ಜೈಪುರ : ಸ್ಪಾ, ಮಸಾಜ್ ಶಾಪ್ ಗೆ ದಾಳಿ ಮಾಡಿದ ಪೊಲೀಸರು, ವೇಶ್ಯಾವಾಟಿಕೆಯ ಜಾಲ ಬಯಲಿಗೆ ಎಳೆದಿದ್ದಾರೆ.

ಈ ಘಟನೆ ರಾಜಸ್ಥಾನದ ಅಲ್ವಾರ ಜಿಲ್ಲೆಯ ಬಿವಢಿ ವ್ಯಾಪ್ತಿಯಲ್ಲಿ ನಡೆದಿದೆ. ದಾಳಿ ಸಂದರ್ಭದಲ್ಲಿ 9 ಜನ ಯುವತಿಯರನ್ನು ರಕ್ಷಿಸಿದ್ದು, ಮೂವರನ್ನು ಬಂಧಿಸಲಾಗಿದೆ. ಸ್ಪಾ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರೊಬ್ಬರು ಗ್ರಾಹಕರಾಗಿ ಸ್ಪಾ ಒಳಗೆ ಹೋದಾಗ, ಈ ಸಂಗತಿ ಬಯಲಾಗಿದೆ.

ಈ ದಂಧೆಯಲ್ಲಿ ದೆಹಲಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಿಂದ ಯುವತಿಯರನ್ನು ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ. ಇತ್ತೀಚೆಗಷ್ಟೇ ದೆಹಲಿಯ ತಿಲಕ್ ನಗರದಲ್ಲಿ ಸ್ಪಾ ಹೆಸರಲ್ಲಿ ನಡೆಯುತ್ತಿದ್ದ ಸೆಕ್ಸ್ ದಂಧೆಯನ್ನು ಕೂಡ ಪೊಲೀಸರು ಬಯಲಿಗೆ ತಂದಿದ್ದರು.

ಮಹಿಳಾ ಅಯೋಗದವರು ದೆಹಲಿ ಪೊಲೀಸರ ಜೊತೆ ಮಾಂಸ ದಂಧೆಯ ಅಡ್ಡೆಯ ಮೇಲೆ ದಾಳಿ ನಡೆಸಿದ್ದರು. ಇದರ ಬೆನ್ನಲ್ಲಿಯೇ ರಾಜಸ್ಥಾನದಲ್ಲಿಯೂ ಇಂತಹ ಘಟನೆ ನಡೆದಿದೆ.

Leave a Reply

Your email address will not be published. Required fields are marked *

You May Also Like

ಋತುಚಕ್ರದ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ ಮಾದಕ ನಟಿ!

ಬೆಂಗಳೂರು: ಆಗ ನನಗೆ 14 ವರ್ಷ ವಯಸ್ಸು. ಈ ವೇಳೆ ನಮ್ಮ ಮನೆಯಲ್ಲಿ ದೇವರ ಪೂಜೆ ನಡೆಯುತ್ತಿತ್ತು. ಆ ಪೂಜೆಯಲ್ಲಿ ನಾನು ಪಾಲ್ಗೊಂಡಿದ್ದೆ. ಆದರೆ ಆಗಲೇ ನನಗೆ ಪೀರಿಯಡ್ಸ್ ಆಯಿತು. ಆಗ ಅಮ್ಮ ನನ್ನ ಜೊತೆಯಲ್ಲಿ ಇರಲಿಲ್ಲ. ಆದ್ದರಿಂದ ನಾನು ನನ್ನ ಪಕ್ಕದಲ್ಲಿದ್ದ ಚಿಕ್ಕಮ್ಮನಿಗೆ ಈ ವಿಚಾರವನ್ನು ತಿಳಿಸಿದೆ. ನಾನು ಆ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಕೂಡ ಧರಿಸಿರಲಿಲ್ಲ ಎಂದು ಅನೇಕ ವರ್ಷಗಳ ಹಿಂದೆ ನಡೆದಿದ್ದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಬಿಜೆಪಿಗೆ ಹೆಚ್ಚು ಸ್ಥಾನ: ರಾಜ್ಯಸಭೆಯಲ್ಲೂ ಬಿಜೆಪಿ ಮೇಲುಗೈ

ನವದೆಹಲಿ : ರಾಜ್ಯ ಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಮೇಲ್ಮನೆಯಲ್ಲಿ ಬಿಜೆಪಿಯು ತನ್ನ ಸಂಖ್ಯಾ…

ಕೊರೋನಾ ಸೋಂಕಿನಿಂದ ಗುಣ ಹೊಂದಿದ 12 ದಿನದ ಮಗುವಿನ ಹೆಸರೇನು ಗೊತ್ತಾ?

ಒಂಭತ್ತು ದಿನದ ಮಗುವಿನಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. ಇದೀಗ 12 ದಿನದ ಈ ಮಗು ಕೊರೋನಾ ಸೋಂಕಿನಿಂದ ಗುಣ ಹೊಂದಿದ್ದು ಮಗುವಿಗೆ ಇಂದು ಹೆಸರಿಡಲಾಗಿದೆ.

ದೇಶದ ಜನರಲ್ಲಿ ಹೊಸ ಪ್ರಭೇದ ಸೊಂಕು ಪತ್ತೆ

ಜಗತ್ತಲ್ಲಿ ಕೊರೊನಾ ಸೊಂಕು ಜನರ ಬದುಕು ತೆಗೆದರೂ, ಇನ್ನು ತಣ್ಣಗಾಗುವ ಲಕ್ಷಗಳು ಕಾಣುತ್ತಿಲ್ಲ.