ಬೆಂಗಳೂರು: ಈಗಾಗಲೇ ಶಾಲೆಗಳ ಆರಂಭದ ಕುರಿತು ಪರ-ವಿರೋಧ ಚರ್ಚೆಗಳು ನಡೆದಿವೆ. ಇನ್ನು ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಕೋವಿಡ್19 ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳನ್ನು ಪ್ರಾರಂಭಿಸುವುದರ ಕುರಿತು ಪರ ಮತ್ತು ವಿರೋಧ ಚರ್ಚೆಗಳು ಆಗುತ್ತಿವೆ.

ಈ ಬಗ್ಗೆ ಮಾದ್ಯಮಗಳು ಸಹ ಅಭಿಯಾನಗಳನ್ನು ಪ್ರಾರಂಭಿಸಿರುವುದನ್ನು ಗಮನಿಸಿರುತ್ತೇವೆ. ಈ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಹಿತ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿರುತ್ತಾರೆ. ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಶಾಲೆಗಳನ್ನು ಪ್ರಾರಂಭಿಸುವ ಮುನ್ನ ಎಲ್ಲ ಪಕ್ಷಗಳ ಮುಖಂಡರು, ತಜ್ಞರು, ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದು ಸಾಧಕ, ಬಾಧಕಗಳನ್ನು ಚರ್ಚಿಸಿ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು.

ಅಲ್ಲಿಯವರೆಗೆ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಉಂಟಾಗಿರುವ ಯಾವುದೇ ಊಹಾಪೋಹ ಮತ್ತು ವದಂತಿಗಳಿಗೆ ಕಿವಿಗೊಡಬಾರದೆಂದು ಪೋಷಕರಿಗೆ ಮನವಿ ಮಾಡಿತ್ತೇನೆ ಎಂದು ಸಿಎಂ ಬಿಎಸ್ವೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸರ್ಕಾರದ ನಡೆಯಿಂದ ನಮ್ಮ ಭಾಗದ ಯುವಕರಿಗೆ ಅನ್ಯಾಯ -ಮೋಹನ ದೊಡಕುಂಡಿ

ಉತ್ತರಪ್ರಭ ಸುದ್ದಿಗದಗ: 545 ಪಿ.ಎಸ್.ಐ ಹುದ್ದೆಗಳಿಗೆ ನೇಮಕಾತಿ ಕರೆದಿದ್ದ ಸರ್ಕಾರ ಸದ್ಯ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆಯಾಗಿದ್ದರೂ…

ನೌಕರರ ವಲಯದಲ್ಲಿ ನಿರಾಸೆ ಕಾಮೋ೯ಡ ಮೂಡಿಸಿದ ಬಜೆಟ್-ಚಂದ್ರಶೇಖರ ನುಗ್ಲಿ

ಆಲಮಟ್ಟಿ : ಮುಖ್ಯ ಮಂತ್ರಿಗಳು ಇಂದು ಮಂಡಿಸಿದ ಬಜೆಟ್ ರಾಜ್ಯದ ನೌಕರರಿಗೆ ಹಾಗೂ ಶಿಕ್ಷಕರ ಸಮೂಹಕ್ಕೆ…

ಡಿಸೆಂಬರ್ ಅಂತ್ಯದವರೆಗೆ ಶಾಲೆ ಆರಂಭವಿಲ್ಲ, ಮುಂದಿನ ನಡೆ ಡಿಸೆಂಬರ್ ನಂತರ ತೀರ್ಮಾನ

ಕೋವಿಡ್ 19 ಹಿನ್ನೆಲೆ ಈಗಾಗಲೇ ಶೈಕ್ಷನಿಕ ವರ್ಷದಲ್ಲಿ ಶಾಲೆಗಳಿನ್ನು ಆರಂಭವಾಗಿಲ್ಲ. ಡಿ.17ಕ್ಕೆ ಸರ್ಕಾರ ಕೆಲವು ಮಾರ್ಗಸೂಚಿಗಳನ್ವಯ ಕಾಲೇಜು ಆರಂಭಕ್ಕೆ ಅನುಮತಿ ನೀಡಿದೆ. ಆದರೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆರಂಭದ ಕುರಿತು ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿತ್ತು.

ಅನುದಾನ ರಹಿತ ಶಿಕ್ಷಕರು ಶಾಪಗ್ರಸ್ಥರೇ? ನಿಕೃಷ್ಟರೇ? ದೌರ್ಭಾಗ್ಯವಂತರೇ?

ಕೊರೋನಾ ವೈರಸ್ ಎಲ್ಲರಿಗೂ ಸರಿಸಮಾನವಾಗಿ ಬಿಡದೆ ಬೆನ್ನತ್ತಿದೆ. ಸರ್ಕಾರೇತರ ಶಿಕ್ಷಕರಿಗೆ ಅದರಲ್ಲೂ ಅಸಂಖ್ಯಾತ ಅನುದಾನರಹಿತ ಶಿಕ್ಷಕರಿಗೆ…