ಉತ್ತರಪ್ರಭ ಸುದ್ದಿ

ನಿಡಗುಂದಿ: ಕ್ರೀಡೆಗಳಿಂದ ಸದೃಢ ದೇಹ,ಮನಸ್ಸು ಹೊಂದಬಹುದು. ಅವು ಶಾರೀರಿಕ ವಿಕಸನಕ್ಕೆ ಪ್ರೇರಕವಾಗಿವೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಟಿ.ಗೌಡರ ಹೇಳಿದರು. ಸಮೀಪದ ಮಣಗೂರ ಪುನರ್ವಸತಿ ಕೇಂದ್ರದಲ್ಲಿನ ಸಕಾ೯ರಿ ಪ್ರೌಢಶಾಲೆಯ ಮೈದಾನದಲ್ಲಿ ಬುಧವಾರ ಜಿಪಂ,ಸಮಾಜ ಕಲ್ಯಾಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯಾ೯ಲಯ ಬ.ಬಾಗೇವಾಡಿ ಇವರ ಸಹಯೋಗದಲ್ಲಿ ನಿಡಗುಂದಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ವತಿಯಿಂದ ಸಂಘಟಿಸಿದ್ದ ಪ್ರಸಕ್ತ 2022 ನೇ ಸಾಲಿನ ನಿಡಗುಂದಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಕ್ರೀಡಾಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಇಂದಿನ ಆಧುನಿಕ ಒತ್ತಡದಲ್ಲಿ ಕ್ರೀಡೆಗಳು ಮಾನಸಿಕ ನೆಮ್ಮದಿ ನೀಡಬಲ್ಲಂಥ ಶಕ್ತಿ ಕೇಂದ್ರಗಳಾಗಿವೆ. ಆರೋಗ್ಯ ಬಲವರ್ಧನೆಗೆ ಸಹಕಾರಿಯಾಗಿವೆ. ನಾಲ್ಕು ಗೋಡೆಗಳ ಮಧ್ಯೆ ವಿದ್ಯಾರ್ಜನೆ ಗೈದರೆ ಸಾಲದು. ಶಾರೀರಿಕ ಬೆಳವಣಿಗೆಗೆ ಹಾಗು ಬುದ್ದಿಮತ್ದೆ ಚುರುಕಿಗೆ ಉತ್ಸಾಹದಿಂದ ಮಕ್ಕಳು ಇಂಥ ಆಟೋಟಗಳಲ್ಲಿ ಕ್ರೀಡಾ ಮನೋಭಾವನೆಯಿಂದ ಪಾಲ್ಗೊಳ್ಳಬೇಕು. ಕ್ರೀಡೆ,ಶಿಕ್ಷಣದಲ್ಲಿ ಏನನ್ನಾದರೂ ಸಾಧಿಸುವ ಛಲ,ಗುರಿ ಇರಿಸಿಕೊಳ್ಳಬೇಕು ಎಂದರು. ಇತ್ತಿಚಿನ ಏಶಿಯನ್ ಕೂಟದಲ್ಲಿ ಭಾರತದ ಕ್ರೀಡಾಪಟುಗಳು ಪದಕಗಳ ಬೇಟೆಯಾಡಿ ಪ್ರಾಬಲ್ಯ ಮೆರೆದಿರುವುದು ದೇಶದ ಹೆಮ್ಮೆ. ಸೋಲು, ಗೆಲುವು ಮುಖ್ಯವಲ್ಲ. ಮೊದಲು ಆಟಗಳಲ್ಲಿ ಭಾಗವಹಿಸುವುದೇ ಮುಖ್ಯ ಎಂದರು.


ಕ್ರೀಡಾ ಜ್ಯೋತಿ ಸ್ವೀಕರಿಸಿದ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಅವಟಿ, ಶಾಲಾ ಮಕ್ಕಳು ಕ್ರೀಡೆಗಳ ಬಗ್ಗೆ ಒಲವು, ಅಭಿರುಚಿ ಬೆಳೆಸಿಕೊಳ್ಳಬೇಕು. ದೃಢ ಮನಸ್ಸು, ಸಮಚಿತ್ತ, ಏಕಾಗ್ರತೆ, ಕಠಿಣ ಪರಿಶ್ರಮ,ಆತ್ಮವಿಶ್ವಾಸದಂಥ ಧನಾತ್ಮಕ ಚಿಂತನಗಳೇ ವಿದ್ಯಾರ್ಥಿ ಸಮೂಹಕ್ಕೆ ಯಶೋಮಾರ್ಗಗಳಾಗಿವೆ. ಓದಿನೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯಿಂದ ತಮ್ಮ ಛಾಪು ಮೂಡಿಸಲು ಸತತ ಪ್ರಯತ್ತಿಸುತ್ತಿರಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು. ಕ್ರೀಡಾಕೂಟದ ತೀಪು೯ಗಾರರು ನಿಷ್ಪಕ್ಷಪಾತವಾಗಿ ತೀಪು೯ ನೀಡಿ ಪ್ರತಿಭೆಗಳನ್ನು ಗುರುತಿಸಬೇಕು. ಆ ನಿಟ್ಟಿನಲ್ಲಿ ಕ್ರೀಡಾಭಾವ ಆಟಗಾರರಲ್ಲಿ, ಕ್ರೀಡಾ ಅಭಿಮಾನಿಗಳಲ್ಲಿ ಮೈದೇಳುವಂತೆ ಪ್ರೇರಿಪಿಸಬೇಕು ಎಂದರು. ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ಎಲ್ಲ ಮಕ್ಕಳು ನಮ್ಮವರು ಎಂಬ ದೃಷ್ಟಿಯಿಂದ ಮಕ್ಕಳನ್ನು ಕ್ರೀಡಾಕೂಟದಲ್ಲಿ ಆಡಿಸಿ ಮೆರೆಸಿ. ಸಮಸ್ಯೆಗಳಾಗದಂತೆ ಕೂಟದ ನಿಣಾ೯ಯಕರು ಬದ್ದತೆಯಿಂದ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿ ಎಂದರು. ಪ್ರಾಚಾರ್ಯ ಲಕ್ಷ್ಮೀ ಪಲ್ಲೇದ, ರಮೇಶ ಮಾಡಬಾಳ, ಹಣಮಂತ ಪಾಟೀಲ, ಬಸವರಾಜ ವಂದಾಲ,ಎಂ.ಎಂ.ದೊಡಮನಿ, ಜಿ.ವೈ.ನಾಗರಾಳ, ಪ್ರಭು ಸಿಂದಗಿ, ಜಿ.ಎಂ.ಹಿರೇಮಠ, ಶೀಲವಂತರ ಮೇಡಂ, ಕರೆವ್ವ ಸಿಂದಗಿ ಇತರರಿದ್ದರು. ವಿ.ಎಂ.ಪವಾರ ಸ್ವಾಗತಿಸಿದರು. ಜಿ.ಎಚ್.ಹೂಗಾರ ಪ್ರಾಥಿ೯ನೆ ಹೇಳಿದರು. ಯಮನಪ್ಪ ಗುಂಡಕರ್ಜಗಿ ನಿರೂಪಿಸಿದರು. ಎಂ.ಎಸ್.ಸಜ್ಜನ ವಂದಿಸಿದರು.

Leave a Reply

Your email address will not be published. Required fields are marked *

You May Also Like

ಯುವ ಕಾಂಗ್ರೆಸ್ ಅಧ್ಯಕ್ಷ ಸರ್ಫರಾಜ್ ಅವರಿಗೆ ಅಭಿನಂದನೆ

ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸರ್ಫರಾಜ್ ಸೂರಣಗಿಯವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಅಭಿನಂದಿಸಿದರು.

ರೈತ ವಿರೋಧಿ ಕಾಯ್ದೆ ಹಾಗೂ ಬೆಲೆ ಏರಿಕೆ ಖಂಡಿಸಿ ರ್ಯಾಲಿ ಪ್ರತಿಭಟನೆ.

ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರರ್ಕಾರ, ಸುಳ್ಳು ಆಶ್ವಾಸನೆ ನೀಡುವದರ ಮೂಲಕ ಅಧಿಕಾರವನ್ನು ಪಡೆದುಕೊಂಡ ಮೇಲೆ ಚುನಾವಣೆಯ ಸಂಧರ್ಭದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ.

ಮದ್ಯ ಮಾರಾಟ ನಿಷೇಧಕ್ಕೆ ಗೋರ್ ಸೇನಾ ಒತ್ತಾಯ

ಮದ್ಯೆ ಮಾರಾಟ ಸಂಪೂರ್ಣವಾಗಿ ನಿಶೇಧಿಸುವಂತೆ ಒತ್ತಾಯಿಸಿ ಗೋರ್ ಸೇನಾ ಸಂಘಟನೆಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.