗಳನ್ನು ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಸದ್ಯ 9 ಪಂದ್ಯಗಳನ್ನು ಆಡಿರುವ ರಾಹುಲ್, 525 ರನ್ ಗಳನ್ನು ಗಳಿಸಿದ್ದಾರೆ. ಈ ಮೂಲಕ ರನ್ ಗಳ ಪಟ್ಟಿ ಸತತ ಮೂರು ಐಪಿಎಲ್‌ ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ.

ಅವರ ಹಿಂದಿನ ಸ್ಥಾನವನ್ನು ಅದೇ ತಂಡದ ಮಯಾಂಕ್‌ ಅಗರ್ವಾಲ್ ಪಡೆದಿದ್ದಾರೆ. 393 ರನ್‌ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

2018ರಲ್ಲಿ ರಾಹುಲ್‌ 14 ಪಂದ್ಯಗಳನ್ನು ಆಡುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಹೈದರಾಬಾದ್‌ ಆಟಗಾರ ಕೇನ್‌ ವಿಲಿಯಮ್ಸನ್‌ 17 ಪಂದ್ಯಗಳನ್ನಾಡಿ 735 ರನ್‌ ಬಾರಿಸುವ ಮೂಲಕ ಮೊದಲ ಸ್ಥಾನ ಪಡೆದಿದ್ದರು. 14 ಪಂದ್ಯಗಳನ್ನಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ರಿಷಭ್‌ ಪಂತ್‌ 684 ರನ್‌ ರನ್‌ ಹೊಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದರು.

2019ರ ಐಪಿಎಲ್ ನಲ್ಲಿ ಕೆ.ಎಲ್. ರಾಹುಲ್ 14 ಪಂದ್ಯಗಳಿಂದ 593 ರನ್‌ ಗಳಿಸುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಕಳೆದ ವರ್ಷ ಡೇವಿಡ್‌ ವಾರ್ನರ್‌ 12 ಪಂದ್ಯಗಳಿಂದ 692 ರನ್‌ ಗಳಿಸಿ ಮೊದಲ ಸ್ಥಾನ ಗಳಿಸಿದ್ದರು.

Leave a Reply

Your email address will not be published. Required fields are marked *

You May Also Like

ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿ ಟೂರ್ನಿಯಿಂದ ಹೊರ ನಡೆದ ಚೆನ್ನೈ!

ಅಬುಧಾಬಿ : ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ತನ್ನ ಪಾಲಿನ ಕೊನೆಯ ಪಂದ್ಯವನ್ನು ಗೆಲ್ಲುವುದರ ಮೂಲಕ ಟೂರ್ನಿಯಿಂದ ಹೊರ ಬಿದ್ದಿದ್ದು, ಪಂಜಾಬ್ ತಂಡ ಕೂಡ ಹೊರ ಹೋಗುವಂತೆ ಮಾಡಿದೆ.

ಸೋಲಿನ ಸುಳಿಗೆ ಸಿಲುಕಿದ ಧೋನಿ ವಿರುದ್ಧ ಟೀಕೆಗಳ ಮಹಾಪೂರ!

ಬೆಂಗಳೂರು : ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳಪೆ ಪ್ರದರ್ಶನ ತೋರುತ್ತಿರುವುದಕ್ಕೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ.

ಪ್ರಥಮ ಬಾರಿಗೆ ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಪುರುಷರ ಪಂದ್ಯಾವಳಿ

ಉತ್ತರಪ್ರಭ ಸುದ್ದಿ ರೋಣ: ದ್ರೋಣಾಚಾರ್ಯ ಬ್ಯಾಡ್ಮಿಂಟನ್ ಕ್ಲಬ್ ರೋಣದ ವತಿಯಿಂದ ಪ್ರಥಮ ಬಾರಿಗೆ ರಾಜ್ಯಮಟ್ಟದ ಷಟಲ್…

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆನ್ನೈ ಪುಟಿದೇಳುವುದೇ?

ದುಬೈ : ಚೆನ್ನೈ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಪ್ಲೇ ಆಫ್‌ ಗೆ ಪ್ರವೇಶಿಸಲು ಈ ಪಂದ್ಯವೇ ಚೆನ್ನೈಗೆ ನಿರ್ಣಾಯಕ. ಈ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆದ್ದರಷ್ಟೇ ಚೆನ್ನೈನ ಪ್ಲೇ ಆಫ್ ಕನಸು ಜೀವಂತವಾಗಿ ಉಳಿಯಲಿದೆ.