ಲಕ್ನೋ : ಗೆಳೆಯನಿಗಾಗಿ ಪತ್ನಿಯೊಬ್ಬರು ಗಂಡನ ಮರ್ಮಾಂಗಕ್ಕೆ ಆಸಿಡ್ ಹಾಕಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೀರತ್ ನ ಟಿ.ಪಿ. ನಗರದಲ್ಲಿ ನಡೆದಿದೆ. ಪತ್ನಿಯ ದಾಳಿಯಿಂದ ಮನನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಗರದಲ್ಲಿ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳೊಂದಿಗೆ ವ್ಯಕ್ತಿಯೊಬ್ಬ ವಾಸಿಸುತ್ತಿದ್ದರು. ಇತ್ತೀಚೆಗೆ ಸ್ಥಳೀಯ ವೈದ್ಯನೊಬ್ಬನ ಜೊತೆ ಸ್ನೇಹ ಬೆಳೆಸಿದ್ದ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ರೆಡ್ ಹ್ಯಾಂಡ್ ಆಗಿ ಪತಿ ಹಿಡಿದಿದ್ದ. ಆದರೆ, ಇದರಿಂದ ಕೋಪಗೊಂಡ ಪತ್ನಿ, ಗೆಳೆಯನ ಜೊತೆ ಸೇರಿ ಪತಿಯ ಮರ್ಮಾಂಗಕ್ಕೆ ಆಸಿಡ್ ಎರಚಿದ್ದಾರೆ. ಈ ಕುರಿತು ಮಹಿಳೆ ವಿರುದ್ಧ ದೂರು ದಾಖಲಾಗಿದ್ದು, ಇಬ್ಬರೂ ಜೈಲಿನಲ್ಲಿದ್ದಾರೆ.

ಮಹಿಳೆ ಕುಟುಂಬಸ್ಥರ ಆಹಾರದಲ್ಲಿ ನಿದ್ದೆ ಮಾತ್ರೆ ಸೇರಿಸುತ್ತಿದ್ದಳು. ಎಲ್ಲರೂ ನಿದ್ದೆಗೆ ಜಾರಿದಾಗ ವೈದ್ಯನ ಜೊತೆ ಚಕ್ಕಂದ ಆಡುತ್ತಿದ್ದಳು.

ಸದ್ಯ ಈ ಘಟನೆಯಿಂದಾಗಿ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಇದರಿಂದ ಮಾನಸಿಕವಾಗಿ ನೊಂದ ಪತಿ ಕಾರ್ಖಾನೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಿದ್ದಾರೆ. ಮೂವರು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದ್ದು, ಸದ್ಯ ಅವರು ತಬ್ಬಲಿಯಾಗಿದ್ದಾರೆ.

Leave a Reply

Your email address will not be published. Required fields are marked *

You May Also Like

ರೈತರ ಬೆಂಬಲ ; ಫೆ.18 ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ

ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ದೇಶಾದ್ಯಂತ ರೈಲು ತಡೆಗೆ ಕರೆ ನೀಡಿದ್ದು, ಈ ಕರೆಗೆ ಓಗೊಟ್ಟು ರಾಜ್ಯ ರೈತ ಸಂಘಟನೆಗಳು ರಾಜ್ಯದಾದ್ಯಂತ ರೈಲು ತಡೆ ಚಳವಳ ನಡೆಸಲಿದ್ದಾ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಕೋರ್ಟ್ ಸೂಚನೆ ಪಾಲಿಸದಿದ್ದರೆ ಶಿಕ್ಷೆ!

ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಮೇಲ್ವಿಚಾರಣ ಸಮಿತಿ ನೀಡಿರುವ ಸಲಹೆ ಮತ್ತು ಸೂಚನೆಗಳನ್ನು ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮ ಜರಗಿಸಲಾಗುವುದು ಎಂದು ಕೋರ್ಟ್‌ ಸಿಬಂದಿಗೆ ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

ಪ್ಲಾಸ್ಮಾ ಥೆರೆಪಿ ಭರವಸೆ ಹುಸಿಯಾಯಿತೇ?

ಕೊರೊನಾ ಚಿಕಿತ್ಸೆಗೆ ಪ್ಲಾಸ್ಲಾ ಥೆರೆಪಿ ರಾಮಬಾಣ ಎಂದೇ ಎಲ್ಲರೂ ಹೇಳುತ್ತಿದ್ದರು. ಆದರೆ, ಸದ್ಯ ಇದು ಹುಸಿಯಾಗಿದೆ ಎನ್ನಲಾಗುತ್ತಿದೆ.

ಕೊರೋನಾ : ನಗರ ಪ್ರದೇಶಗಳ ಆತಂಕ

ನವದೆಹಲಿ : ಕೊರೊನಾದಿಂದಾಗಿ ನಗರ ಪ್ರದೇಶಗಳು ಅಕ್ಷರಶಃ ಆತಂಕದಲ್ಲಿ ಇವೆ. ಕೊರೊನಾದಿಂದಾಗಿ ನಿರುದ್ಯೋಗ, ಬಡತನ, ಅಸಮಾನತೆ…