ಅಬುಧಾಬಿ : ಕೆ.ಎಲ್. ರಾಹುಲ್ ಅವರು ಮುಂದಿನ ಐಪಿಎಲ್ ನಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಅವರನ್ನು ಕೈ ಬಿಡಬೇಕು ಎಂದು ಹೇಳಿದ್ದಾರೆ.

ಆರಂಭದಲ್ಲಿ ನಾನು ನರ್ಸವಸ್ ಆಗಿದ್ದೆ. ಸದ್ಯ ಸಂತೋಷದಿಂದ ನಾನು ಟೂರ್ನಿ ಎದುರಿಸಿದ್ದೇನೆ. ಟೂರ್ನಿ ಆರಂಭವಾದ ಬಳಿಕ ಎಲ್ಲಾ ಸಂದೇಹಗಳು, ಭಯ ದೂರವಾಗಿವೆ. ಮಹಿ ಭಾಯ್ ಹಾಗೂ ನಿಮ್ಮಿಂದ ಆರಂಭದಿಂದಲೂ ಸಾಕಷ್ಟು ಕಲಿತ್ತಿದ್ದೇನೆ ಎಂದು ಕೊಹ್ಲಿಗೆ ಹೇಳಿದ್ದಾರೆ.

ಐಪಿಎಲ್ ನೀವು ನೋಡಲು ಬಯಸುವ ಬದಲಾವಣೆಗಳು ಯಾವುವು ಎಂದು ಕೇಳಿದ್ದ ಕೊಹ್ಲಿ ಅವರ ಪ್ರಶ್ನೆಗೆ ರಾಹುಲ್ ಉತ್ತರಿಸಿದ್ದಾರೆ. ಐಪಿಎಲ್‍ ನಲ್ಲಿ 5 ಸಾವಿರ ರನ್ ಗಳಿಸಿದ ಆಟಗಾರರನ್ನು ಬ್ಯಾನ್ ಮಾಡಬೇಕು. ಈ ಸಾಲಿನಲ್ಲಿ ಕೊಹ್ಲಿ ಹಾಗೂ ಎಬಿಡಿ ಸೇರಿದ್ದಾರೆ. ಹೀಗಾದರೆ ಸಾಧನೆ ಮಾಡಲು ಉಳಿದವರಿಗೂ ಅವಕಾಶ ಸಿಗಲಿದೆ ಎಂದು ಕೊಹ್ಲಿ ಕಾಲು ಎಳೆದಿದ್ದಾರೆ. 

ಯಾವುದೇ ಆಟಗಾರ 100 ಮೀಟರ್ ಗೂ ಹೆಚ್ಚು ದೂರ ಸಿಕ್ಸರ್ ಸಿಡಿಸಿದರೆ ಅದಕ್ಕೆ ಹೆಚ್ಚು ರನ್ ನೀಡುವ ವ್ಯವಸ್ಥೆ ಮಾಡಬೇಕು ಎಂದು ಕೂಡ ರಾಹುಲ್ ಹೇಳಿದ್ದಾರೆ. 

ನಾಯಕತ್ವ ವಹಿಸಿಕೊಳ್ಳುವುದು ನಮ್ಮ ವ್ಯಕ್ತಿತ್ವವನ್ನು ವೇಗವಾಗಿ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರಾಹುಲ್ ಹೇಳಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಪಂಜಾಬ್ ತಂಡ ಉತ್ತಮವಾಗಿ ಆಡುತ್ತಿದ್ದರೂ ಸೋಲು ಅವರ ಬೆನ್ನು ಬಿದ್ದಿದೆ. 7 ಪಂದ್ಯಗಳನ್ನು ಆಡಿರುವ ಪಂಜಾಬ್ ತಂಡ ಕೇವಲ ಒಂದು ಗೆಲುವು ಮಾತ್ರ ದಾಖಲಿಸಿದೆ. 

Leave a Reply

Your email address will not be published. Required fields are marked *

You May Also Like

ಕನ್ನಡಿಗನಿಗೆ ಒಲಿದು ಬರಲಿದೆಯೇ ಧೋನಿ ಸ್ಥಾನ!

ಮಹೇಂದ್ರಸಿಂಗ್ ಧೋನಿ ಅವರು ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಭಾರತೀಯ ತಂಡದ ವಿಕೇಟ್ ಕೀಪಿಂಗ್ ಬಗ್ಗೆ ಚರ್ಚೆಗಳು ಶುರುವಾಗಿದೆ. ಇದಕ್ಕೆ ಹತ್ತಾರು ಹೆಸರುಗಳು ಮುನ್ನೆಲೆಗೆ ಬಂದು ಚರ್ಚೆಗೆ ಕಾರಣವಾಗುತ್ತಿವೆ.

ಕಿಂಗ್ ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಭಿಮಾನಿಗಳು!

ಶಾರ್ಜಾ : ಇಂದಿನ ಪಂದ್ಯಕ್ಕೂ ಮೊದಲು ಮೈದಾನದಲ್ಲಿ ಕೊಹ್ಲಿ ಡ್ಯಾನ್ಸ್ ಮಾಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬಹುದಾದ ತಂಡ ಕೈಬಿಟ್ಟಿದ್ದಕ್ಕೆ ನಾಯಕ ಹೇಳಿದ್ದೇನು?

ದುಬೈ : ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬೇಕಾದ ಪಂದ್ಯವನ್ನು ಹೈದ್ರಾಬಾದ್ ಕೈ ಚೆಲ್ಲಿದೆ. ಹೀಗಾಗಿ ಟೀಕೆಗಳು ವ್ಯಕ್ತವಾಗುತ್ತಿವೆ.

ಆರಂಭಿಕ ಪಂದ್ಯಗಳಲ್ಲಿ ಕೊಹ್ಲಿ ವಿಫಲವಾಗಿದ್ದೇಕೆ?

ದುಬೈ : ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ ವೈಫಲ್ಯ ಅನುಭವಿಸಿರುವ ಹಿಂದಿನ ಕಾರಣವನ್ನು ಕಿಂಗ್ ಕೊಹ್ಲಿ ಬಿಚ್ಚಿಟ್ಟಿದ್ದಾರೆ.