ಹೈದರಾಬಾದ್ : 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಮಾಲೀಕನೇ ಬೆಂಕಿ ಹಚ್ಚಿರುವ ಆಘಾತಕಾರಿ ಹಾಗೂ ಅಮಾನವೀಯ ಘಟನೆ ನಡೆದಿದೆ.  

ತೆಲಂಗಾಣದ ಖಮ್ಮಮ್ ನಗರದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, 13 ವರ್ಷದ ಬಾಲಕಿ ತೆಲಂಗಾಣದ ಖಮ್ಮಮ್ ಪಟ್ಟಣದ ಆರೋಪಿಯ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದಳು. ಸೆ. 18ರಂದು ಆರೋಪಿ ಕಿರುಕುಳ ನೀಡಿದ್ದಾನೆ. ಈ ಸಂದರ್ಭದಲ್ಲಿ ಬಾಲಕಿ ವಿರೋಧಿಸಿದ್ದಾಳೆ. ಆಗ ಆರೋಪಿ ಅವಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಬಾಲಕಿಗೆ ಶೇ. 70ರಷ್ಟು ಸುಟ್ಟ ಗಾಯಗಳಾಗಿವೆ. 

ಬುಡಕಟ್ಟು ಜನಾಂಗದ ಬಾಲಕಿಯ ಮೇಲೆ ಆಕೆಯ ಮಾಲೀಕನೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಒಪ್ಪದ್ದಕ್ಕೆ ಬೆಂಕಿ ಹಚ್ಚಿ ಸಜೀವ ದಹನ ಮಾಡಲು ಯತ್ನಿಸಿದ್ದಾನೆ. ಕೂಡಲೇ ಬಾಲಕಿಯನ್ನು ಹೈದರಾಬಾದ್ನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಒಂದು ತಿಂಗಳಿನಿಂದ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ, ಚಿತಿಕ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. 

ಸದ್ಯ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದು, ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. 

Leave a Reply

Your email address will not be published. Required fields are marked *

You May Also Like

ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಪಾಪಿ!!

ಲಾಕ್‍ಡೌನ್ ಸಂದರ್ಭದಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಪಾಪಿ ತಂದೆಯೊಬ್ಬ ಅತ್ಯಾಚಾರ ನಡೆಸಿದ ಘಟನೆ ತೆಲಂಗಾಣದ ವಿಕರಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ದೇಶದಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದೆ ಮಹಾಮಾರಿ!

ನವದೆಹಲಿ : ದೇಶದಲ್ಲಿ ಕೊರೊನಾ ಹಾವಳಿ ಸ್ವಲ್ಪ ಮಟ್ಟಿಗೆ ತಗ್ಗುತ್ತಿದ್ದರೂ ಆತಂಕ ಮಾತ್ರ ಇನ್ನೂ ನಿಂತಿಲ್ಲ.

ಕೋವಿಡ್ ಬಾಧಿತ ಮಕ್ಕಳಿಗೆ ಕವಾಸಾಕಿ ಕಾಯಿಲೆ ಕಾಟ :ಏನಿದು ಕಾಯಿಲೆ? ಲಕ್ಷಣಗಳೇನು?

ಕೋವಿಡ್ ಬಾಧಿತ ಎಲ್ಲ ಮಕ್ಕಳಲ್ಲೂ ಇದು ಕಂಡು ಬಂದಿಲ್ಲವಾದರೂ, ಭಾರತ ಸೇರಿ ವಿಶ್ವಾದ್ಯಂತ ಹಲವಾರು ಪ್ರಕರಣಗಳು ವರದಿಯಾಗಿವೆ.ಕೋವಿಡ್ ಬಾಧಿತ ಮಕ್ಕಳಲ್ಲಿ, ಸೋಂಕಿಗೆ ಒಳಗಾದ 2-3 ವಾರಕ್ಕೆ

ಮೇ. 17ರ ನಂತರ ಲಾಕ್ ಡೌನ್ ಸ್ಥಿತಿ ಹೇಗಿರಲಿದೆ?

ಬೆಂಗಳೂರು: ಮೂರನೇ ಹಂತದ ಲಾಕ್ ಡೌನ್ ಮುಗಿಯಲು ಇನ್ನೂ 7 ದಿನಗಳು ಬಾಕಿ ಇವೆ. ಈ…