ಮುಂಬಯಿ : ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ನಾಲ್ಕು ಸೋಲುಗಳನ್ನು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಸಾಲು ಸಾಲು ಸೋಲುಗಳನ್ನು ಕಾಣುತ್ತಿದೆ. ಈ ನಿಟ್ಟಿನಲ್ಲಿ ಅಂಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗೆ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಗೆಲ್ಲುವ ಪಂದ್ಯವನ್ನೇ ಕೈ ಚೆಲ್ಲಿದೆ. ಹೀಗಾಗಿ ಸೆಹ್ವಾಗ್ ಕೂಡ ವ್ಯಂಗ್ಯವಾಡಿದ್ದಾರೆ. 

ಚೆನ್ನೈ ಆರಂಭದಿಂದಲೂ ಗೆಲ್ಲುವ ತಂಡವಾಗಿತ್ತು. ಉತ್ತಮವಾಗಿಯೇ ಆಟವಾಡುತ್ತಿತ್ತು. ಆದರೆ, ಕೊನೆಯಲ್ಲಿ ಕೇದರ್ ಜಾದವ್, ರವೀಂದ್ರ ಜಡೇಜಾ ಅವರ ಬ್ಯಾಟಿಂಗ್ ಸೋಲಿಗೆ ಕಾರಣವಾಯಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸೆಹ್ವಾಗ್ ಅವರು, ಚೆನ್ನೈ ತಂಡದ ಕೆಲ ಬ್ಯಾಟ್ಸ್ ಮನ್ಸ್ ತಮಗೆ ಸಿಕ್ಕಿರುವ ಸ್ಥಾನವನ್ನು ಸರ್ಕಾರಿ ಉದ್ಯೋಗ ಎಂದು ಭಾವಿಸಿದ್ದಾರೆ. ಉತ್ತಮ ಪ್ರದರ್ಶನ ನೀಡದರೂ, ನೀಡದಿದ್ದರೂ ಅವರಿಗೆ ತಲುಪಬೇಕಾದ ವೇತನ ತಲುಪತ್ತದೆ ಎಂದು ಅವರಿಗೆ ತಿಳಿದಿದೆ ಎಂದು ವ್ಯಂಗ್ಯವಾಡಿದ್ದಾರೆ.

ಅಷ್ಟೇ ಅಲ್ಲದೇ, ಕೇದಾರ್ ಅವರ ಬ್ಯಾಟಿಂಗ್ ವೈಖರಿಯನ್ನು ಸೆಹ್ವಾಗ್ ಅವರು, ತಾವು ಇತ್ತೀಚೆಗೆ ಬರೆದಿದ್ದ ಫೇಸ್ಬುಾಕ್ ಸೀರಿಸ್ ವಿರು ಕೀ ಬೈಥಕ್ನ್ಲ್ಲಿಯೂ ಟೀಕೆ ವ್ಯಕ್ತಪಡಿಸಿದ್ದಾರೆ. ಜಾದವ್ ಉಪಯೋಗಕ್ಕೆ ಬಾರದ ಅಲಂಕಾರಿಕ ವಸ್ತು ಇದ್ದಂತೆ ಇದ್ದಾರೆ. 12 ಎಸೆತಗಳಲ್ಲಿ 7 ರನ್ ಗಳಿಸಿದ ಜಾದವ್ಗೆದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಬೇಕಿತ್ತು ಎಂದು ಟೀಕೆ ಮಾಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಚಿಕ್ಕ ವಯಸ್ಸಿನಲ್ಲಿಯೇ ಐಪಿಎಲ್ ನಲ್ಲಿ ಅಬ್ಬರಿಸಿದ ವೀರರು ಇವರು!

ದುಬೈ : ಐಪಿಎಲ್ ನ 6ನೇ ಪಂದ್ಯದ ಸಮಯದಲ್ಲಿ ಭಾರತದ ಯುವ ಆಟಗಾರ ಪೃಥ್ವಿ ಶಾ…

ಆನ್ ಲೈನ್ ಜೂಜಿನಿಂದ ಯುವಕರ ಆತ್ಮಹತ್ಯೆ – ಗಂಗೂಲಿ, ಕೊಹ್ಲಿಗೆ ನೊಟೀಸ್!

ಚೆನ್ನೈ : ಆನ್ ಲೈನ್ ಜೂಜಾಟದಿಂದಾಗಿ ಸದ್ಯ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ಯಾಂಬ್ಲಿಂಗ್ ಅನ್ನು ಉತ್ತೇಜಿಸುತ್ತಿರುವ ಜಾಹಿರಾತುಗಳಲ್ಲಿ ನಟಿಸಿರುವ ಸೆಲೆಬ್ರಿಟಿಗಳಿಗೆ ನೊಟೀಸ್ ನೀಡಲಾಗಿದೆ.

ಸಿನಿಮಾದಲ್ಲಿ ಮೂಡಿ ಬರಲಿದೆ ಮುರಳೀಧರನ್ ಜೀವನ!

ವಿಶ್ವ ಬ್ಯಾಟಿಂಗ್ ದಿಗ್ಗಜರ ನಿದ್ದೆಗೆಡಿಸಿದ್ದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ನಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಹಾರ್ದಿಕ್ ಪಾಂಡ್ಯಗೆ ಗೆಳತಿಯ ಸಂದೇಶ!

ಮುಂಬಯಿ : ನೀವು ನನ್ನ ಪೂರ್ಣಗೊಳಿಸಿದ್ದೀರಿ ಎಂದು ಭಾರತ ಕ್ರಿಕೆಟ್ ತಂಡದ ಆಲ್ರೌಂವಡರ್ ಹಾರ್ದಿಕ್ ಪಾಂಡ್ಯ ಅವರ ಗೆಳತಿ ನತಾಶಾ ಸ್ಟಾಂಕೋವಿಕ್ ಹೇಳಿದ್ದಾರೆ.