ಬೆಂಗಳೂರು : ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಜಾರಿಯಲ್ಲಿರುವ ವಿದ್ಯಾಗಮ ಯೋಜನೆ ಮುಂದುವರೆಸಲು ಕೂಡ ಶಿಕ್ಷಕರ ವಲಯದಿಂದ ವಿರೋಧ ವ್ಯಕ್ತವಾಗುತ್ತಿದೆ. ವಿದ್ಯಾಗಮ ಯೋಜನೆಯಡಿ ಪಾಠ ಮಾಡುತ್ತಿರುವ ಶಿಕ್ಷಕರು ಸಾವನ್ನಪ್ಪಿರುವ ಪ್ರಕರಣಗಳು ಕೂಡ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಇದನ್ನು ವಿರೋಧಿಸುತ್ತಿದ್ದಾರೆ.

ಹೀಗಾಗಿ ಶಾಲೆ ಆರಂಭಿಸುವ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಕೊರೊನಾ ಮಹಾಮಾರಿ ಇನ್ನೂ ನಿಯಂತ್ರಣಕ್ಕ ಬಂದಿಲ್ಲ. ದೇಶದ ಇನ್ನಿತರ ರಾಜ್ಯಗಳನ್ನು ಗಮನಿಸಿದರೆ, ಈ ಪ್ರಮಾಣ ರಾಜ್ಯದಲ್ಲಿಯೇ ಹೆಚ್ಚಿದೆ. ಸರ್ಕಾರದ ದಾಖಲೆಯಂತೆ 10 ವರ್ಷದೊಳಗಿನ 20,256 ಮಕ್ಕಳು ಮತ್ತು 11 ರಿಂದ 20 ವರ್ಷದೊಳಗಿನ 47,061 ಮಕ್ಕಳು ಈಗಾಗಲೇ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಎರಡೂ ರೀತಿಯ ಪ್ರಕರಣಗಳಿಂದ 61 ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಉಲ್ಲೇಖಿಸಿ, ಶಾಲೆ ತೆರೆಯದಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ವರ್ಷ ಸರ್ಕಾರ ಪ್ರತಿಯೊಬ್ಬರ ಜೀವ ಉಳಿಸುವ ಪ್ರಯತ್ನ ಮಾಡಬೇಕು. ಈ ಹಿಂದೆ ವಿವಿಧ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ಸ್ವತಃ ನಾನೇ ಬೆಂಬಲಿಸಿದ್ದೆ. ಆದರೆ ಇಂದಿನ ಪರಿಸ್ಥಿತಿಯೆ ಬೇರೆಯಾಗಿದೆ. ಹೀಗಾಗಿ ಶಾಲೆಗಳನ್ನು ತೆರೆಯಲು ಮುಂದಾಗಬಾರದು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಶಾಲೆಗಳು ಮುಚ್ಚಿದ್ದರಿಂದ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಹೆಚ್ಚುತ್ತವೆ ಎಂಬ ಅನುಮಾನಗಳು ಬೇಡ. ಜಿಲ್ಲಾಡಳಿತಗಳು ನಿದ್ದೆಯಿಂದ ಎಚ್ಚೆತ್ತು ಕ್ರಿಯಾಶೀಲವಾದರೆ, ದುಡಿಯುವ ಕುಟುಂಬಗಳಿಗೆ ದುಡಿಯುವ ಅವಕಾಶಗಳನ್ನು ಹೆಚ್ಚಿಸಬಹುದು. ಒಂದು ಸಮಸ್ಯೆಯನ್ನು ಎದುರಿಸಲು ಮಕ್ಕಳನ್ನು ಯಮನ ಬಾಯಿಗೆ ತಳ್ಳುವುದನ್ನು ಯಾವ ಸೂಕ್ಷ್ಮಮತಿಯಾದ ಮನುಷ್ಯನಿಂದಲೂ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಗುಡುಗಿದ್ದಾರೆ.

ಇಷ್ಟು ದಿನ ಮನೆಯಲ್ಲಿದ್ದ ಮಕ್ಕಳು ಶಾಲೆಗೆ ಬಂದ ಕೂಡಲೇ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುವ ಸಾಧ್ಯತೆ ಇರುತ್ತದೆ. ದುಡಿಯುವ ಕುಟುಂಬಗಳಲ್ಲಿ ಮಕ್ಕಳನ್ನು ಬೆಳೆಸುವ ಹೊಣೆಯನ್ನು ಅಜ್ಜ – ಅಜ್ಜಿಯರೇ ಹೊತ್ತಿರುತ್ತಾರೆ. ಶಾಲೆ ತೆರೆದರೆ ಮಕ್ಕಳು ಶಾಲೆಗೆ ಬಂದು, ಕೊರೊನಾ ಅಂಟಿಸಿಕೊಂಡರೆ, ಹಿರಿಯ ಜೀವಗಳಿಗೂ ತೊಂದರೆಯಾಗುತ್ತದೆ. ಇದರಿಂದ ಮತ್ತಷ್ಟು ಜೀವಗಳು ಹೋಗಬಹುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಅಮೇರಿಕಾ ಹಾಗೂ ಯುರೋಪಿನ ಕೆಲವು ದೇಶಗಳಲ್ಲಿ ಶಾಲೆಗಳನ್ನು ತೆರೆದು ಸಮಸ್ಯೆ ಸೃಷ್ಟಿಸಿಕೊಂಡಿರುವ ಉದಾಹರಣೆಗಳು ನಮ್ಮ ಕಣ್ಣು ಮುಂದೆ ಇವೆ. ಇದಕ್ಕೆ ನಾವೂ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಸರ್ಕಾರವು ಕೊರೊನಾ ಸೈವರ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ಶಾಲೆಗಳನ್ನು ತೆರೆಯುವ ಗೋಜಿಗೆ ಹೋಗಬಾರದು ಎಂದು ಮನವಿ ಮಾಡಿದ್ದಾರೆ. ಅಲ್ಲದೇ, ರಾಜ್ಯದ ಎಲ್ಲಾ ಮಕ್ಕಳಿಗೂ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವುದು ಅಗತ್ಯವಾಗಿದೆ. ಅದಕ್ಕಾಗಿ ಸರ್ಕಾರ ಎಲ್ಲಾ ಸವಲತ್ತುಗಳನ್ನು ಸರ್ಕಾರ ಕಲ್ಪಿಸಿಕೊಡಬೇಕು ಎಂದು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಅರಣ್ಯ ಇಲಾಖೆಯ ದೌರ್ಜನ್ಯ : ರೈತ ಮಹಿಳೆ ಬಲಿ

ಆಕ್ರೋಶಗೊಂಡ ಗ್ರಾಮಸ್ಥರು: ಅರಣ್ಯಾಧಿಕಾರಿಗಳ ದಿಗ್ಬಂಧನ ಉತ್ತರಪ್ರಭಮುಂಡರಗಿ: ತಾಲೂಕಿನ ಕೆಲೂರ ಗ್ರಾಮದ ಬಗರಹುಕುಂ ಸಾಗುವಳಿ ಮಾಡುವ ರೈತರನ್ನು…

ಹೆಚ್ಚಿದ ಕೊರೊನಾ ಆತಂಕ – ವಿದ್ಯಾಗಮಕ್ಕೆ

ಬೆಂಗಳೂರು : ಹಲವು ತೊಂದರೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿದ್ಯಾಗಮಕ್ಕೆ ಬ್ರೇಕ್ ಹಾಕಿ ಆದೇಶ ಹೊರಡಿಸಿದೆ.

ಹಾವೇರಿಯಲ್ಲಿ ಮತ್ತೆ ನಾಲ್ಕು ಜನರಿಗೆ ಕೊರೋನಾ ಸೋಂಕು.!

ಹಾವೇರಿ: ಜಿಲ್ಲೆಯಲ್ಲಿ ಹೊಸದಾಗಿ ನಾಲ್ಕು ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ…

ಗೃಹ ಸಚಿವರ ತವರಲ್ಲಿ ಐಸ್ ಲಗಾ ಐಸಾ..! ಇನ್ನೂ ಸ್ವಲ್ಪ ಐಸಾ..!

ಐಸ್ ಲಗಾ ಐಸಾ..! ಇನ್ನೂ ಸ್ವಲ್ಪ ಐಸಾ..! ತಳ್ಳದೆ ಸ್ಟಾರ್ಟ್ ಆಗ್ತಿಲ್ಲಾ ಕರೊನಾ ವಾರಿಯರ್ಸ್ ರಥ..…