ಮುಂಬಯಿ : ಕ್ರಿಕೆಟ್ ಇತಿಹಾಸದಲ್ಲಿ ಎಂ.ಎಸ್. ಧೋನಿಗಿಂತಲೂ ಸೌರವ್ ಗಂಗೂಲಿಯವರು ಬಹಳ ಪರಿಣಾಮಕಾರಿ ನಾಯಕ ಎಂದು ಭಾರತದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ.

ಈಗ ಈ ಇಬ್ಬರ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿರುವ ಪಾರ್ಥಿವ್ ಪಟೇಲ್, ಇಬ್ಬರು ನಾಯಕರ ನಡುವೆ ಸ್ಪರ್ಧೆಯು ಮಾನ್ಯವಾಗಿರುತ್ತದೆ. ಇದರಲ್ಲಿ ಒಬ್ಬ ನಾಯಕ ಐಸಿಸಿಯ ಎಲ್ಲ ಟ್ರೋಫಿಗಳನ್ನು ಗೆದ್ದಿದ್ದರೆ, ಇನ್ನೊಬ್ಬ ನಾಯಕ ಕಷ್ಟದ ಕಾಲದಲ್ಲಿ ತಂಡವನ್ನು ಕಟ್ಟಿ ಬೆಳೆಸಿದ್ದಾರೆ. ಧೋನಿ ಅವರು ಟ್ರೋಫಿಗಳನ್ನು ಗೆದ್ದಿರಬಹುದು ಆದರೆ ತಂಡ ಕಟ್ಟಿದ್ದು ದಾದಾ. 2000ರ ನಂತರ ಸೌರವ್ ಗಂಗೂಲಿ ನಾಯಕರಾದಾಗ, ಭಾರತೀಯ ಕ್ರಿಕೆಟ್ ತಂಡ ಕಠಿಣ ಸಮಯವನ್ನು ಎದುರಿಸುತ್ತಿತ್ತು. ಈ ಸಂದರ್ಭದಲ್ಲಿಯೇ ವಿದೇಶಗಳಲ್ಲಿ ಸರಣಿ ಗೆದ್ದು ತಂದಿದ್ದಾರೆ ಎಂದು ಹೇಳಿದ್ದಾರೆ.

ನಾವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆದ್ದೇವು. ಜೊತೆಗೆ ಪಾಕಿಸ್ತಾನಕ್ಕೆ ಹೋಗಿ ಟೆಸ್ಟ್ ಸರಣಿಯನ್ನು ಗೆದ್ದಿದ್ದೇವೆ. ಈ ತಂಡವನ್ನು ಕಟ್ಟಿದ್ದು, ಗಂಗೂಲಿಯವರ ನಾಯಕತ್ವದಲ್ಲಿ. ದಕ್ಷಿಣ ಆಫ್ರಿಕಾದಲ್ಲಿ 2003ರ ವಿಶ್ವಕಪ್ನ0ಲ್ಲಿ ಭಾರತ ತಂಡವು ಫೈನಲ್ ತಲುಪುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ. ಆದರೆ ಅಂದು ನಾವು ಫೈನಲ್ ಪ್ರವೇಶ ಮಾಡಿದ್ದೆವು. ಧೋನಿ ಎಲ್ಲ ಟ್ರೋಫಿ ಗೆದ್ದರು, ನನಗೆ ತಂಡವನ್ನು ಕಟ್ಟಿ ಬೆಳಸಿದ ಗಂಗೂಲಿಯವರು ಇಷ್ಟ ಆಗುತ್ತಾರೆ ಎಂದು ತಿಳಿಸಿದ್ದಾರೆ.

ನಾಯಕ್ವದ ವಿಚಾರದಲ್ಲಿ ಗಂಗೂಲಿ ಮತ್ತು ಧೋನಿಯವರ ಅಂಕಿ ಅಂಶಗಳನ್ನು ನೋಡುವುದಾದರೆ, ಧೋನಿ 60 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 27 ಪಂದ್ಯದಲ್ಲಿ ಜಯಗಳಿಸಿ 27 ಪಂದ್ಯಗಳನ್ನು ಸೋತಿದ್ದಾರೆ. ಗಂಗೂಲಿಯವರು 50 ಟೆಸ್ಟ್ ಪಂದ್ಯಗಳಲ್ಲಿ 21 ಗೆಲುವುಗಳು ಮತ್ತು 13 ಸೋಲುಗಳನ್ನು ಕಂಡಿದ್ದಾರೆ. ಗಂಗೂಲಿಯವರು 146 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 76 ಪಂದ್ಯಗಳನ್ನು ಗೆದ್ದಿದ್ದಾರೆ. ಧೋನಿಯವರು ಬರೋಬ್ಬರಿ 200 ಏಕದಿನ ಪಂದ್ಯಗಳಲ್ಲಿ ನಾಯಕತ್ವ ವಹಿಸಿ 110 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಫೆ. 12 ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ

ಮುಳಗುಂದ ಸಮೀಪದ ಹೊಸೂರ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಯಂಗ್ ಸ್ಟಾರ್ ವತಿಯಿಂದ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಗಳನ್ನ ಇದೇ ಫೆ. 12 ರಂದು ಮಹಾಂತೇಶಗೌಡ ಗೌಡರ ಅವರ ಹೊಲದಲ್ಲಿ ಸಿದ್ದಗೊಳಿಸಿದ ಮೈದಾನದಲ್ಲಿ ಏರ್ಪಡಿಸಲಾಗಿದೆ. ಎಂದು ಸಮಿತಿ ಸದಸ್ಯ ಬಸವರಾಜ ಬಂಡಿವಡ್ಡರ ತಿಳಿಸಿದರು.

ಮಹಿಳಾ ವಿಶ್ವಕಪ್ ಆತಿಥ್ಯ ವಹಿಸಿದ ಭಾರತ!

2022 ರ ಮಹಿಳಾ ಏಷ್ಯನ್ ಕಪ್ ಆತಿಥ್ಯ ಭಾರತಕ್ಕೆ ಲಭಿಸಿದೆ. 1979ರ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಮಹತ್ವದ ಫುಟ್ಬಾಲ್ ಕ್ರಿಡಾಕೂಟ ನಡೆಯಲಿದೆ.

ಕೋಲ್ಕತ್ತಾ, ಬೆಂಗಳೂರು ತಂಡಗಳ ಹಿಂದಿನ ಇತಿಹಾಸ ಹೇಗಿದೆ?

ಬೆಂಗಳೂರು : ಪ್ರಸಕ್ತ ಸಾಲಿನ ಐಪಿಎಲ್ ಲೀಗ್ ನಲ್ಲಿ ಸೋಮವಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ. ಬ್ಯಾಟ್ಸಮನ್ ಗಳ ನೆಚ್ಚಿನ ಮೈದಾನದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.

ಧೋನಿ ನಿವೃತ್ತಿ ಘೋಷಿಸುವ ಸಿದ್ಧತೆಯಲ್ಲಿದ್ದಾರೆಯೇ?

ಅಬುಧಾಬಿ : ಮ್ಯಾಚ್ ವಿನ್ನರ್ ಧೋನಿ ಐಪಿಎಲ್ ಗೂ ನಿವೃತ್ತಿ ಘೋಷಿಸಲಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ. ಹಾಗಂತ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುತ್ತಿದ್ದಾರೆ.