ದುಬೈ : ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ ವೈಫಲ್ಯ ಅನುಭವಿಸಿರುವ ಹಿಂದಿನ ಕಾರಣವನ್ನು ಕಿಂಗ್ ಕೊಹ್ಲಿ ಬಿಚ್ಚಿಟ್ಟಿದ್ದಾರೆ.

ಆರಂಭಿಕ ಪಂದ್ಯಗಳಲ್ಲಿ ನನ್ನ ಮೇಲೆ ನಾನೇ ಹೆಚ್ಚು ಒತ್ತಡವನ್ನು ಹಾಕಿಕೊಂಡಿದ್ದೆ. ಹೀಗಾಗಿ ನಾನು ಆರಂಭಿಕ ಪಂದ್ಯಗಳಲ್ಲಿ ಅಷ್ಟೊಂದು ಉತ್ತಮವಾಗಿ ಬ್ಯಾಟಿಂಗ್ ಬೀಸರು ಆಗಲಿಲ್ಲ. ಸದ್ಯ ಒತ್ತಡದಿಂದ ಹೊರ ಬರುವ ಪ್ರಯತ್ನ ಮಾಡಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಅ. 10ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಅವರು 52 ಎಸೆತಗಳನ್ನು ಎದುರಿಸಿ ಅಜೇಯರಾಗಿ ಉಳಿದು 90 ರನ್ ದಾಖಲಿಸಿದ್ದರು. ಪರಿಣಾಮವಾಗಿ ಪ್ರಾರಂಭದಲ್ಲಿ ರನ್ ಕದಿಯಲು ಪರದಾಡಿದ್ದ ಬೆಂಗಳೂರು ತಂಡ 169 ರನ್ ಗಳನ್ನು ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಧೋನಿ ನೇತೃತ್ವದ ತಂಡ 132 ರನ್ ಗಳನ್ನು ಗಳಿಸಲು ಮಾತ್ರ ಯಶಸ್ವಿಯಾಯಿತು. ಕಿಂಗ್ ಕೊಹ್ಲಿ ಅವರ ಬ್ಯಾಟಿಂಗ್ ಹಾಗೂ ಅವರ ಹುಡುಗರ ಉತ್ತಮ ಬೌಲಿಂಗ್ ನಿಂದಾಗಿ ಚಾಲೆಂಜರ್ಸ್ ಗೆದ್ದು ಬೀಗಿದೆ. ಹೀಗಾಗಿ ಕೊಹ್ಲಿಯಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಆರಂಭದ ಪಂದ್ಯಗಳಲ್ಲಿ ಕೊಹ್ಲಿ ಅವರು, ಕ್ರಮವಾಗಿ 14, 1 ಹಾಗೂ 3 ರನ್‌ಗಳನ್ನು ಗಳಿಸಿದ್ದರು. ಆ ನಂತರದ ಪಂದ್ಯಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ ಅವರು, ನಾಟೌಟ್ 72, 43 ಹಾಗೂ ನಟೌಟ್ 90 ರನ್ ಗಳಿಸಿದ್ದಾರೆ. ಈಗಾಗಲೇ ಆಡಿದ ಒಟ್ಟು 6 ಪಂದ್ಯಗಳಿಂದ ಕೊಹ್ಲಿ 223 ರನ್ ಗಳನ್ನು ಕಲೆ ಹಾಕಿದ್ದಾರೆ. ಅಲ್ಲದೇ, ಬೆಂಗಳೂರು ಪರ ಗರಿಷ್ಠ ರನ್ ಬಾರಿಸಿದ ಆಟಗಾರ ಕೂಡ ಆಗಿದ್ದಾರೆ. ಇವರ ನಂತರದ ಸ್ಥಾನದಲ್ಲಿ 211 ರನ್ ಗಳನ್ನು ಗಳಿಸಿರುವ ದೇವದತ್ ಪಡಿಕ್ಕಲ್ ಇದ್ದಾರೆ.

ಪಂದ್ಯ ಮುಕ್ತಾಯದ ನಂತರ ಮಾತನಾಡಿದ ಅವರು, ನಾವು ಸಂಪೂರ್ಣ ಪ್ರದರ್ಶನ ತೋರಿದ ಪಂದ್ಯಗಳಲ್ಲಿ ಇದು ಒಂದು. ಮೊದಲು ಬ್ಯಾಟಿಂಗ್‌ ಮಾಡಲು ಉದ್ಧೇಶಿಸಿದ್ದ ನಮಗೆ ಅಪಾಯ ಸಂದರ್ಭ ಎದುರಾಗಿತ್ತು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಗೆಲ್ಲಲು ಒಂದು ರನ್ ಬೇಕಿದ್ದರೂ ಕೊಹ್ಲಿ ಓಡಿದ್ದು ಎರಡು ರನ್…ಏಕೆ?

ಅಬುಧಾಬಿ : ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್‌ ಸಿಬಿ ನಾಯಕ ವಿರಾಟ್‌ ಕೊಹ್ಲಿ ಅವರು ಗೆಲ್ಲಲು ಒಂದು ರನ್ ಬೇಕಿದ್ದರೂ 2 ರನ್ ಗಳನ್ನು ಓಡಿದ್ದಕ್ಕೆ ಜನರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ರಾಜ್ಯ ಮಟ್ಟದ ಶ್ರೀ ಸಂತ ಸೇವಾಲಾಲ್ ಕ್ರಿಕೆಟ್ ಕಪ್ ಪಂದ್ಯಾವಳಿ: ಹೂವಿನ ಹಡಗಲಿ ಕೆಸುಲ ವಾರಿಯರ್ಸ್ ತಂಡ ಆಯ್ಕೆ

ಹೂವಿನಹಡಗಲಿ: ಬೆಂಗಳೂರಿನಲ್ಲಿ ಶ್ರೀ ಸೇವಾಲಾಲ್ ಜಯಂತಿ ಪ್ರಯುಕ್ತ ದಿನಾಂಕ 04.02.2022 ರಿಂದ 06.02.2022 ರವರೆಗೆ ಟೂರ್ನಿ…

ಕೆ. ಎಚ್. ಪಾಟೀಲ ಫುಟಬಾಲ್ ಲೀಗ್-2022 ಉದ್ಘಾಟನೆ

ಉತ್ತರಪ್ರಭ ಸುದ್ದಿ ಗದಗ: ಕರ್ನಾಟಕ ಸ್ಫೋರ್ಟ್ಸ್ ಆ್ಯಂಡ್ ಎಜ್ಯುಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ಕೆ.…

ವಿರಾಟ್ ಕೊಹ್ಲಿ ಬಗ್ಗೆ ಕೋಚ್ ಹೇಳಿದ್ದೇನು?

ಮುಂಬಯಿ : ಭಾರತ ತಂಡದ ನಾಯಕ ವಿರಾಟ್ ಪರಿಸ್ಥಿತಿಗೆ ತಕ್ಕಂತೆ ತಮ್ಮ ಆಟ ಬದಲಾಯಿಸುತ್ತಾರೆ. ಇದೇ…