ನವದೆಹಲಿ: ಕೊರೋನಾದ ಸಣ್ಣ ಕಣಗಳು ಗಾಳಿಯಲ್ಲೇ ಇದ್ದು, ಜನದಟ್ಟಣೆಯ ವಾಸಸ್ಥಳಗಳಲ್ಲಿ ಅದು ಉಸಿರಾಟದ ಮೂಲಕವೇ ದೇಹ ಪ್ರವೇಶಿಸುತ್ತದೆ ಎಂದು 32 ದೇಶಗಳ 239 ವಿಜ್ಞಾನಿಗಳು ಅಭಿಮತ ವ್ಯಕ್ತಪಡಿಸಿದ್ದು, ಕೂಡಲೇ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸೋಂಕು ನಿಯಂತ್ರಣದ ಮಾರ್ಗಸೂಚಿಗಳನ್ನು ಬದಲಿಸಬೇಕು ಎಂದು ಹೇಳಿದ್ದಾರೆ ಎಂದು ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಸದ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್ಒ) ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಬಾರ್, ಹೊಟೆಲ್, ರೆಸ್ಟೊರೆಂಟ್, ಇಕ್ಕಟ್ಟಿನ ಕೆಲಸದ ಸ್ಥಳಗಳಲ್ಲಿ ಗಾಳಿಯಲ್ಲಿ ಕೊರೋನಾ ಕಣಗಳಿದ್ದರೆ ಅವು ಉಸಿರಾಟದ ಮೂಲಕವೇ ಮನುಷ್ಯ ದೇಹ ಪ್ರವೇಶಿಸುತ್ತವೆ.

ಇಲ್ಲಿವರೆಗೆ ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಹನಿ(ಕಣ) ರೂಪದಲ್ಲಿ ಇನ್ನೊಬ್ಬರ ದೇಹ ಪ್ರವೇಶಿಸುತ್ತದೆ ಎನ್ನಲಾಗಿತ್ತು. ಇದಲ್ಲದೇ ಸೋಂಕು ಗಾಳಿಯ ಮೂಲಕ ದೇಹ ಪ್ರವೇಶಿಸುತ್ತದೆ ಎಂದು 239 ವಿಜ್ಞಾನಿಗಳು ತಮ್ಮ ಸಂಶೋಧನೆ ಮೂಲಕ ಹೇಳಿದ್ದಾರೆ.

ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ ಎಂದಷ್ಟೇ ಇಲ್ಲಿವರೆಗೆ ನಂಬಲಾಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆ ನೋಡಿದರೆ ಕೊವಿಡ್ ವಾಯುಗಾಮಿ (ಏರ್ ಬಾರ್ನ್) ರೋಗ ಎಂದು ದೃಡಪಟ್ಟಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇದು ನಿಜವಾದರೆ, ಕ್ವಾರಂಟೈನ್ ನಿಯಮಗಳನ್ನು ಬದಲಿಸಬೇಕಾಗುತ್ತದೆ. ಸೋಂಕಿತ ವ್ಯಕ್ತಿ ಸೀನಿದ, ಕೆಮ್ಮಿದ ಪ್ರದೇಶ ಒಂದು ಕೊಠಡಿ, ಒಂದು ಸಣ್ಣ ಹಾಲ್ ಆಗಿದ್ದರೆ ಆತನಿಂದ ದೂರ ಇದ್ದರೂ, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದರೂ ಕೂಡ ಗಾಳಿಯಲ್ಲಿ ಸ್ವಲ್ಪ ಕಾಲ ಜೀವಂತವಿರುವ ಸೋಂಕಿನ ಸಣ್ಣ ಕಣಗಳು ಉಸಿರಾಟದ ಮೂಲಕ ದೇಹ ಪ್ರವೇಶಿಸುತ್ತವೆ. ಹೀಗಾಗಿ ಕೊರೋನಾ ಸೋಂಕಿತ ವ್ಯಕ್ತಿ ಇರುವ ಪ್ರದೇಶ ಇಕ್ಕಟ್ಟಾಗಿದ್ದರೆ ಅಲ್ಲಿ ಗಾಳಿಯ ಮೂಲಕವೇ ಇತರರ ದೇಹವನ್ನು ಕೊರೋನಾ ಪ್ರವೇಸಿಸುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

(ಈ ಕುರಿತು ಹೆಚ್ಚಿನ ಅಪ್ ಡೇಟ್ ನಿರೀಕ್ಷಿಸಿ)

Leave a Reply

Your email address will not be published. Required fields are marked *

You May Also Like

ಭಾರತೀಯ ಡಿಎಲ್ ಯಾವ-ಯಾವ ದೇಶದಲ್ಲಿ ಬಳಸಬಹುದು?

ಭಾರತದ ಡ್ರೈವಿಂಗ್ ಲೈಸನ್ಸ್(ಡಿಎಲ್) ಬಳಸಿ ವಿಶ್ವದ ಕೆಲ ಅದ್ಭುತ ದೇಶಗಳಲ್ಲಿಯೂ ಕೂಡ ಡ್ರೈವಿಂಗ್ ಮಾಡಬಹುದಂತೆ.

ಚೀನಾ ಸಂಘರ್ಷದ ಬೆನ್ನಲ್ಲಿಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾ ಪ್ರವಾಸ

ನವದೆಹಲಿ: ಚೀನಾ ಸಂಘರ್ಷದ ಬೆನ್ನಲ್ಲಿಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾ ಪ್ರವಾಸ ಕೈಗೊಂಡಿದ್ದು, ಹಲವು…

ಹೈದ್ರಾಬಾದ್ ನಲ್ಲಿ ವರುಣನ ರೌದ್ರನರ್ತನನಕ್ಕೆ ಬಲಿಯಾದವರು ಎಷ್ಟು ಜನ? ಹಾನಿಯಾದ ಆಸ್ತಿ ಮೊತ್ತ ಎಷ್ಟು?

ಹೈದ್ರಾಬಾದ್ : ಹೈದ್ರಾಬಾದ್ ನಲ್ಲಿ ಮತ್ತೆ ಮಳೆರಾಯ ತನ್ನ ರೌದ್ರನರ್ತನ ಪ್ರಾರಂಭಿಸಿದ್ದು, ಮತ್ತೆ ಇಬ್ಬರನ್ನು ಬಲಿ ಪಡೆದಿದ್ದಾನೆ. ಈ ಮೂಲಕ ಮಹಾಮಳೆಗೆ 50 ಜನ ಬಲಿಯಾದಂತಾಗಿದೆ.

ಚಂಡಮಾರುತ ಎಲ್ಲಿ ಅಪ್ಪಳಿಸಲಿದೆ ಅಂತ ಹೇಳಿದೆ ಹವಾಮಾನ ಇಲಾಖೆ..!

ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ನಿಸರ್ಗ ಚಂಡಮಾರುತ ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ಬಾಧಿಸಲಿದೆ. ಈಗಾಗಲೇ ಗುಜಾರಾತ್ ಮತ್ತು ಮಹಾರಾಷ್ಟ್ರದೆಡೆಗೆ ಚಂಡಮಾರುತ ಚಲಿಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.