ಮುಳಗುಂದ: ಶನಿವಾರ ರಾತ್ರಿ ಪಟ್ಟಣ ಸೇರಿದಂತೆ ಚಿಂಚಲಿ, ಕಲ್ಲೂರ ಹಾಗೂ ನೀಲಗುಂದ ಗ್ರಾಮಗಳ ವ್ಯಾಪ್ತಿಯಲ್ಲಿ ಒಂದು ಗಂಟೆಗೂ ಹೆಚ್ಚುಕಾಲ ಬಿರುಸಿನ ಮಳೆ ಸುರಿದಿದೆ.

ಮಳೆಯಿಂದ ಪಟ್ಟಣದ ಚರಂಡಿಗಳು ತುಂಬಿ ಹರಿದವು. ಕಳೆದ ಒಂದು ವಾರದಿಂದ ಮಳೆ ಬಿಡುವು ಹಿನ್ನಲೆ ರೈತರು ಶೇಂಗಾ ವಕ್ಕಣಿ ಸೇರಿದಂತೆ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದವು. ಮತ್ತೇ ಮಳೆಯಾದ ಪರಿಣಾಮ ಹತ್ತಿ, ಮೆಣಸಿನಕಾಯಿ, ಉಳ್ಳಾಗಡ್ಡಿ ಬೆಳೆಗಳು ಜಲಾವೃತವಾಗಿದ್ದು ಕೃಷಿ ಚಟುವಟಿಕೆ ಸ್ಥಗಿತವಾಗಿದೆ.

ಇನ್ನೂ ಮುಂಗಾರಿನ ಹೆಸರು, ಕಂಟಿ ಶೇಂಗಾ ಕೊಯ್ಲಿನ ನಂತರ ಹಿಂಗಾರು ಬಿತ್ತನೆಗೆ ಹೊಲ ಹದಗೊಳಿಸುವ ಕೆಲಸಕ್ಕೆ ಮಳೆ ಅಡ್ಡಿಯಾಗಿದೆ. ಸಧ್ಯ ಗೋವಿನ ಜೋಳ ಕಟಾವಿಗೆ ಬಂದಿದ್ದು ಕಟಾವಿಗೆ ಹಿನ್ನಡೆಯಾಗಿದೆ.

Leave a Reply

Your email address will not be published. Required fields are marked *

You May Also Like

ಜು.30 ರಿಂದ ಸಿಇಟಿ ಪರೀಕ್ಷೆ

ಜುಲೈ 30 ಮತ್ತು 31 ರಂದು ಸಿಇಟಿ ಪರೀಕ್ಷೆ ನಡೆಸಲಾಗುತ್ತಿದ್ದು, ಎಂದಿನಂತೆ ಆಫ್ ಲೈನ್ ನಲ್ಲಿ ಈ ಬಾರಿಯೂ ಪರೀಕ್ಷೆ ನಡೆಯಲಿದೆ ಎಂದಿದ್ದಾರೆ.

ಚಿಕ್ಕಪ್ಪ, ಮಗ ಸೇರಿ ಗಾಂಜಾ ಸೇವಿಸಿದರು…ಮತ್ತಿನಲ್ಲಿ ಜಗಳವಾಡಿದರು…ಮುಂದೇನಾಯ್ತು?

ಕೋಲಾರ : ಗಾಂಜಾ ಅಮಲಿನಲ್ಲಿ ತಮ್ಮ ಚಿಕ್ಕಪ್ಪನನ್ನೇ ಬಾಲಕ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಮಾಲೂರು ತಾಲೂಕಿನ ಬೆನ್ನಘಟ್ಟ ಗ್ರಾಮದಲ್ಲಿ ಘಟನೆ ನಡೆದಿದೆ.

ನಾಳೆಯಿಂದ ರಾಜ್ಯದಲ್ಲಿ ಬಸ್ ಸಂಚಾರ?: ನಿಯಮಗಳೇನು ಗೊತ್ತಾ?

ಬೆಂಗಳೂರು: ಲಾಕ್ ಡೌನ್ ನಿಂದ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ನಾಳೆಯಿಂದ ಮತ್ತೆ ಬಸ್…

ಶಾಲೆ ತೆರೆಯಬಾರದು ಎನ್ನುವುದಕ್ಕೆ ಸಿದ್ದರಾಮಯ್ಯ ಕೊಟ್ಟ ಉತ್ತರವೇನು ಗೊತ್ತಾ?

ಬೆಂಗಳೂರು : ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.