ಬೆಂಗಳೂರು: ಮುಸ್ಲೀಂ ಬಾಂಧವರು ದಿನಾಂಕ 30-10-2020 ರಂದು ರಾಜ್ಯಾದ್ಯಂತ ಈದ್ ಮೀಲಾದ್ ಹಬ್ಬವನ್ನು ಆಚರಿಸಲಿದ್ದು, ಹಬ್ಬ ಆಚರಣೆಯ ಬಗ್ಗೆ ಸರ್ಕಾರದ ಮಾರ್ಗಸೂಚಿ ಈ ಕೆಳಗಿನಂತಿದೆ.

ಮಾರ್ಗಸೂಚಿಗಳು

  • ರಾಜ್ಯಾದ್ಯಂತ ದಿನಾಂಕ 30-10-2020 ರಂದು ಆಚರಿಸಲಿರುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನೆರವೇರಲಿರುವ ಯಾವುದೇ ರೀತಿಯ ಸಾಮೂಹಿಕ ಮೆರವಣಿಗೆ (ಜುಲೂಸ್), ತೆರೆದ ಸ್ಥಳಗಳಲ್ಲಿ ಒಂದೆಡೆ ಸೇರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
  • ಮೊಹಲ್ಲಾಗಳಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ ಸಮಾರಂಭಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
  • ಮಸೀದಿಗಳಲ್ಲಿ ದರ್ಗಾಗಳಲ್ಲಿ ಸಾಮಾಜಿಕ ಅಂತರ ಹಾಗೂ ಕೋವಿಡ್19ರ ಶಿಷ್ಟಾಚಾರದೊಂದಿಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ದೈಹಿಕ ಅಂತರ ಕಾಪಾಡಿಕೊಳ್ಳುವುದರ ಮೂಲಕ ನೆರವೇರಿಸುವುದು.
  • ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿ ವರ್ಧಕಗಳು, ಡಿಜಿಟಲ್ ಸೌಂಡ್ ಸಿಸ್ಟಮ್(ಡಿಜೆ) ಬಳಕೆಯನ್ನು ನಿಷೇಧಿಸಲಾಗಿದೆ.
  • ಮುಖಗವಸಗಳನ್ನು ಎಲ್ಲರೂ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು.
  • 60 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಹಬ್ಬದ ಚರಣೆಯನ್ನು ಮಾಡುವುದು.
  • ಸ್ಯಾನಿಟೈಸರ್ ಹಾಗೂ ಸೋಪಿನೊಂದಿಗೆ ಕೈತೊಳೆಯಲು ಪ್ರವೇಶ ಧ್ವಾರದಲ್ಲಿ ಸೂಕ್ತ ವ್ಯವಸ್ಥೆ ಮಾಡುವುದು. ಕಡ್ಡಾಯವಾಗಿ ವಯಕ್ತಿಕವಾಗಿ ಎಲ್ಲರೂ 6 ಅಡಿ ಅಂತರದ ದೈಹಿಕ ಅಂತರ ಕಾಯ್ದುಕೊಳ್ಳುವುದು.
  • ಖಬರಸ್ಥಾನ್ ಒಳಗೊಂಡಂತೆ ಯಾವುದೇ ರೀತಿಯ ತೆರೆದ ಜಾಗದಲ್ಲಿ ಸಾಮೂಹಿಕ ಪ್ರಾರ್ಥನೆ, ಪ್ರವಚನ ಮುಂತಾದವುಗಳನ್ನು ಆಯೋಜಿಸುವಂತಿಲ್ಲ.  
  •  ಈ ಕುರಿತು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ನೀಡುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವುದು.

ಈ ಆದೇಶವನ್ನು ಕೋವಿಡ್19 ಸೋಂಕು ಹಿನ್ನೆಲೆಯಲ್ಲಿ ಆಚರಣೆಗಳನ್ನು ನಿರ್ಭಂಧಿಸುವುದಕ್ಕಾಗಿ ಹೊರಡಿಸಲಾಗಿದ್ದು, ಭವಿಷ್ಯದ ಪ್ರಕರಣಗಳಿಗೆ ಪೂರ್ವ ನಿರ್ದೇಶನವಾಗಿರುವುದಿಲ್ಲ. ವಕ್ಫ್ ಸಂಸ್ಥೆಗಳ ಆಡಳಿತ ಮಂಡಳಿ, ಮುತವಲ್ಲಿ, ಆಡಳಿತಾಧಿಕಾರಿಗಳು ಮೇಲ್ಕಾಣಿಸಿದ ಈದ್ ಮಿಲಾದ್ ಆಚರಣೆ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಅನುಷ್ಟಾನಗೊಳಿಸಲು ಸೂಕ್ತಕ್ರಮ ಕೈಗೊಳ್ಳುವುದು.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯೂ ಜಿಲ್ಲಾ ವಕ್ಫ್ ಅಧಿಕಾರಿಗಳ ಮೂಲಕ, ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಸಂಬಂಧಪಟ್ಟ ಎಲ್ಲಾ ಈದ್ಗಾ, ಮಸೀದಿ, ದರ್ಗಾ ಹಾಗೂ ಮತ್ತಿತರ ವಕ್ಫ್ ಸಂಸ್ಥೆಗಳಿಗೆ ಈ ಆದೇಶವನ್ನು ಜಾರಿ ಮಾಡುವುದು. ಈ ಆದೇಶವನ್ನು ಎಲ್ಲಾ ವಕ್ಫ್ ಸಂಸ್ಥೆಗಳು ಕಟ್ಟುನಿಟ್ಟಾಗಿ ಪರಿಪಾಲಿಸಲು ಕ್ರಮ ಜರುಗಿಸುವುದು ಎಂದು ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ಉಪ ಕಾರ್ಯದರ್ಶಿ ವೈ.ಎಸ್.ದಳವಾಯಿ ಆದೇಶಿಸಿದ್ದಾರೆ.  

Leave a Reply

Your email address will not be published. Required fields are marked *

You May Also Like

ಕಾಲುವೆಗೆ ಉರುಳಿ ಬಿದ್ದ ಕಾರು: ಇಬ್ಬರು ಸ್ಥಳದಲ್ಲೆ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ನಡೆದಿದೆ.

ಗದಗ ಜಿಲ್ಲೆಯಲ್ಲಿ ನಿಲ್ಲದ ಸೋಂಕಿನ ಸುಳಿ: ಯಾವ ಊರಲ್ಲಿ ಎಷ್ಟು?

ಜಿಲ್ಲೆಯಲ್ಲಿ ಭಾನುವಾರ ದಿ. 19 ರಂದು 28 ಜನರಿಗೆ(ಹೆಲ್ಥ್ ಬುಲಿಟಿನ್ ನಲ್ಲಿ 30) ಕೊವಿಡ್-19 ಸೋಂಕು ದೃಢಪಟ್ಟಿದ್ದು, ವಿವರ ಇಂತಿದೆ.ಗದಗ ನಗರದ ಸಾಲ ಓಣಿ ನಿವಾಸಿ (15 ವರ್ಷದ ಮಹಿಳೆ),

ಮೃತ ದೇಹದಲ್ಲೆಷ್ಟು ದಿನ ಬದುಕಿರುತ್ತೆ ಕೊರೋನಾ ವೈರಸ್..?

ಹೊಸದೆಹಲಿ: ಇಲ್ಲಿನ ಏಮ್ಸ್‌ ಆಸ್ಪತ್ರೆಯ ವೈದ್ಯರು ಹೊಸ ಅಧ್ಯಯನ ಮಾಡಲು ಮುಂದಾಗಿದ್ದಾರೆ.ಕರೋನಾ ವೈರಸ್‌ ಮೃತ ಶರೀರದಲ್ಲಿ…

ಗದಗನಲ್ಲಿ ಎಸಿಬಿ ದಾಳಿ ಬಿಜೆಪಿ ಯುವ ಮುಖಂಡ ಬಂಧನ

ಗದಗ: ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಹುದ್ದೆ ಕೊಡೆಸುತ್ತೇನೆಂದು ಮಹಿಳೆಯೊಬ್ಬರಿಂದ ಹಣ…