ಮುಂಬಯಿ : ದಿಲ್ ವಾಲೆ ದುಲ್ಹನಿಯ ಲೇ ಜಾಯೇಂಗೆ ಚಿತ್ರದ ಬಗ್ಗೆ ಮಾತನಾಡಿದರೆ ಸಾಕು, ಪ್ರತಿಯೊಬ್ಬರ ಹೃದಯದಲ್ಲಿನ ಪ್ರೀತಿ ಮತ್ತೆ ಜನ್ಮ ಪಡೆಯುತ್ತದೆ. ಲವ್ ಬಾಯ್ ಆಗಿ ಶಾರೂಖ್ ಖಾನ್ ಅವರ ನಟನೆ, ಕಾಜೋಲ್ ಅವರ ಪ್ರೇಮ ಪ್ರಸಂಗ, ಚಿತ್ರದ ಹಾಡುಗುಳು ಜನರ ಎದೆಯಲ್ಲಿ ಇನ್ನೂ ಹಸಿರ…ಹಸಿರ…ಹಸಿರ….

ಸದ್ಯ ಬಾಲಿವುಡನ್ ನ ಈ ಚಿತ್ರಕ್ಕೆ 25 ವರ್ಷಗಳು ತುಂಬಿವೆ. ಶಾರೂಖ್ ಖಾನ್ ಮತ್ತು ಕಾಜೋಲ್ ಅವರು ನಟಿಸಿರುವ ಈ ಚಿತ್ರ ಇಂದಿಗೂ ಎರ್ ಗ್ರೀನ್ ಆಗಿದೆ. ಸದ್ಯ ಚಿತ್ರ ತಂಡ 25ರ ಸಂಭ್ರಮಾಣಚರಣೆ ಆಚರಿಸುತ್ತಿದೆ.

ಆರಂಭದಲ್ಲಿ ಶಾರೂಖ್ ಖಾನ್ ಅವರು ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿರಲಿಲ್ಲ. ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, ಮದುವೆಯಾಗುವ ಹುಡುಗಿಯನ್ನು ಓಡಿಸಿಕೊಂಡು ಹೋಗುವುದು ಕೂಡ ನೆಗೆಟಿವ್ ಆಗುತ್ತದೆ ಎಂದು ಹೇಳಿದ್ದರಂತೆ. ಆ ನಂತರ ನಿರ್ದೇಶಕರು ಅವರನ್ನು ಒಪ್ಪಿಸಿ ಚಿತ್ರಕ್ಕೆ ಸಿದ್ಧಗೊಳಿಸಿದ್ದರು.

ಆ ನಂತರ ಶಾರೂಖ್ ಅವರು ಈ ಚಿತ್ರದ ಮೂಲಕ ದೊಡ್ಡ ಸ್ಟಾರ್ ಆಗಿ ಮಿಂಚಿದರು. ಕಾಜೋಲ್ ಕೂಡ ಈ ಚಿತ್ರದ ಮೂಲಕ ದೊಡ್ಡ ಹೆಸರು ಮಾಡಿದ್ದರು. ಟಾಪ್ ನಟಿಯರ ಪಟ್ಟಕ್ಕೇರಿದರು.

ಇಂದಿಗೂ ಚಿತ್ರದ ಹಾಡುಗಳು ಜನರ ಮನದಲ್ಲಿ ಹಚ್ಚ ಹಸಿರಾಗಿವೆ. ಸಿನಿಮಾದಲ್ಲಿ ಶಾರೂಖ್ ಹೇಳುವ ಡೈಲಾಗ್ ಗಳು ಸೋಶಿಯಲ್ ಮೀಡಿಯಾದಲ್ಲಿ ಇಂದಿಗೂ ಸದ್ದು ಮಾಡುತ್ತಿವೆ. ಇತ್ತೀಚೆಗೆ ಈ ಚಿತ್ರದ ಕುರಿತು ಮಾತನಾಡಿದ್ದ ಕಾಜೋಲ್, ಕಥೆ ಕೇಳಿದಾಗ ಸಿಮ್ರನ್ ಬೋರಿಂಗ್ ಹುಡುಗಿ ಅನ್ನಿಸಿದಳು. ನಂತರ ಪ್ರತಿಯೊಬ್ಬರಲ್ಲಿಯೂ ಒಬ್ಬ ಸಿಮ್ರನ್ ಇರುತ್ತಾಳೆ. ಸಿಮ್ರನ್ ಹೃದಯದ ಮಾತು ಕೇಳುವ ಹುಡಗಿಯಾಗಿದ್ದು, ಸದಾ ಸತ್ಯ ಹೇಳುತ್ತಿದ್ದರಿಂದ ಆಕೆ ನನಗೆ ಇಷ್ಟವಾದಳು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ನನ್ನ ಮನೆಯನ್ನು ದೇವರೇ ಕಾಪಾಡಬೇಕೆಂದು ನಟ ರವಿಶಂಕರ್ ಹೇಳಿದ್ಯಾಕೆ..?

ಬೆಂಗಳೂರು : ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು ಎಂದು ನಟ ರವಿಶಂಕರ್ ಟ್ವೀಟ್ ಮಾಡಿದ್ದಾರೆ.…

'ಲಾ' ಸಿನಿಮಾ ಬಗ್ಗೆ ಕುತೂಹಲಕಾರಿ ಮಾಹಿತಿ ಹಂಚಿಕೊಂಡ ನಟಿ ರಾಗಿಣಿ ಚಂದ್ರನ್‌

ಕನ್ನಡದ ʻಲಾʼ ಸಿನಿಮಾ ಬಿಡುಗಡೆಯ ಬಗ್ಗೆ ಚಿತ್ರದ ನಾಯಕಿ ಬಹಳ ಉತ್ಸುಕರಾಗಿದ್ದಾರೆ. ಇದೇ ಜುಲೈ 17…

ನಟಿ ಬಿಪಾಶಾ ಬಸು ಅವರ ಜೀವನದಲ್ಲಿ ನಡೆದ ಕಹಿ ಘಟನೆ ಯಾವುದು?

ಮಾದಕ ನಟಿ ಬಿಪಾಶಾ ಬಸು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದಲೂ ಬಹುತೇಕ ಚಿತ್ರಗಳಲ್ಲಿ ಹಾಟ್ ಆಂಡ್ ಬೋಲ್ಡ್ ಪಾತ್ರಗಳಲ್ಲಿಯೇ ನಟಿಸಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಆದರೆ, ಈ ನಟಿ ಎಷ್ಟೇ ಮಾದಕವಾಗಿದ್ದರೂ ನೇರ ಹಾಗೂ ನಿಷ್ಠುರ. ಅವರಿಗೆ ಚಿತ್ರಗಳಲ್ಲಿ ಅವಕಾಶ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಅವರ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.

ಚಿತ್ರಮಂದಿರಗಳಿಗೆ ನಿರ್ಬಂಧ ಬೇಡ : ಪುನೀತ್ ಮನವಿ

ಚಲನಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.