ಹುಬ್ಬಳ್ಳಿ: ಸೋಂಕಿತರಿಗೆ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿರುವ ಸಂದರ್ಭದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವಾರ್ಡ್ ಗೆ ತೆರಳುತ್ತಿರುವ ಸಂದರ್ಭದಲ್ಲಿ ಪ್ರತಿ ಬಾರಿಯೂ ಪಿಪಿಇ ಕಿಟ್ ಧರಿಸಲೇಬೇಕು. ಈ ತಾಪತ್ರಯ ತಪ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಲ್ಲೊಂದು ವಾಹನ ಕಂಡು ಹಿಡಿದಿದ್ದಾರೆ.

ಇಲ್ಲಿಯ ಕೆಎಲ್‌ ಇ ಎಂಜನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೋಂಕಿತರಿಗೆ ಆಹಾರ, ಔಷಧ ವಿತರಿಸುವ ವಾಹನ ಕಂಡು ಹಿಡಿದಿದ್ದಾರೆ. ಈ ವಾಹನ ಸ್ವಯಂ ಚಾಲಿತವಾಗಿ ಸಂಚರಿಸಲಿದೆ.

ವೈರ್ ಲೆಸ್ ತಂತ್ರಜ್ಞಾನದ ಮೂಲಕ ಈ ವಾಹನ ಸಂಚರಿಸಲಿದೆ. ಈ ವಾಹನದಲ್ಲಿ ನಾಲ್ಕು ವಿಭಾಗಗಳಿವೆ. ಆ ವಿಭಾಗದಲ್ಲಿ ಆಹಾರ ಮತ್ತು ಔಷಧಿಗಳನ್ನು ಇಟ್ಟು ಸೋಂಕಿತರಿಗೆ ತಲುಪಿಸಬಹುದು. ಸದ್ಯ ವಾಹನದ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳ ಸಂಶೋಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಒಂದು ವೇಳೆ ಈ ವಾಹನವನ್ನು ಆಸ್ಪತ್ರೆಗಳು ಬಳಕೆ ಮಾಡಿದರೆ, ವೈದ್ಯರಿಗೆ ತುಂಬಾ ಸಹಕಾರಿಯಾಗಲಿದೆ.

Leave a Reply

Your email address will not be published. Required fields are marked *

You May Also Like

ವಿಷಕಾರಿ ಹಾವು ಕಚ್ಚಿ ವ್ಯಕ್ತಿ ಸಾವು

ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಹಾವು ಕಚ್ಚಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ವಿಕ್ಯಾಂಡ ಕರ್ಪ್ಯೂಗೆ ರೋಣದಲ್ಲಿ ಬೆಂಬಲ

ನಗರಾದ್ಯಂತ ವಿಕೆಂಡ್ ಕರ್ಪ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಯಾರೊಬ್ಬರೂ ಅನಗತ್ಯವಾಗಿ ಹೊರಗಡೆ ಬರದೇ ಮನೆಯಲ್ಲಿಯೇ ಕುಳಿತಿರುವುದು ಕಂಡು ಬಂದಿತು.

ನರೇಗಲ್ಲ: ಲಗೂನಾ ಬ್ರೀಡ್ಜ್ ಕೆಲ್ಸಾ ಮುಗಿಸ್ರಿ: ಕೊಂಕಣಾ ಸುತ್ತಿ ಮೈಲಾರಕ್ ಬರುವಂಗಾಗೈತಿ!

ನಿಗದಿತ ಸಮಯಕ್ಕೆ ಮೇಲ್ಸೆತುವೆ ಕಾಮಗಾರಿ ಮುಕ್ತಾಯವಾಗದ ಕಾರಣ ಗ್ರಾಮಸ್ಥರ ಸ್ಥಿತಿ ಕೊಂಕಣಾ ಸುತ್ತಿ ಮೈಲಾರಕ್ಕೆ ಹೋದ್ರು ಅನ್ನುವಂತಾಗಿದೆ.

ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ಕಾಲವಶ

ಬೆಂಗಳೂರು: ಕನ್ನಡ, ತಮಿಳು ಮತ್ತಿತರ ಭಾಷೆಗಳ 650ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದ ಹಾಸ್ಯ ನಟ ಮಿಮಿಕ್ರಿ…