ನವದೆಹಲಿ : ರಾಜ್ಯ ಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಮೇಲ್ಮನೆಯಲ್ಲಿ ಬಿಜೆಪಿಯು ತನ್ನ ಸಂಖ್ಯಾ ಬಲವನ್ನು ಹೆಚ್ಚಿಸಿಕೊಂಡಿದೆ.

ಈ ಮೂಲಕ ಕಾಂಗ್ರೆಸ್ ತನ್ನ ಸಂಸದರ ಸಂಖ್ಯಾ ಬಲವನ್ನು ಕಡಿಮೆ ಮಾಡಿಕೊಂಡಿದೆ. ಪರಿಣಾಮ ಮೇಲ್ಮನೆಯಲ್ಲಿ ಕಾಂಗ್ರೆಸ್‌ಗಿಂತ ದುಪ್ಪಟ್ಟು ಹೆಚ್ಚಿನ ಸಂಸದರು ಬಿಜೆಪಿ ಬಳಿಯಿದ್ದಾರೆ. ಬಿಜೆಪಿ ಸದಸ್ಯರ ಸಂಖ್ಯೆ 86ಕ್ಕೆ ಏರಿಕೆಯಾಗಿದ್ದರೆ, ಕಾಂಗ್ರೆಸ್‌ ಸಂಸದರ ಸಂಖ್ಯೆ 41ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಬಲ 100ರ ಸಮೀಪಕ್ಕೆ ಬಂದಿದೆ. ಆದರೂ ಬಹುಮತದಿಂದ ದೂರ ಉಳಿದಿದೆ.

ಬಿಜೆಪಿ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಎಐಎಡಿಎಂಕೆ ಬಳಿ 9, ಬಿಜೆಡಿ ಬಳಿ 9, ವೈಆರ್ ಎಸ್ ಕಾಂಗ್ರೆಸ್‌ ಪಕ್ಷದ ಬಳಿ 6 ಸಂಸದರಿದ್ದಾರೆ. ಜೊತೆಗೆ ಇತರ ಸಣ್ಣ ಪುಟ್ಟ ಪಕ್ಷಗಳೂ ಬಿಜೆಪಿ ಜೊತೆ ಚೆನ್ನಾಗಿವೆ.

Leave a Reply

Your email address will not be published.

You May Also Like

ಮುಂದುವರೆದ ಸೋಂಕು ತೀವ್ರತೆ, ಸಾವಿನ ಪ್ರಮಾಣ ರಾಜ್ಯದಲ್ಲಿಂದು 2,627 ಕೇಸ್: ಯಾವ ಜಿಲ್ಲೆಯಲ್ಲಿ ಎಷ್ಟು?

ಶನಿವಾರ 2,798 ಕೇಸ್ಗಳೊಂದಿಗೆ ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ 5ನೆ ಸ್ಥಾನಕ್ಕೇರಿದ್ದ ರಾಜ್ಯ, ಇಂದು 2,627 ಪಾಸಿಟಿವ್ಗಳನ್ನು…

ನಾಳೆಯಿಂದ ರಾಜ್ಯದಲ್ಲಿ ಬಸ್ ಸಂಚಾರ?: ನಿಯಮಗಳೇನು ಗೊತ್ತಾ?

ಬೆಂಗಳೂರು: ಲಾಕ್ ಡೌನ್ ನಿಂದ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ನಾಳೆಯಿಂದ ಮತ್ತೆ ಬಸ್…

ಶನಿವಾರ ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆ!!

ಶನಿವಾರ ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆ!! ನವದೆಹಲಿ : ದೇಶದಲ್ಲಿ ಶನಿವಾರ ಒಂದೇ ದಿನ…

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಗದಗ ಚುನಾವಣೆ-2022 ಜಯಗಳಿಸಿದ ಅಭ್ಯರ್ಥಿಗಳು

ಉತ್ತರಪ್ರಭ ಸುದ್ದಿಗದಗ: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ…