ಬೆಂಗಳೂರು : ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾರೂ ಊಹಿಸದ ರೀತಿಯಲ್ಲಿ ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಸೋಲು ಕಾಣುತ್ತಿದೆ.

ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೇದಾರ್ ಜಾಧವ್ ವಿಲನ್ ಆಗಿದ್ದಾರೆ ಎಂದು ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಗೆಲ್ಲುವ ಹಾದಿಯಲ್ಲಿದ್ದ ಚೆನ್ನೈ ತಂಡವನ್ನು ಕೇದಾರ್ ಜಾಧವ್ ಸೋಲಿಗೆ ಸಿಲುಕಿಸಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಕೊನೆಯ ಹಂತದಲ್ಲಿ ಬ್ಯಾಟ್ಸಮನ್ ಗಳು ವೈಫಲ್ಯ ಅನುಭವಿಸಿದ್ದರಿಂದಾಗಿ 10 ರನ್ ಗಳ ಸೋಲು ಕಂಡಿತು. ಈ ಸೋಲಿಗೆ ಕೇದಾರ್ ಜಾಧವ್ ಕಳಪೆ ಆಟವೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.

ಅಲ್ಲದೇ, ಈಗ ಸಾಮಾಜಿಕ ಜಾಲತಾಣದಲ್ಲಿ ಚೆನ್ನೈ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದು, ಕೇದಾರ್ ಕೈ ಬಿಟ್ಟು, ರೈನಾರನ್ನು ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಧೋನಿ ಕೂಡ ವೈಫಲ್ಯ ಅನುಭವಿಸುತ್ತಿರುವುದು ಕೂಡ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಕೋಲ್ಕತ್ತಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ, ಕೇವಲ 11 ಎಸೆತಗಳಲ್ಲಿ 12 ರನ್ ಗಳಿಸಿದ್ದರು. ಧೋನಿ ಔಟಾಗುತ್ತಿದಂತೆ ರವೀಂದ್ರ ಜಡೇಜಾ ಅಥವಾ ಡ್ವೇಯ್ನೆ ಬ್ರಾವೋ ಅವರನ್ನು ಕಳುಹಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆ ಸಂದರ್ಭದಲ್ಲಿ ಚೆನ್ನೈಗೆ ಗೆಲ್ಲಲು 21 ಎಸೆತಗಳಲ್ಲಿ 38 ರನ್ ಬೇಕಿತ್ತು.

ಆದರೆ, ಆ ಸಂದರ್ಭದಲ್ಲಿ ಮೈದಾನಕ್ಕೆ ಕೇದಾರ್ ಬಂದರು. 12 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಸೋಲಿಗೆ ಪ್ರಮುಖ ಕಾರಣರಾದರು. ಚೆನ್ನೈ ತನ್ನ ಮುಂದಿನ ಪಂದ್ಯವನ್ನು ಆರ್ ಸಿಬಿ ವಿರುದ್ಧ ದುಬೈನಲ್ಲಿ ಅಕ್ಟೋಬರ್ 10ರಂದು ಆಡಲಿದೆ. ಇಲ್ಲಿಂದ ಮುಂದೆ 6 ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಗೆ ಅರ್ಹತೆ ಪಡೆದುಕೊಳ್ಳಬಹುದು. ಹೀಗಾಗಿ ಅಭಿಮಾನಿಗಳು ಇನ್ನಾದರೂ ಎಲ್ಲರೂ ಬ್ಯಾಟ್ ಬೀಸಿ ಹಾಗೂ ರೈನಾರನ್ನು ಮರಳಿ ಕರೆಯಿಸಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ರಸ್ಸೆಲ್ ಪತ್ನಿಗೆ ನೆಟ್ಟಿಗರು ಹೀಗೇಕೆ ಕರೆದರು?

ಬೆಂಗಳೂರು : ಕೆಕೆಆರ್ ತಂಡದ ಆಲ್ ರೌಂಡರ್ ಆಂಡ್ರೆ ರಸೆಲ್ ಅವರು ಸ್ಥಿತಿ ಪ್ರದರ್ಶನ ತೋರಲು ವಿಫಲರಾಗುತ್ತಿದ್ದಾರೆ. ಇದರ ನಡುವೆ ಸಭ್ಯತೆ ಮರೆತ ಅಭಿಮಾನಿಗಳು, ರಸ್ಸೆಲ್ ಅವರ ಪತ್ನಿಗೆ ಪೋಸ್ಟ್ ಹಾಕಿ ಕಾಮೆಂಟ್ ಮಾಡುತ್ತಿದ್ದಾರೆ.

ಜಡೇಜಾಗೆ ಧೋನಿ ಕೊನೆಯ ಓವರ್ ನೀಡಿದ್ದೇಕೆ?

ಶಾರ್ಜಾ : ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ತಂಡ ನಿನ್ನೆ ನಡೆದ ಪಂದ್ಯದಲ್ಲಿ ಸೋಲು ಕಂಡಿದೆ. ರೋಚಕ ಹಂತಕ್ಕೆ ಬಂದು ತಲುಪಿದ್ದ ಪಂದ್ಯದಲ್ಲಿ ಧೋನಿ ಅವರ ಕೆಟ್ಟ ನಿರ್ಧಾರದಿಂದಾಗಿ ಸೋಲು ಕಾಣುವಂತಾಯಿತು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಅಗತ್ಯ ಪ್ರೋ. P. S. ಅಣ್ಣಿಗೇರಿ

ನರಗುಂದ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಶ್ರೀ ಸಿದ್ದೇಶ್ವರ ಪ್ರಥಮ ದರ್ಜೆ ಕಾಲೇಜು ನರಗುಂದ ಕಾಲೇಜಿನಲ್ಲಿ…

ಕ್ರಿಕೆಟ್ ರೂಲ್ಸ್ ಚೇಂಜ್ ಮಾಡಿದ ಕೋರೊನಾ!: ಬಾಲ್ ಗೆ ಉಗುಳು ಹಚ್ಚಿ ತಿಕ್ಕಂಗಿಲ್ಲ! ವಿಕೆಟ್ ಬಿದ್ದಾಗ ತಬ್ಬಂಗಿಲ್ಲ!

ಕೋರೊನಾ ಕಾಟದಿಂದ ಹತ್ತಾರು ರೂಲ್ಸ್ ಜಾರಿಗೆ ಬಂದಿವೆ. ಸದ್ಯ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ…