ಬೆಂಗಳೂರು : ಕೆಕೆಆರ್ ತಂಡದ ಆಲ್ ರೌಂಡರ್ ಆಂಡ್ರೆ ರಸೆಲ್ ಅವರು ಸ್ಥಿತಿ ಪ್ರದರ್ಶನ ತೋರಲು ವಿಫಲರಾಗುತ್ತಿದ್ದಾರೆ. ಇದರ ನಡುವೆ ಸಭ್ಯತೆ ಮರೆತ ಅಭಿಮಾನಿಗಳು, ರಸ್ಸೆಲ್ ಅವರ ಪತ್ನಿಗೆ ಪೋಸ್ಟ್ ಹಾಕಿ ಕಾಮೆಂಟ್ ಮಾಡುತ್ತಿದ್ದಾರೆ.

ಐದು ಪಂದ್ಯಗಳಲ್ಲಿ ಆಡಿರುವ ರಸ್ಸೆಲ್ ಕೇವಲ 50 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 12.50ರಷ್ಟಿದೆ. ಬೌಲಿಂಗ್‌ ನಲ್ಲಿಯೂ ನಿಯಮಿತವಾಗಿ ವಿಕೆಟ್ ಪಡೆಯಲು ಕೂಡ ಅವರು ವಿಫಲರಾಗುತ್ತಿದ್ದಾರೆ. ಒಟ್ಟು 5 ಪಂದ್ಯಗಳಲ್ಲಿ 5 ವಿಕೆಟ್ ಪಡೆದಿದ್ದಾರೆ. ಸದ್ಯ ನೆಟ್ಟಿಗರು, ರಸ್ಸೆಲ್ ಪತ್ನಿ ಜೆಸ್ಸಿ ಲೋರಾ ಅವರನ್ನು ಆಂಟಿ ಎಂದು ಕರೆದು, ನೀವು ದುಬೈಗೆ ಹೋಗಿ. ರಸ್ಸೆಲ್ ಅವರಲ್ಲಿ ಸ್ಪೂರ್ತಿ ತುಂಬಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

ರಸ್ಸೆಲ್ ಪತ್ನಿ ಜಸ್ಸಿ ಲೋರಾ ಅವರು ಇಂತಹ ಕಮೆಂಟ್ ಗೆ ಪ್ರತಿಕ್ರಿಯಿಸಿ, ಅವರು(ರಸ್ಸೆಲ್) ಉತ್ತಮ ಫಾರ್ಮ್ ನಲ್ಲಿದ್ದಾರೆ.. ಎಂದು ಹಾಕಿದ್ದಾರೆ. ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ಬಹುತೇಕ ಆಟಗಾರರು ತಮ್ಮ ಪತ್ನಿ ಹಾಗೂ ಕುಟುಂಬಸ್ಥರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿಲ್ಲ. ಸೋಂಕು ಹರಡದಂತೆ ನಿಯಂತ್ರಣ, ತಂಡದ ನಿರ್ವಹಣೆ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಾಕಷ್ಟು ಕಾಳಜಿ ವಹಿಸಿದೆ. ಹೀಗಾಗಿಯೇ ಆಪ್ತರ ಸಂಖ್ಯೆ ತೀರಾ ಕಡಿಮೆ ಇದೆ.

Leave a Reply

Your email address will not be published. Required fields are marked *

You May Also Like

ರೈನಾ, ರಾಯುಡುರನ್ನು ಚೆನ್ನೈ ನೆನೆಯುತ್ತಿರುವುದೇಕೆ?

ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಎರಡು ಸೋಲುಗಳನ್ನು ಕಾಣುತ್ತಿದ್ದಂತೆ ಕೋಚ್ ಗೆ ತಲೆನೋವು ಶುರುವಾಗಿದೆ. ಸುರೇಶ್ ರೈನಾ ಮತ್ತು ಅಂಬಾಟಿ ರಾಯುಡು ಅವರು ಅನುಪಸ್ಥಿತಿ ಕಾಡುತ್ತಿದೆ ಎಂದು ಕೋಚ್ ಅಭಿಪ್ರಾಯಪಟ್ಟಿದ್ದಾರೆ.

ಅನಿಲ್ ಕುಂಬ್ಳೆಗೆ ಶುಭಾಶಯ ಕೋರಿ ಸಾಧನೆ ಕೊಂಡಾಡಿದ ಸುದೀಪ್!

ಬೆಂಗಳೂರು : ಕಿಚ್ಚ ಸುದೀಪ್ ಅವರು ಮಾಜಿ ಕ್ರಿಕೆಟ್ ಅನಿಲ್ ಕುಂಬ್ಳೆ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ, ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

ಮಾಜಿ ಕ್ರಿಕೆಟ್ ಕ್ಯಾಪ್ಟನ್ ಮೇಲೊಂದು ಜೀವನ ಚಿತ್ರ.

ನವದೆಹಲಿ: ನಮ್ಮೆಲ್ಲರ ನೆಚ್ಚಿನ ಭಾರತದ ಮಾಜಿ ಕ್ಯಾಪ್ಟನ್ ಹಾಗೂ ದಾದಾ ಎಂದಲೆ ಹೆಸರಾದಂತ ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರು ಬಾಲಿವುಡ್ ನಲ್ಲಿ ತಮ್ಮ ಜೀವನ ಚರಿತ್ರೆ ಮೇಲೊಂದು ಚಿತ್ರದ ಚಿತ್ರೀಕರಣಕ್ಕೆ ಒಪ್ಪಿಕೊಂಡಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಸುಲಭ ಮೊತ್ತದ ಗುರಿ ನೀಡಿದ ಹೈದರಾಬಾದ್!

ಶಾರ್ಜಾ : ಮನೀಶ್ ಪಾಂಡೆ ಅವರ ಅರ್ಧಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ…