ಬೆಂಗಳೂರು : ಪ್ರಸಕ್ತ ಸಾಲಿನ ಐಪಿಎಲ್ ಲೀಗ್ ನಲ್ಲಿ ಸೋಮವಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ. ಬ್ಯಾಟ್ಸಮನ್ ಗಳ ನೆಚ್ಚಿನ ಮೈದಾನದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.

ಇಲ್ಲಿಯವರೆಗೆ ಆಡಿರುವ ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಬೀಗಿರುವ ಕೋಲ್ಕತ್ತಾ ತಂಡ, ಟೇಬಲ್‌ ನಲ್ಲಿ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಇದೆ. ಹೀಗಾಗಿ ಎರಡೂ ತಂಡಗಳ ನಡುವಿನ ಈ ಕಾದಾಟ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇಲ್ಲಿಯವರೆಗಿನ ಅಂಕಿ – ಅಂಶಗಳ ಲೆಕ್ಕಾಚಾರ ಗಮನಿಸಿದರೆ, ಕೋಲ್ಕತ್ತಾ ತಂಡ ಬೆಂಗಳೂರಿಗಿಂತಲೂ ಬಲಿಷ್ಠವಾಗಿ ಕಾಣಿಸುತ್ತದೆ. ಆಡಿದ್ದ 25 ಪಂದ್ಯಗಳಲ್ಲಿ 15ರಲ್ಲಿ ಕೆಕೆಆರ್ ಗೆದ್ದಿದೆ. 10 ಪಂದ್ಯಗಳಲ್ಲಿ ಬೆಂಗಳೂರು ಗೆದ್ದು ಹಿನ್ನಡೆ ಸಾಧಿಸಿದೆ. ಕೋಲ್ಕತ್ತಾ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಕೆಕೆಆರ್ ವಿರುದ್ಧ ಆರ್ ಸಿಬಿಯ ಸರಾಸರಿ ರನ್ 151ರಷ್ಟಿದೆ. ಇನ್ನೂ ಆರ್ ಸಿಬಿ ವಿರುದ್ಧ ಕೆಕೆಆರ್ ಸರಾಸರಿ ರನ್ 163 ರಷ್ಟಿದೆ.

ಆರ್ ಸಿಬಿ ಪರ ಕೊಹ್ಲಿ 674 ರನ್ ಸಿಡಿಸಿ ಮಿಂಚಿದ್ದಾರೆ. ಕೆಕೆಆರ್‌ ಪರ ಆಂಡ್ರೆ ರಸೆಲ್ 292 ಹೆಚ್ಚಿನ ರನ್ ಗಳಿಸಿದ್ದಾರೆ. ಆರ್‌ಸಿಬಿ ಪರ ಚಹಲ್ 11 ವಿಕೆಟ್ ಗಳನ್ನು ಕಿತ್ತಿದ್ದಾರೆ. ಕೆಕೆಆರ್‌ ಪರ ಸುನಿಲ್ ನರೈನ್ 16 ವಿಕೆಟ್ ಕಿತ್ತಿದ್ದಾರೆ. ಆರ್ ಸಿಬಿ ಪರ ಕೊಹ್ಲಿ 14 ಕ್ಯಾಚ್ ಗಳನ್ನು ಹಿಡಿದಿದ್ದಾರೆ. ಇನ್ನೂ ಕೆಕೆಆರ್ ಪರ ಆಂಡ್ರೆ ರಸ್ಸೆಲ್ 4 ಕ್ಯಾಚ್ ಗಳನ್ನು ಹಿಡಿದಿರುವ ದಾಖಲೆ ಹೊಂದಿದ್ದಾರೆ.

Leave a Reply

Your email address will not be published. Required fields are marked *

You May Also Like

ನಿಡಗುಂದಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ
ಸದೃಢ ಮನಸ್ಸು ವಿಕಸನಕ್ಕೆ ಕ್ರೀಡೆಗಳು ಸಹಕಾರಿ- ಬಿ.ಟಿ.ಗೌಡರ

ಉತ್ತರಪ್ರಭ ಸುದ್ದಿ ನಿಡಗುಂದಿ: ಕ್ರೀಡೆಗಳಿಂದ ಸದೃಢ ದೇಹ,ಮನಸ್ಸು ಹೊಂದಬಹುದು. ಅವು ಶಾರೀರಿಕ ವಿಕಸನಕ್ಕೆ ಪ್ರೇರಕವಾಗಿವೆ ಎಂದು…

ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಚಟುವಟಿಕೆ ಉದ್ಘಾಟನೆ

ಉತ್ತರಪ್ರಭ ಸುದ್ದಿ ಲಕ್ಷ್ಮೇಶ್ವರ: ಪಟ್ಟಣದ ಶ್ರೀಮತಿ ಕಮಲಾ ಮತ್ತು ವೆಂಕಪ್ಪ ಎಂ ಅಗಡಿ ಇಂಜಿನಿಯರಿಂಗ್ ಕಾಲೇಜಿನ…

ಕೆ. ಎಚ್. ಪಾಟೀಲ ಫುಟಬಾಲ್ ಲೀಗ್-2022 ಉದ್ಘಾಟನೆ

ಉತ್ತರಪ್ರಭ ಸುದ್ದಿ ಗದಗ: ಕರ್ನಾಟಕ ಸ್ಫೋರ್ಟ್ಸ್ ಆ್ಯಂಡ್ ಎಜ್ಯುಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ಕೆ.…

ಗಂಗೂಲಿ ಬಗ್ಗೆ ಪಾರ್ಥಿವ್ ಪಟೇಲ್ ಹೇಳಿದ್ದೇನು?

ಮುಂಬಯಿ : ಕ್ರಿಕೆಟ್ ಇತಿಹಾಸದಲ್ಲಿ ಎಂ.ಎಸ್. ಧೋನಿಗಿಂತಲೂ ಸೌರವ್ ಗಂಗೂಲಿಯವರು ಬಹಳ ಪರಿಣಾಮಕಾರಿ ನಾಯಕ ಎಂದು ಭಾರತದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ.