ಬೆಂಗಳೂರು: ತನ್ನನ್ನೇ ಸರ್ವಸ್ವ ಎಂದು ನಂಬಿಕೊಂಡು ಬಂದಿದ್ದ ಪತ್ನಿಗೆ, ಪಾಪಿಯೊಬ್ಬ ಅಮಾನವೀಯವಾಗಿ ನಡೆದುಕೊಂಡಿದ್ದಾನೆ.
ಪಾಪಿಯ ಈ ಕೃತ್ಯದಿಂದಾಗಿ ಮಹಿಳೆ ಸಾವು – ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದಾರೆ. ಈ ಪಾಪಿಯನ್ನು ಸೂರಜ್ ಸಿಂಗ್ ಎಂದು ಗುರುತಿಸಲಾಗಿದೆ. ಪೋಷಕರು, ಮಗಳು ಗಂಡನ ಮನೆಯಲ್ಲಿ ಸಂತೋಷದಿಂದ ಇರಲಿ ಎಂಬ ಕಾರಣಕ್ಕೆ ಸಾಕಷ್ಟು ಖರ್ಚು ಮಾಡಿ ಮದುವೆ ಮಾಡಿದ್ದರು. ಸುಮಾರು ರೂ. 15 ಲಕ್ಷ ಖರ್ಚು ಮಾಡಿದ್ದರು. ಅಲ್ಲದೇ, ವರದಕ್ಷಿಣೆಯಾಗಿ ಕೈ ತುಂಬ ಹಣ ಹಾಗೂ ಚಿನ್ನ ನೀಡಿದ್ದರು.
ಇಷ್ಟೆಲ್ಲ ಹಣ ನೀಡಿದರೂ ಪಾಪಿ ಮಾತ್ರ ಮತ್ತೆ ಹಣ ತರುವಂತೆ ಪತ್ನಿಗೆ ಆಗಾಗ ಕಿರುಕುಳ ನೀಡುತ್ತಿದ್ದ. ಹೀಗಾಗಿ ಪತ್ನಿ, ಪತಿಯ ಕಿರುಕುಳಕ್ಕೆ ಬೇಸತ್ತು ಒಂದೆರಡು ಬಾರಿ ತವರು ಮನೆಗೆ ಹೋಗಿ ಹಣ ತಂದಿದ್ದರು. ಆದರೂ ಪತಿಯ ಕಿರುಕುಳ ಮಾತ್ರ ನಿಂತಿರಲಿಲ್ಲ. ಅಷ್ಟೇ ಅಲ್ಲದೇ, ಆತನೊಂದಿಗೆ ಆತನ ತಾಯಿಯೂ ಸಾಥ್ ನೀಡುತ್ತಿದ್ದರು.
ಇತ್ತೀಚೆಗಷ್ಟೇ ಯುವತಿಯ ಮೇಲೆ ತಾಯಿ ಹಾಗೂ ಮಗ ಸೇರಿಕೊಂಡು ಕಿರುಕುಳ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಾಪಿ ಮಹಿಳೆಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪತಿಯ ಈ ಕಿರುಕುಳಕ್ಕೆ ಪತ್ನಿ ಸಾವು – ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಸದ್ಯ ಈ ಪಾಪಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಈ ಕುರಿತು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.