ವಾಷಿಂಗ್ಟನ್ : ಅಧ್ಯಕೀಯ ಚುನಾವಣೆಯ ಚರ್ಚೆಯಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷಿಯ ಚುನಾವಣೆ ಹಿನ್ನೆಲೆಯಲ್ಲಿ ಅ. 15ರಂದು ಚರ್ಚೆ ನಿಗದಿಯಾಗಿತ್ತು. ಆದರೆ, ಇದಕ್ಕೆ ಟ್ರಂಪ್ ಒಪ್ಪಿಗೆ ಸೂಚಿಸಿಲ್ಲ. ಕೊರೊನಾ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ಮೇಲೆ ಟ್ರಂಪ್ ಮೊದಲ ಬಾರಿಗೆ ಶ್ವೇತ ಭವನಕ್ಕೆ ತೆರಳಿದ್ದಾರೆ. ಅಲ್ಲದೇ, ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಕೂಡ ಅವರು ಭಾಗವಹಿಸಿದ್ದಾರೆ.

ಅ. 15ಕ್ಕೆ ಚರ್ಚೆಯನ್ನು ಅಧ್ಯಕ್ಷೀಯ ಚರ್ಚೆಗಳ ಆಯೋಗ (ಸಿಪಿಡಿ) ಆಯೋಜಿಸಿದೆ. ಇದು ಅಧ್ಯಕ್ಷರ 2ನೇ ಚರ್ಚೆಯಾಗಿತ್ತು. ವಿವಿಧ ಪ್ರದೇಶಗಳಿಂದ ವರ್ಚುವಲ್ ಚರ್ಚೆಯಲ್ಲಿ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದು ಸಿಡಿಪಿ ಹೇಳಿತ್ತು.

ಆದರೆ, ಟ್ರಂಪ್ ಅವರು, ಈ ಸಂದರ್ಶನದಲ್ಲಿ ಜೋ ಬೈಡನ್ ಜೊತೆಗೆ ನಾವು ಭಾಗವಹಿಸುವುದಿಲ್ಲ. ಆಯೋಗವು ಚರ್ಚೆಯನ್ನು ಬಾಗವಹಿಸಿದರೆ ನಾವು ಒಪ್ಪಿಗೆ ಸೂಚಿಸುವುದಿಲ್ಲ. ವರ್ಚುವಲ್ ಡಿಬೇಟ್‌ನಲ್ಲಿ ಪಾಲ್ಗೊಳ್ಳುವುದಿಲ್ಲ. ಇಂತಹ ಚರ್ಚೆಯಲ್ಲಿ ಭಾಗವಹಿಸಿ ನನ್ನ ಸಮಯ ವ್ಯರ್ಥ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಟ್ರಂಪ್ ಸಂದರ್ಶನದಲ್ಲಿ ಹೇಳಿದ್ದಾರೆ.

ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಬೈಡನ್, ಅಧ್ಯಕ್ಷರು ಏನು ಮಾಡುತ್ತಿದ್ದಾರೆ ಎಂಬುವುದೇ ತಿಳಿಯುತ್ತಿಲ್ಲ. ಸೆಕೆಂಡಿಗೊಮ್ಮೆ ಅವರ ಮನಸ್ಸು ಬದಲಾಯಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *

You May Also Like

ಚೀನಾ ಸಂಘರ್ಷದ ಬೆನ್ನಲ್ಲಿಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾ ಪ್ರವಾಸ

ನವದೆಹಲಿ: ಚೀನಾ ಸಂಘರ್ಷದ ಬೆನ್ನಲ್ಲಿಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾ ಪ್ರವಾಸ ಕೈಗೊಂಡಿದ್ದು, ಹಲವು…

7.7 ತೀವ್ರತೆಯ ಭೂಕಂಪ; ಸುನಾಮಿ ಖಚಿತ ಪಡಿಸಿದ ಆಸ್ಟ್ರೆಲಿಯಾದ ಹವಾಮಾನ ಇಲಾಖೆ

ದಕ್ಷಿಣ ಪೆಸಿಫಿಕ್‌ನಲ್ಲಿ 7.7 ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮ ಸುನಾಮಿ ಸೃಷ್ಟಿಯಾಗಿದೆ ಎಂದು ಆಸ್ಟ್ರೆಲಿಯಾದ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.

ದುಬೈನಲ್ಲಿಯೂ ನೆಲೆಸಿತು ಬಸವಣ್ಣನವರ ಪ್ರತಿಮೆ!

ಬೆಂಗಳೂರು : ಕ್ರಾಂತಿಕಾರಿ ಬಸವಣ್ಣನ ವಚನ, ಸಾಹಿತ್ಯದ ಮಹತ್ವ ಹಾಗೂ ವಿಚಾರಧಾರೆ ದೇಶದ ಗಡಿಯಾಚೆಗೂ ಪಸರಿಸಿದೆ.ಎಂ.ಬಿ.ಪಾಟೀಲ್…

ಶೃಂಗಸಭೆಯಲ್ಲಿ ಭಾರತ ಸೇರಿಸುವಂತೆ ಟ್ರಂಪ್ ಮನವಿ

ಅಮೇರಿಕಾ: ಮುಂದಿನ ತಿಂಗಳು ನಡೆಯಬೇಕಿದ್ದ ಜಿ7 (ಗ್ರೂಪ್ ಆಫ್‌ 7) ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್…