ಭೂಪಾಲ್ : ಕೊರೊನಾ ಸೋಂಕಿನಿಂದ 12 ದಿನದ ಹಸುಗೂಸು ಗುಣ ಹೊಂದಿದ್ದು, ಸದ್ಯ ಈ ಮಗುವಿಗೆ ಪ್ರಕೃತಿ ಎಂದು ಹೆಸರಿಡಲಾಗಿದೆ.

9 ದಿನಗಳಾಗಿದ್ದ ಮಗುವಿಗೆ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ಇರುವುದು ದೃಢ ಪಟ್ಟಿತ್ತು. ಆ ನಂತರ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಮಾರಣಾಂತಿಕ ಸೋಂಕಿನಿಂದ ಚೇತರಿಸಿಕೊಂಡ ನಂತರ ಶುಕ್ರವಾರ ರಾತ್ರಿ ಮಗು ಮನೆಗೆ ಮರಳಿದೆ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏ. 7 ರಂದು ಮಗು ಜನಿಸಿತ್ತು. ಆರೋಗ್ಯ ಕಾರ್ಯಕರ್ತೆಯಿಂದಾಗಿ ಮಗುವಿಗೆ ಸೋಂಕು ತಗುಲಿತ್ತು. ಮಗು ಸದ್ಯ ಗುಣಮುಖವಾಗಿದ್ದು. ಕಳೆದ ರಾತ್ರಿ ಮನೆಗೆ ಕರೆದುಕೊಂಡು ಬಂದಿದ್ದಾಗಿ ಮಗುವಿನ ತಂದೆ ತಿಳಿಸಿದ್ದಾರೆ. ಜೊತೆಗೆ ಮಗುವಿಗೆ ಪ್ರಕೃತಿ ಎಂದು ನಾಮಕರಣ ಮಾಡಿದ್ದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಆಸ್ಪತ್ರೆಗೆ ದಾಖಲು

ಬೆಳಗಾವಿ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ಸ್ನಾನ ಗೃಹದಲ್ಲಿ ಬಿದ್ದ ಕಾರಣ ಗಾಯಗೊಂಡಿದ್ದು, ಆಸ್ಪತ್ರೆಗೆ…

ಇಂದು ರಾಜ್ಯದಲ್ಲಿ 75 ಕೊರೋನಾ ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು..?

ಇಂದು ರಾಜ್ಯದಲ್ಲಿ 75 ಕೊರೋನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕು ತಗುಲಿದವರ ಸಂಖ್ಯೆ 2493 ಆಗಿದೆ.

ರಾಜ್ಯದಲ್ಲಿಂದು 388 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 388 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 3796 ಕ್ಕೆ ಏರಿಕೆಯಾದಂತಾಗಿದೆ.

ಮೌಲ್ಯ ಮಾಪನವಿಲ್ಲದೆ ವಿಟಿಯು ಪರೀಕ್ಷೆ ತೇರ್ಗಡೆಗೆ ಅಭಿಯಾನ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಅಡಿಯಲ್ಲಿ ಸುಮಾರು 2000ಕ್ಕೂ ಹೆಚ್ಚು ಕಾಲೇಜುಗಳು ಮಾನ್ಯತೆ ಪಡೆದಿವೆ. ಈ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ಮೌಲ್ಯಮಾಪನವಿಲ್ಲದೆ ವಿಟಿಯು ಎಲ್ಲಾ ವಿದ್ಯಾಥಿಗಳನ್ನು ತೆರ್ಗಡೆ ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.