ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರಾಗಿಣಿ ಹಾಗೂ ಸಂಜನಾಗೆ ಬೇಲ್ ಕೊಡದಿದ್ದರೆ, ಬಾಂಬ್ ಹಾಕುತ್ತೇವೆ ಎಂದು ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 

ರಾಗಿಣಿ ಮತ್ತು ಸಂಜನಾಗೆ ಜಾಮೀನು ನೀಡದೆ ಇದ್ದರೆ, ಸಿಟಿ ಸಿವಿಲ್ ಕೋರ್ಟ್ ಮತ್ತು ಕಮೀಷನರ್ ಆಫೀಸಿಗೆ ಬಾಂಬ್ ಹಾಕುತ್ತೇವೆ ಎಂಬ ಬೆದರಿಕೆ ಪತ್ರವೊಂದು ಬಂದಿತ್ತು. ಈ ಪತ್ರವನ್ನು ಸಿಟಿ ಸಿವಿಲ್ ಕೋರ್ಟ್ ಜಡ್ಜ್, ಕಮೀಷನರ್ ಕಮಲ್ ಪಂಥ್, ಜಂಟಿ ಪೊಲೀಸ್ ಆಯುಕ್ತ, ಸಂದೀಪ್ ಪಾಟೀಲ್ ಮತ್ತು ಡಿಸಿಪಿ ರವಿಕುಮಾರ ಅವರಿಗೆ ಬರೆಯಲಾಗಿತ್ತು. 

ಪತ್ರ ಕಳುಹಿಸಿದ್ದ ವ್ಯಕ್ತಿ, ಪತ್ರದೊಂದಿಗೆ ವ್ಯಕ್ತಿಯೊಬ್ಬರ ವೋಟರ್ ಐಡಿ ಮತ್ತು ಎರಡು ಮೊಬೈಲ್ ನಂಬರ್ ಕಳುಹಿಸಿದ್ದ. ವೋಟರ್ ಐಡಿ ಕೊಡಿಯಳ್ಳಿ ಪಂಚಾಯತ್, ಹರಿವೇಸಂದ್ರ ಗ್ರಾಮದ ಶಿವಪ್ರಕಾಶ್ ಎಂಬ ಹೆಸರಿನಲ್ಲಿ ಪತ್ರ ಬಂದಿತ್ತು. ಎನ್‍ ಡಿಪಿಎಸ್ ಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬಂದಿದ್ದು, ನಟಿ ಸಂಜನಾ ಮತ್ತು ರಾಗಿಣಿಗೆ ಜಾಮೀನು ನೀಡಬೇಕು. ಇಲ್ಲವಾದಲ್ಲಿ ಕಾರು ಉಡಾಯಿಸುತ್ತೇವೆ ಎಂದು ಹೇಳಲಾಗಿತ್ತು.

ಸಿಸಿಬಿ ಡಿಸಿಪಿ ರವಿಕುಮಾರ್ ಮತ್ತು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಬಂದ ಪತ್ರದಲ್ಲಿ ಡ್ರಗ್ ಕೇಸ್ ಹಾಗು ಡಿಜೆ ಹಳ್ಳಿ ಕೇಸ್ ತನಿಖೆ ನಿಲ್ಲಿಸದಿದ್ದರೆ ಸರಿ ಇರುವುದಿಲ್ಲ ಎಂದು ಎಚ್ಚರಿಸಲಾಗಿತ್ತು. 

Leave a Reply

Your email address will not be published. Required fields are marked *

You May Also Like

ಶಿವಾಜಿನಗರದಲ್ಲಿ ಮತ್ತೆ 14 ಜನರಲ್ಲಿ ಕಂಡು ಬಂದ ಸೋಂಕು!

ಬೆಂಗಳೂರು: ಇಲ್ಲಿಯ ಶಿವಾಜಿನಗರದಲ್ಲಿ ಮತ್ತೆ 14 ಜನರಲ್ಲಿ ಸೋಂಕು ಇರುವುದು ಬೆಳಕಿಗೆ ಬಂದಿದೆ. ಹೌಸ್ ಕೀಪಿಂಗ್…

ಗದಗನಲ್ಲಿ ಬೆಂಕಿಗೆ ಆಹುತಿಯಾದ ಸ್ಕೂಟಿ ಪ್ಲೇಜರ್

ನಗರದ ಗಂಗಾಪೂರ ಪೇಟೆಯ ವೀರನಾರಾಯಣ ದೇವಸ್ಥಾನ ಬಳಿ ನಿಲ್ಲಿಸಿದ ಸ್ಕೂಟಿ ಪ್ಲೇಜರ್ ಆಕಸ್ಮಿಕ ಬೆಂಕಿಗೆ ಹೊತ್ತು ಉರಿಯಿತು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ – ತಾಲೂಕಾಡಳಿತದಿಂದ ಅಹವಾಲು ಸ್ವೀಕಾರ
ಗೋಳು ತೋಡಿಕೊಂಡ ಗೊಳಸಂಗಿ ಜನ.!

ಉತ್ತರಪ್ರಭ ಸುದ್ದಿಗೊಳಸಂಗಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ ಗೊಳಸಂಗಿ ಗ್ರಾಮದ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ…

ಗದಗ ಜಿಲ್ಲೆಯ ವೀರಶೈವ ಲಿಂಗಾಯತ ಪಂಚಮಸಾಲಿ ಯುವ ಘಟಕದ ಜಿಲ್ಲಾದ್ಯಕ್ಷ ಹಾಗೂ ತಾಲೂಕ ಅಧ್ಯಕ್ಷರ ಆಯ್ಕೆ ಮಾಡಲಾಯಿತು.

ಉತ್ತರಪ್ರಭ ಸುದ್ದಿ ಗದಗ: ಪ್ರವಾಸಿ ಮಂದಿರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಿಲ್ಲಾಧ್ಯಕ್ಷರಾದ ಶ್ರೀ.ಈರಣ್ಣ ಕರಿಬಿಷ್ಠಿ ಯವರ…