ನವದೆಹಲಿ: ದೇಶದಲ್ಲಿ ಗುರುವಾರ 24,879 ಹೊಸ ಪಾಸಿಟಿವ್ ಕೇಸ್ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 7,62,296ಕ್ಕೆ ತಲುಪಿದೆ. ಒಟ್ಟು 2,69,789 ಸಕ್ರಿಯ ಕೇಸ್ಗಳಿದ್ದು, ಇಲ್ಲಿವರೆಗೆ 4,76,378 ಜನರು ಗುಣಮುಖರಾಗಿದ್ದಾರೆ. ಗುರುವಾರ 487 ಸಾವು ಸಂಭವಿಸಿದ್ದು ಒಟ್ಟು ಸಾವಿನ ಸಂಖ್ಯೆ 21,129ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.