ನವದೆಹಲಿ : ಕೊರೊನಾ ವಿಷಯದಲ್ಲಿ ನಾವು ಸೋಲು ಕಂಡಿದ್ದೇವೆ. ನಮ್ಮ ಶತೃ ರಾಷ್ಟ್ರ ಪಾಕ್ ವಿರುದ್ಧ ನಮಗೆ ಮುಖಭಂಗವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ನಿಯಂತ್ರಿಸುವಲ್ಲಿ ಭಾರತವು ಪಾಕ್ ಹಾಗೂ ಅಪ್ಘಾನಿಸ್ತಾನಕ್ಕಿಂತ ಹಿಂದೆ ಬಿದ್ದಿದೆ. ಕೊರೊನಾ ನಿಯಂತ್ರಣ ವಿಫಲ ಹಾಗೂ ಆರ್ಥಿಕ ಪುನಶ್ಚೇತನ ನೀತಿಗಳ ವಿರುದ್ಧ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವರ್ಷ ಭಾರತದ ಆರ್ಥಿಕತೆಯು ಶೇ. 10.3ರಷ್ಟು ಭಾರಿ ಪ್ರಮಾಣದಲ್ಲಿ ಸಂಕುಚಿತಗೊಳ್ಳಲಿದೆ ಎಂಬ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಹೇಳಿಕೆ ಉಲ್ಲೇಖಿಸಿ ಇದು ಸರ್ಕಾರದ ಮತ್ತೊಂದು ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ.

ಈ ವರ್ಷ ಭಾರತದ ಆರ್ಥಿಕತೆಯು ಶೇ. 10.3ರಷ್ಟು ಭಾರಿ ಪ್ರಮಾಣದಲ್ಲಿ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ ಎಂದು ಚಾರ್ಟ್ ತೋರಿಸಿದೆ. ಇದು ಪಟ್ಟಿಯಲ್ಲಿರುವ ಎಲ್ಲ ಇತರೆ ದೇಶಗಳಿಗಿಂತ ಅತಿ ಹೆಚ್ಚಿನ ಪ್ರಮಾಣದ ಕುಸಿತವಾಗಿದೆ. ಬಿಜೆಪಿ ಸರ್ಕಾರದ ಮತ್ತೊಂದು ಸಾಧನೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಕೂಡ ಕೋವಿಡ್ ಅನ್ನು ಭಾರತಕ್ಕಿಂತ ಉತ್ತಮವಾಗಿ ನಿಭಾಯಿಸಿದೆ ಎಂದು ಗಾಂಧಿ ಚಾರ್ಟ್ ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ, ಚೀನಾ, ಭೂತಾನ್, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಭಾರತದ ಪ್ರಸಕ್ತ ಸಾಲಿನ ಐಎಂಎಫ್ ಬೆಳವಣಿಗೆಯ ಅಂದಾಜನ್ನು ತೋರಿಸುವ ಚಾರ್ಟ್ ಅನ್ನು ಟ್ಯಾಗ್ ಮಾಡುವ ಮೂಲಕ ಗಾಂಧಿ ಟ್ವಿಟ್ಟರ್ ನಲ್ಲಿ ಸರ್ಕಾರವನ್ನು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ನೇಪಾಳದೊಂದಿಗೆ ನಮ್ಮದು ಗಟ್ಟಿ ಸಂಬಂಧ: ಹೈರಾಣಾಗಿರುವ ಭಾರತಕ್ಕೆ ಇದು ಇನ್ನಷ್ಟು ಮುಜುಗರ

ದೆಹಲಿ: ನೇಪಾಳದೊಂದಿಗೆ ನಮ್ಮ ಸಂಬಂಧ ಬಲಿಷ್ಠವಾಗಿದೆ ಎಂದು ಭಾರತೀಯ ಸೇನಾ ಮುಖಸ್ಥ ಎಂ.ಎಂ.ನರವಣೆ ಹೇಳಿದ್ದಾರೆ. ನಾವು…

ಉಗ್ರರಿಂದ ಬಿಜೆಪಿ ನಾಯಕ ವಾಸೀಂ ಹತ್ಯೆ: ತಂದೆ, ಸಹೋದರನೂ ಬಲಿ

ಶ್ರೀನಗರ: ಬುಧವಾರ ರಾತ್ರಿ 9ಕ್ಕೆ ಜಮ್ಮು-ಕಾಶ್ಮೀರದ ಬಿಜೆಪಿ ನಾಯಕ ಶೇಖ್ ವಾಸೀಂ ಬಾರಿ, ಆತನ ತಂದೆ…

ಉತ್ತರಾಖಂಡ ಪ್ರವಾಹ: ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ

ಹಿಮಪಾತದಿಂದಾಗಿ ಉತ್ತರಾಖಂಡದ ಚಮೋಲಿಯಲ್ಲಿ ಉಂಟಾದ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಜ್ಯಸಭೆ ಚುನಾವಣೆ ಫಲಿತಾಂಶ: ಯಾವ ರಾಜ್ಯದಲ್ಲಿ ಯಾರು ಆಯ್ಕೆ..?

ಆಂಧ್ರವೈ.ಎಸ್.ಆರ್.ಸಿ. – 4 (ಡಿಸಿಎಂ ಪಿಳ್ಳಿ ಸುಭಾಷ್ ಚಂದ್ರ ಬೋಸ್, ಸಚಿವ ಎಂ.ವಿ.ರಮಣ, ಪರಿಮಳಾ ನತವಾನಿ,…