ಮುಂಬಯಿ : ಮೊಬೈಲ್ ಗಿಫ್ಟ್ ಕೊಡಲು ನಿರಾಕರಿಸಿದ ಅಜ್ಜಿಯ ತಲೆಯನ್ನೇ ಕತ್ತರಿಸಿ ಟೇಬಲ್ ಮೇಲಿಟ್ಟು ಮೊಮ್ಮಗ ವಿಕೃತಿ ಮೆರೆದಿರುವ ಘಟನೆ ನಡೆದಿದೆ. 

ಈ ಘಟನೆ ನಗರ ಪಶ್ಚಿಮ ಬಾಂದ್ರಾದಲ್ಲಿ ನಡೆದಿದ್ದು, ಆರೋಪಿಯನ್ನು ಕ್ರಿಸ್ಟೋಫರ್ ಡಯಾಸ್ ಎಂದು ಗುರುತಿಸಲಾಗಿದೆ. ಮೊಮ್ಮಗನಿಂದಲೇ ಹತ್ಯೆಯಾಗಿರುವ ಅಜ್ಜಿಯನ್ನು ರೋಸಿ ಎಂದು ಗುರುತಿಸಲಾಗಿದೆ. ಆರೋಪಿಯು ಡ್ರಗ್ಸ್ ಗೆ ವ್ಯಸನಿಯಾಗಿದ್ದ.

ಅಲ್ಲದೇ, ಚಿಕಿತ್ಸೆ ಕೂಡ ಪಡೆಯುತ್ತಿದ್ದ ಎನ್ನಲಾಗಿದೆ. ಈ ವ್ಯಕ್ತಿ ಥಾಣೆಯ ರೆಹಾಬ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆಗೆ ಹಣದ ಕೊರತೆಯಾದ ಕಾರಣ, ಈತನನ್ನು ಪೋಷಕರು ಮನೆಗೆ ಕರೆ ತಂದಿದ್ದರು. ಡಯಾಸ್‍ ನ  ಪೋಷಕರು ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರೆ, ಕುಟುಂಬದ ಇತರ ಸದಸ್ಯರು ನೆಲ ಮಹಡಿಯಲ್ಲಿದ್ದರು. 

ರಾತ್ರಿ ಊಟವಾದ ನಂತರ ಆರೋಪಿತ, ಅಜ್ಜಿಯ ಬಳಿ ತೆರಳಿದ್ದ. ಈ ಸಂದರ್ಭದಲ್ಲಿ ಮೊಬೈಲ್ ಗಿಫ್ಟ್ ಕೊಡುವಂತೆ ಕೇಳಿದ್ದಾನೆ. ಆದರೆ, ಇದಕ್ಕೆ ಅಜ್ಜಿ ಒಪ್ಪಿಗೆ ಸೂಚಿಸಿಲ್ಲ. ಇದರಿಂದ ಕೋಪಗೊಂಡ ಪಾಪಿ ಮೊಮ್ಮಗ, ಅಜ್ಜಿ ಮಲಗಿದ ಮೇಲೆ ತಲೆಯನ್ನೇ ಕತ್ತರಿಸಿ ಕೊಲೆ ಮಾಡಿದ್ದಾನೆ. ತಲೆಯನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟು ವಿಕೃತಿ ಮೆರೆದಿದ್ದಾನೆ.

ಡಯಾಸ್ ಸಹೋದರ ಸಂಬಂಧಿ ನೆಲ ಮಹಡಿಗೆ ಬಂದು ನೋಡಿದ ಮೇಲೆ ಈ ಸತ್ಯ ಬಯಲಿಗೆ ಬಂದಿದೆ. ಆ ನಂತರ ಡಯಾಸ್ ತಂದೆ ಕರೆದು, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅ. 17ರ ವರೆಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

Leave a Reply

Your email address will not be published. Required fields are marked *

You May Also Like

ಗೆಳೆಯನಿಗಾಗಿ ಗಂಡನ ಮರ್ಮಾಂಗಕ್ಕೆ ಆಸಿಡ್ ಎರಚಿದ ಪಾಪಿ!

ಲಕ್ನೋ : ಗೆಳೆಯನಿಗಾಗಿ ಪತ್ನಿಯೊಬ್ಬರು ಗಂಡನ ಮರ್ಮಾಂಗಕ್ಕೆ ಆಸಿಡ್ ಹಾಕಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೀರತ್ ನ ಟಿ.ಪಿ. ನಗರದಲ್ಲಿ ನಡೆದಿದೆ. ಪತ್ನಿಯ ದಾಳಿಯಿಂದ ಮನನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಟ ಸುಶಾಂತ್ ಸಿಂಗ್ ಲಾಸ್ಟ್ ಪಿಕ್ಚರ್ ಟ್ರೈಲರ್: ಬದುಕು-ಸಾವಿನ ತಲ್ಲಣದ ಕಹಾನಿ

‘ಯಾವಾಗ ಹುಟ್ಟಬೇಕು, ಯಾವಾಗ ಸಾಯಬೇಕು ಎಂದು ನಿರ್ಧರಿಸುವುದು ನಮ್ ಕೈಲಿಲ್ಲ. ಆದರೆ, ಹೇಗೆ ಬದುಕಬೇಕು ಎಂದು…

ಚೀನಾ ಟೆನ್ಷನ್: ಸೇನಾಧಿಕಾರಿ, ಇಬ್ಬರು ಸೈನಿಕರು ಬಲಿ!

ದೆಹಲಿ: ಚೀನಾ ಮತ್ತು ಭಾರತೀಯ ಯೋಧರ ನಡುವಿನ ಮುಖಾಮುಖಿಯಲ್ಲಿ ಲಡಾಖ್ ನ ಗಾಲ್ವಾನ್ ನಲ್ಲಿ ಒಬ್ಬ…

ಚೀನಾ ಸಂಘರ್ಷದ ಬೆನ್ನಲ್ಲಿಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾ ಪ್ರವಾಸ

ನವದೆಹಲಿ: ಚೀನಾ ಸಂಘರ್ಷದ ಬೆನ್ನಲ್ಲಿಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾ ಪ್ರವಾಸ ಕೈಗೊಂಡಿದ್ದು, ಹಲವು…