ಬೆಂಗಳೂರು: ಸೂಪರ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದ ಚಿತ್ರಕ್ಕೆ ನಟ ಯಶ್ ಸಾಥ್ ನೀಡಿದ್ದಾರೆ.

ನಿರಂಜನ್ ಅಭಿನಯದ ಸೂಪರ್ ಸ್ಟಾರ್ ಚಿತ್ರದ ಟೀಸರ್ ಗೆ ರಾಕಿಂಗ್ ಸ್ಟಾರ್ ಧ್ವನಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿತ್ತು. ಈ ಸಮಾರಂಭದಲ್ಲಿ ನಟ ಉಪೇಂದ್ರ ಹಾಗೂ ಪ್ರಿಯಾಂಕ್ ಉಪೇಂದ್ರ ಭಾಗಿಯಾಗಿದ್ದರು.

ಸದ್ಯ ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೇ, ಇದೇ ತಿಂಗಳು 20ರಂದು ಟೀಸರ್ ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಅಕ್ಟೋಬರ್ ವೇಳೆಗೆ ಈ ಚಿತ್ರದ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. ಆದರೆ, ನಾಯಕಿ ಹಾಗೂ ಇತರ ಪಾತ್ರಗಳ ಕುರಿತು ಮಾತ್ರ ಇನ್ನು ಅಂತಿಮ ನಿರ್ಧಾರವನ್ನು ಚಿತ್ರ ತಂಡ ತೆಗೆದುಕೊಂಡಿಲ್ಲ.

Leave a Reply

Your email address will not be published. Required fields are marked *

You May Also Like

ನಟ ಸುಶಾಂತ್ ಪ್ರಕರಣದ ತನಿಖೆ ಕೊನೆಗೊಳಿಸಲು ನಿರ್ಧರಿಸಿದ ಸಿಬಿಐ!

ಮುಂಬಯಿ : ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಗೆ ಅಂತ್ಯ ಹಾಡಲು ಸಿಬಿಐ ನಿರ್ಧರಿಸಿದೆ.

ಪ್ರೇಮಕಥೆಯ ಸಲಿಗೆ ಸಿಂಗಲ್ ಸಾಂಗ್ ಚಂದನ್ ಶೆಟ್ಟಿ ಡ್ಯಾನ್ಸ್

ಬೆಂಗಳೂರು: ಪ್ರೇಮಿಯೊಬ್ಬ ಪ್ರೀತಿಯಿಂದ ಆಗ ಬದಲಾವಣೆಯನ್ನು ಚಂದನ್ ಶೆಟ್ಟಿ ಲವ್ ಸಾಂಗ್ ಒಂದರಲ್ಲಿ ಬಿಂಬಿಸಿದ್ದಾರೆ. ಈ ಮೂಲಕ ಆಲ್ಬಂ ಸಾಂಗ್ ನಲ್ಲಿ ಚಂದನ್ ಶೆಟ್ಟಿ ಹೊಸ ಪ್ರಯೋಗ ಮಾಡಿದ್ದಾರೆ. ಸಲಿಗೆ ಹೆಸರಿನ ಸಿಂಗಲ್ ಆಲ್ಬಂ ಅನ್ನು ಚಂದನ್ ಶೆಟ್ಟಿ ಮೇ 28 ರಂದು ಬಿಡುಗಡೆ ಮಾಡಿದ್ದಾರೆ. ಕೆನಡಾದಲ್ಲಿ ಚಿತ್ರೀಕರಿಸಿದ ಹಾಡನ್ನು ತಾವೇ ಶೂಟ್ ಮಾಡಿದ್ದಲ್ಲದೇ ಚೆನ್ನಾಗಿ ನೃತ್ಯ ಮಾಡಿದ್ದಾರೆ ಚಂದನ್ ಶೆಟ್ಟಿ.

ಅನಾರೋಗ್ಯ ಹಿನ್ನೆಲೆ ಬಾಲಿವುಡ್ ನಟ ರಿಷಿ ಕಪೂರ್ ಆಸ್ಪತ್ರೆಗೆ ದಾಖಲು

ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಿವುಡ್ ನ ಹಿರಿಯ ನಟ ರಿಷಿ ಕಪೂರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.ಈ ಕುರಿತು ರಿಷಿ ಅವರ ಸಹೋದರ ರಣಧೀರ್ ಕಪೂರ್ ತಿಳಿಸಿದ್ದಾರೆ.