ಬೆಂಗಳೂರು: ಆಗ ನನಗೆ 14 ವರ್ಷ ವಯಸ್ಸು. ಈ ವೇಳೆ ನಮ್ಮ ಮನೆಯಲ್ಲಿ ದೇವರ ಪೂಜೆ ನಡೆಯುತ್ತಿತ್ತು. ಆ ಪೂಜೆಯಲ್ಲಿ ನಾನು ಪಾಲ್ಗೊಂಡಿದ್ದೆ. ಆದರೆ ಆಗಲೇ ನನಗೆ ಪೀರಿಯಡ್ಸ್ ಆಯಿತು. ಆಗ ಅಮ್ಮ ನನ್ನ ಜೊತೆಯಲ್ಲಿ ಇರಲಿಲ್ಲ. ಆದ್ದರಿಂದ ನಾನು ನನ್ನ ಪಕ್ಕದಲ್ಲಿದ್ದ ಚಿಕ್ಕಮ್ಮನಿಗೆ ಈ ವಿಚಾರವನ್ನು ತಿಳಿಸಿದೆ. ನಾನು ಆ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಕೂಡ ಧರಿಸಿರಲಿಲ್ಲ ಎಂದು ಅನೇಕ ವರ್ಷಗಳ ಹಿಂದೆ ನಡೆದಿದ್ದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಈ ವೇಳೆ ಪಕ್ಕದಲ್ಲೇ ಇನ್ನೊಬ್ಬ ಒಳ್ಳೆಯ ಮಹಿಳೆ ಕುಳಿತಿದ್ದರು. ನಾನು ಚಿಂತೆಯಿಂದ ಚಿಕ್ಕಮ್ಮನಿಗೆ ಹೇಳಿದ ಮಾತನ್ನು ಅವರು ಕೇಳಿಸಿಕೊಂಡಿದ್ದರು. ಆಗ ಮಹಿಳೆ ನನ್ನ ಕಡೆ ನೋಡಿ ಧೈರ್ಯದಿಂದ ನಗುತ್ತ, ಪರವಾಗಿಲ್ಲ ಚಿನ್ನ, ದೇವರು ಕ್ಷಮಿಸುತ್ತಾರೆ. ಪೂಜೆ ಸಂದರ್ಭದಲ್ಲಿ ಋತುಚಕ್ರ ಆಗಿದ್ದಕ್ಕೆ ನೀನು ಚಿಂತಿಸಬೇಡ ಎಂದು ಹೇಳಿದ್ದರು. ಪೀರಿಯಡ್ಸ್ ಬಗ್ಗೆ ತಪ್ಪು ಕಲ್ಪನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿದೆ. ಆಗ ನನಗೆ 14ರ ಪ್ರಾಯ ಆ ದಿನವೇ ನಾನು ಮಹಿಳಾವಾದಿ ಆದೆ ಎಂದು ನಟಿ ಶ್ರದ್ಧಾ ಶ್ರೀನಾಥ್ ಹೇಳಿಕೊಂಡಿದ್ದಾರೆ.
ಮಹಿಳೆಯರು ಋತುಚಕ್ರದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ, ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್ ಈ ಕುರಿತು ಬೋಲ್ಡ್ ಆಗಿ ಮಾತನಾಡಿದ್ದಾರೆ.

ಈ ಬೋಲ್ಡ್ ಹೇಳಿಕೆಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಶ್ರದ್ಧಾ 14ನೇ ವಯಸ್ಸಿನಲ್ಲಿಯೇ ಸ್ತ್ರೀವಾದಿಯಾದ ಬಗ್ಗೆ ಇನ್ಸ್ಟಾ ಗ್ರಾಂನಲ್ಲಿ ಬಹಿರಂಗವಾಗಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು 18 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು 18 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 228 ಕ್ಕೆ ಏರಿಕೆಯಾಗಿದೆ. ಒಟ್ಟು ಗುಣಮುಖ ಹೊಂದಿ ಬಿಡುಗಡೆಯಾಗಿದ್ದು ಈವರೆಗೆ 128 ಕೇಸ್ ಗಳು. 96 ಸಕ್ರೀಯ ಪ್ರಕರಣಗಳಿವೆ. ಇದರಲ್ಲಿ ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಹೆಲ್ಥ್ ಬುಲೆಟಿನ್ ತಿಳಿಸಿದೆ

ರಾಜ್ಯ ಕ.ಸಾ.ಪ ಕಾರ್ಯಕಾರಿ ಸಮಿತಿಗೆ ನೇಮಕ.

ಬೆಂಗಳೂರ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಕನ್ನಡ ಭಾಷೆ,…

ಆರೋಪಿಯಲ್ಲಿ ಕೊರೊನಾ ಸೋಂಕು – ಪೊಲೀಸರಲ್ಲಿ ಹೆಚ್ಚಿದ ಆತಂಕ!

ಬೆಂಗಳೂರು: ಇಲ್ಲಿಯ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇನ್ನೊಂದೆಡೆ ನಗರದಲ್ಲಿ…

ಗ್ರಾ.ಪಂ. ಚುನಾವಣೆ ಮುಂದೂಡಿಕೆ: ಸಿದ್ದರಾಮಯ್ಯ ಅಸಮಾಧಾನ

ಬೆಂಗಳೂರು: ಗ್ರಾಮಪಂಚಾಯತ್ಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ಮುಂದೂಡಿರುವುದು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ಕ್ಕೆ…