ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯತಿಗೆ 2018 ರ ಚುನಾವಣೆಯಲ್ಲಿ ಎಸ್‌.ಸಿ ಮೀಸಲಿದ್ದ 11ನೇ ವಾರ್ಡನಿಂದ ಆಯ್ಕೆಯಾಗಿರುವ ಬಸವಂತಪ್ಪ ಶಿ. ಹಾರೋಗೇರಿ ಅವರ ಜಾತಿ ಪ್ರಮಾಣ ಪತ್ರ ನಕಲಿ ಇದ್ದು ತನಿಖೆ ನಡೆಸಿ ಪಪಂ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಪ್ರತಿಸ್ಪರ್ದಿ ಮರಿಯಪ್ಪ ನೀ. ನಡಗೇರಿ ಆಗ್ರಹಿಸಿದರು.

ಅವರು ಇಲ್ಲಿನ ಅಂಬೇಡ್ಕರ ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಬಸವಂತಪ್ಪ ಹಾರೋಗೇರಿ ಮೂಲತಃ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದವರು. ಅವರು ತಮ್ಮ ತಂದೆಯ ಕಾಲಕ್ಕೆ ಹಾರೋಗೇರಿ ಗ್ರಾಮದಿಂದ ಮುಳಗುಂದ ಪಟ್ಟಣಕ್ಕೆ ಬಂದಿದ್ದು, ಇವರು ಇಲ್ಲಿಗೆ ಬಂದ ನಂತರ ಸರಕಾರವು ಕೊಡುವ ಅನುಸೂಚಿತ ಜಾತಿ(ಹಿಂದೂ ಭೋವಿ) ಎಂದು ಪ್ರಮಾಣ ಪತ್ರ ಪಡೆದು ಎಸ್‌ಸಿ ಮೀಸಲಾತಿ ಸೌಲಭ್ಯಗಳನ್ನ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕಳೆದ 2018 ರ ಸ್ಥಳಿಯ ಸಂಸ್ಥೆ ಚುಣಾವಣೆಯಲ್ಲಿ ಬಸವಂತಪ್ಪ ನಾಮಪತ್ರ ಸಲ್ಲಿಸುವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳ ನಕಲು ಪ್ರತಿಗಳ ಒದಗಿಸುಂತೆ ಗದಗ ತಹಸೀಲ್ದಾರರಿಗೆ ಮನವಿ ಸಲ್ಲಿಸಿದಾಗ ಅದರ ಬದಲಾಗಿ ತಹಸೀಲ್ಧಾರರು ಬಸವಂತಪ್ಪ ಸೇರಿದಂತೆ ಅವರ ಕುಟುಂಬದವರ ಜಾತಿ ಪ್ರಮಾಣ ಪತ್ರ ನೀಡಿರುವದು ಅನುಮಾನಕ್ಕೆ ಎಡಮಾಡಿಕೊಟ್ಟಿದೆ. ಇನ್ನೂ ಅಗತ್ಯ ದಾಖಲೆಗಳ ಮಾಹಿತಿ ಒದಗಿಸದೇ ಸತಾಯಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳ ಸಮೀತಿಯಲ್ಲಿ ತೀರ್ಮಾನ ಈ ವಿಷಯಕ್ಕೆ ಸಂಭಂಧಿಸಿದಂತೆ ಈಗಾಗಲೇ ಶಿವನಪ್ಪ ಹಾಗೂ ಆತನ ಸಂಬಂಧಿಗಳ ಜಾತಿ ಬಗ್ಗೆ ಸಮಗ್ರ ವರದಿ ಕಲೆ ಹಾಕಿ ತಿಳಿಸುವಂತೆ ಮುಂಡರಗಿ ತಹಸೀಲ್ದಾರರಿಗೆ ತಿಳಿಸಿದ್ದೇವೆ. ಅವರ ವರದಿ ಬರುವವರೆಗೆ ಕಾಯಬೇಕಿದೆ. ನಂತರ ಜಿಲ್ಲಾಧಿಕಾರಿಗಳ ಸಮೀತಿಯಲ್ಲಿ ಇದನ್ನು ತೀರ್ಮಾನಿಸಲಾಗುವದು. -ಶ್ರೀನಿವಾಸಮೂರ್ತಿ ಕುಲಕರ್ಣಿ, ತಹಸೀಲ್ದಾರ

ತಪ್ಪಿತಸ್ಥರ ವಿರುಧ್ಧ ಕ್ರಮ ಜರುಗಿಸಬೇಕು ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ಲಗತ್ತಿಸಿ ಚುನಾವಣೆಯಲ್ಲಿ ಆಯ್ಕೆಯಾದ ಇವರನ್ನು ಪಟ್ಟಣ ಪಂಚಾಯ್ತಿ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಇಲ್ಲವಾದಲ್ಲಿ ನ್ಯಾಯಾಕ್ಕಾಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಾಬು ಜಗಜೀವನರಾಮ್ ವಿವಿದೋದ್ದೇಶಗಳ ಸಂಘದ ದೇವಪ್ಪ ನಡಗೇರಿ, ಸುಭಾಸ ಜಾಲಣ್ಣವರ, ಪರಶುರಾಮ ಮ್ಯಾಗೇರಿ, ಬಸವಣ್ಣೆಪ್ಪ ನಡಗೇರಿ, ಮರಿಯಪ್ಪ ಕೆಳಗೇರಿ, ಮಹಾಂತೇಶ ಮಠದವರ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಮಹಿಳೆಯರ ಬಟ್ಟೆ ಕದಿಯುತ್ತಿದ್ದ ಕಳ್ಳನಿಗೆ ಥಳಿತ..!

ಹುಬ್ಬಳ್ಳಿ: ಚಿನ್ನಾಭರಣ ಕದ್ದಿರೋ ಕಳ್ಳರನ್ನು ನೋಡಿದ್ದೇವೆ. ಮನೆ ದರೋಡೆ ಮಾಡಿರೋದನ್ನು ನೋಡಿದ್ದೇವೆ. ಆದ್ರೆ ಮಹಿಳೆಯರ ಬಟ್ಟೆ…

ಫು.ಬಡ್ನಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

ಫು.ಬಡ್ನಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಸತತವಾಗಿ ಮೂರನೇ ಬಾರಿ ಅಧ್ಯಕ್ಷರಾಗಿ ಮಾಜಿ ಶಾಸಕ ಎಸ್.ಎನ್.ಪಾಟೀಲ ಅವರ ಪುತ್ರ ಸತೀಶಗೌಡ ಎಸ್.ಪಾಟೀಲ್ ಹಾಗು ಉಪಾಧ್ಯಕ್ಷರಾಗಿ ಲೋಹಿತಪ್ಪ ಮರಿಹೊಳಲಣ್ಣವರ ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ಜರುಗಿದ ಚುನಾವಣೆಯಲ್ಲಿ ಆಯ್ಕೆಯಾ ಅಧ್ಯಕ್ಷ ಉಪಾಧ್ಯಕ್ಷರನ್ನು ಸಂಘದ ಸದಸ್ಯರು ಸನ್ಮಾನಿಸಿದರು.

ಪಶುವೈದ್ಯಕೀಯ ಕಾಲೇಜಿಗೆ ನೀರು ಕೊಡಿ

ಪಶುವೈದ್ಯಕೀಯ ಕಾಲೇಜಿಗೆ ನೀರು ಒದಗಿಸಿ ಎಂದು ಒತ್ತಾಯಿಸಿ ಪಶುವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಪಾಲಕ ಅಭಿಯಂತರ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಶಾಸಕ ಬಂಡಿ ಅವರಿಗೆ ಎಸ್‌ಎಫ್‌ಐ ಮನವಿ ಸರ್ಕಾರಿ ಸ್ನಾತಕೋತ್ತರ ಪದವಿ ಕೇಂದ್ರ ಸ್ಥಾಪಿಸಲು ಒತ್ತಾಯ

ಗಜೇಂದ್ರಗಡ: ಪಟ್ಟಣದ ಸರ್ಕಾರಿ ಸ್ನಾತಕೋತ್ತರ ಪದವಿ ಕೇಂದ್ರ ಸ್ಥಾಪಿಸಲು ಹಾಗೂ ಸರಕಾರಿ ಬಾಲಕರ ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರಾರಂಭಿಸಲು ಸೇರಿದಂತೆ ಇನ್ನಿತರ ಶೈಕ್ಷಣಿಕ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ಕಾರ್ಯಕರ್ತರು ಶಾಸಕರಿಗೆ ಮನವಿ ಸಲ್ಲಿಸಿದರು.