ಮುಂಬಯಿ : ಭಾರತ ತಂಡದ ನಾಯಕ ವಿರಾಟ್ ಪರಿಸ್ಥಿತಿಗೆ ತಕ್ಕಂತೆ ತಮ್ಮ ಆಟ ಬದಲಾಯಿಸುತ್ತಾರೆ. ಇದೇ ಅವರ ವಿಶೇಷ ಎಂದು ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ ಹೇಳಿದ್ದಾರೆ.

ಸಂದರ್ಶನವೊಂದಲ್ಲಿ ಮಾತನಾಡಿದ ವಿಕ್ರಮ್ ರಾಥೋಡ್, ಕೊಹ್ಲಿಯ ಬದ್ಧತೆ ಅವರ ಅತ್ಯುತ್ತಮ ಕೆಲಸ ಎಂದು ನಂಬುತ್ತೇನೆ. ಅವರು ವಿಶ್ವದ ಅತ್ಯುತ್ತಮ ಆಟಗಾರರಾಗಲು ಬಯಸುತ್ತಾರೆ. ಅದಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇದನ್ನು ನಾನು ಗಮನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಅವರು ಪ್ರತಿಯೊಂದು ಸನ್ನಿವೇಶಕ್ಕೆ ಹೊಂದಿಕೊಳ್ಳುತ್ತಾರೆ. ವಿರಾಟ್ ಒಂದೇ ರೀತಿ ಆಡುವ ಆಟಗಾರ ಮಾತ್ರವಲ್ಲ. ಅವರು ಎಲ್ಲ ಸ್ವರೂಪಗಳಲ್ಲಿ ವಿಭಿನ್ನವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇದು ಅವರ ಶಕ್ತಿ ಎಂದು ಹೇಳಿದ್ದಾರೆ.

ಭಾರತ ತಂಡದ ನಾಯಕ ವಿರಾಟ್ 86 ಟೆಸ್ಟ್ ಪಂದ್ಯಗಳನ್ನು ಆಡಿ 53.62 ಸರಾಸರಿಯಲ್ಲಿ 27 ಶತಕ ಸೇರಿ 7,240 ರನ್ ಗಳಿಸಿದ್ದಾರೆ. 248 ಏಕದಿನ ಪಂದ್ಯಗಳಲ್ಲಿ 11,867 ರನ್ ಮತ್ತು 81 ಟಿ20 ಪಂದ್ಯಗಳಲ್ಲಿ 2,794 ರನ್ ಗಳಿಸಿದ್ದಾರೆ. ಐಪಿಎಲ್ನಲ 177 ಪಂದ್ಯಗಳಲ್ಲಿ ಕೊಹ್ಲಿ ಇದುವರೆಗೆ 5,412 ರನ್ ದಾಖಲಿಸಿದ್ದಾರೆ.

Leave a Reply

Your email address will not be published.

You May Also Like

ಮಹದಾಯಿ ವಿಚಾರ: 4 ವಾರಗಳಲ್ಲಿ ಸಮಿತಿ ರಚಿಸಿ ವರದಿ ನೀಡಲು ಸುಪ್ರೀಂ ಆದೇಶ!

ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಮಲಪ್ರಭಾ ನದಿಗೆ ನೀರು ತಿರುಗಿಸುತ್ತಿದೆ ಎಂದು ಗೋವಾ ರಾಜ್ಯ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಗೋವಾ ಮನವಿ ಪರಿಶೀಲಿಸಿ ಇದಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಪರಿಶೀಲನೆ ನಡೆಸಲು ನಾಲ್ಕು ವಾರಗಳಲ್ಲಿ ತಜ್ಞರನ್ನೊಳಗೊಂಡ ಮೇಲುಸ್ತುವಾರಿ ಸಮಿತಿ ರಚಿಸಿ ವರದಿ ನೀಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಕೊರೊನಾ ಬಿಕ್ಕಟ್ಟು – ಹೊಸ ಮಾರ್ಗಸೂಚಿಯ ಮೊರೆ ಹೋದ ಸರ್ಕಾರ!

ಬೆಂಗಳೂರು: ಸದ್ಯ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ಬೇರೆ ಬೇರೆ ರಾಜ್ಯಗಳಿಂದಲೂ ಜನರು ರಾಜ್ಯಕ್ಕೆ…