ಗದಗ: ಭೂಸುಧಾರಣೆ ವಿಚಾರವಾಗಿ ಸರಕಾರ ರೈತ‌ ವಿರೋಧಿ ನಿರ್ಣಯ ಕೈಗೊಂಡಿದೆ. ಶ್ರೀಮಂತರು ಹಾಗೂ ಕಂಪನಿಯವರಿಗೆ ಭೂಮಿ ಪಡೆಯಲು ಆದ್ಯತೆ‌ ನೀಡಿದೆ ಎಂದು ಶಾಸಕ ಎಚ್.ಕೆ.ಪಾಟೀಲ ವಿರೋಧ ವ್ಯಕ್ತಪಡಿಸಿದರು.
ಈ ಕುರಿತು ಗದಗನಲ್ಲಿ ಮಾತನಾಡಿದ ಅವರು, ಉಳುವವನ ಊರುಗೋಲು ಕಿತ್ತು, ಉಳ್ಳವನಿಗೆ ನೀಡುವ ಕೃತ್ಯ ಇದಾಗಿದ್ದು, ಕಪ್ಪು ಹಣ ಆಸ್ತಿ ರೂಪದಲ್ಲಿ ಪರಿವರ್ತನೆ ಮಾಡುವದಕ್ಕೆ ಅನುಕೂಲ ಆಗುವ ರೀತಿ ಕರಾಳ ನಿರ್ಣಯ ಇದಾಗಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಸರಕಾರ ಕ್ರಾಂತಿಕಾರಕ ಕಾನೂನು ಮಾಡಿದೆ. ಸಮಾಜವಾದಿ ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಹಣವಂತರಿಗೆ ಮಣೆ ಹಾಕುವ ಕೆಲಸ ಮಾಡಿದೆ. ಹೀಗಾಗಿ ರೈತರಿಗೆ ಮಾರಕವಾಗುವ ನಿರ್ಣಯವನ್ನು ತೀವ್ರವಾಗಿ ವಿರೋಧಿಸ್ತೇನೆ ಎಂದರು.

Leave a Reply

Your email address will not be published. Required fields are marked *

You May Also Like

ತಾಜ್ ಮಹಲ್ ಗೆ ಸಿಡಿಲು – ಹಾನಿ!

ಆಗ್ರಾ: ಸಿಡಿಲು ಬಡಿದ ಪರಿಣಾಮ ವಿಶ್ವ ವಿಖ್ಯಾತ ತಾಜ್ ಮಹಲ್ ಗೆ ಹಾನಿಯಾಗಿರುವ ಘಟನೆ ಉತ್ತರ…

ಸಚಿವ ಸಿ ಸಿ ಪಿ ಕ್ಷಮೆ ಯಾಚಿಸಲಿ: ಅರಬರ್

ಉತ್ತರಪ್ರಭ ಸುದ್ದಿ ಗದಗ: ಮೆಣಿಸಗಿ ಗ್ರಾಮದಲ್ಲಿ ಹರಿಜನ ಗಿರಿಜನ ಅಭಿವೃದ್ಧಿ ವಿವಿಧ ಕಾಮಗಾರಿ ಚಾಲನೆ ನೀಡಿ…

ಒಂದೇ ದಿನ ದಾಖಲೆಯ ಸೋಂಕಿತರನ್ನು ಹೊಂದಿದ ಭಾರತ!

ಬೆಂಗಳೂರು: ವಿಶ್ವ ಸೇರಿದಂತೆ ದೇಶದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ಹೆಚ್ಚಾಗುತ್ತಿದೆ. ದೇಶದಲ್ಲಿ ಮಹಾಮಾರಿ ಸೋಂಕಿತರ ಸಂಖ್ಯೆ…

ಕೊರೊನಾ ದುಷ್ಪರಿಣಾಮ: ನಗರಗಳ 14 ಕೋಟಿ ಜನರ ಬದುಕು ದುಸ್ತರ

ದೆಹಲಿ: ದೇಶಾದ್ಯಂತ ಕೊರೊನಾ ಕಾರಣದಿಂದಾಗಿ ಲಾಕ್ಡೌನ್ ದುಷ್ಪರಿಣಾಮ ನಗರ ಪ್ರದೇಶಗಳಲ್ಲಿ ವಾಸವಾಗಿರುವ ನಾಗರಿಕರ ಮೇಲೆ ಹೆಚ್ಚಾಗಿದೆ.…