ಕೊರೊನಾ ಮಹಾಮಾರಿಗೆ ವಿಲ ವಿಲ ಎನ್ನುತ್ತಿರುವ ಸಿಲಿಕಾನ್ ಸಿಟಿ!
ಬೆಂಗಳೂರು : ರಾಜ್ಯದಲ್ಲಿ ಕೂಡ ಕೊರೊನಾ ಅಬ್ಬರ ಜೋರಾಗುತ್ತಿದೆ. ಅಲ್ಲದೇ, ಸಾವಿನ ಸಂಖ್ಯೆಯೂ ದಿನದಿಂದ ದಿನಕ್ಕೆ ಆತಂಕ ಮೂಡಿಸುತ್ತಿದೆ. ಇಂದು ಕೂಡ ಕೊರೊನಾಗೆ ಮೂವರು ಬಲಿಯಾಗಿದ್ದಾರೆ.
39 ವರ್ಷದ ವ್ಯಕ್ತಿ, 65 ವರ್ಷದ ವೃದ್ಧ ಮತ್ತು 85 ವರ್ಷದ ವೃದ್ಧೆ ಇಂದು ಸಾವನ್ನಪ್ಪಿದ್ದಾರೆ. 85 ವರ್ಷದ ವೃದ್ಧೆ ಶನಿವಾರ ರಾತ್ರಿ ಜಯನಗರ ಜನರಲ್ ಆಸ್ಪತ್ರೆಯಿಂದ ಶಿಫ್ಟ್ ಆಗಿದ್ದರು. 65 ವರ್ಷದ ವೃದ್ಧ ಇಎಸ್ಐದ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಟ್ ಜಾನ್ ಆಸ್ಪತ್ರೆಯಿಂದ 39 ವರ್ಷದ ವ್ಯಕ್ತಿ ಶಿಫ್ಟ್ ಆಗಿದ್ದರು. ಮೂವರು ನಾನಾ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇಬ್ಬರು ಮೃತಪಟ್ಟ ಬಳಿಕ ಕೋವಿಡ್ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ.
ವೃದ್ಧೆ ಮತ್ತು ವೃದ್ಧ ಜ್ವರ, ಕೆಮ್ಮು, ಬಿಪಿ, ಶುಗರ್ ಮತ್ತು ಕಿಡ್ನಿ ಸಮಸ್ಯೆಯಿಂದ ಬಳುತ್ತಿದ್ದರು. ಈ ನಿಟ್ಟಿನಲ್ಲಿ ನಗರದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 32ಕ್ಕೆ ಏರಿಕೆ ಕಂಡಿದೆ. ಲಾಕ್ಡೌತನ್ ಸಮಯದಲ್ಲಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದಲ್ಲಿತ್ತು. ಆದರೆ ಅನ್ಲಾಕಕ್ ಆಗುತ್ತಿದ್ದಂತೆ ಜನರ ಓಡಾಟದ ಜಾಸ್ತಿಯಾಗಿದ್ದು, ಅಂತರಾಜ್ಯ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಹೀಗಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

Leave a Reply

Your email address will not be published. Required fields are marked *

You May Also Like

ಹೆಚ್ಚುವರಿ ಸೇನೆ ನಿಯೋಜಿಸಿದ: ಪಾಕ್ !

ನವದೆಹಲಿ : ವಾಸ್ತವಿಕ ಗಡಿ ರೇಖೆ(ಎಲ್ಎಸಿ)ಯಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಿ ಚೀನಾ ಉಪಟಳ ನೀಡುತ್ತಿರುವ ಹಿನ್ನೆಲೆಯಲ್ಲಿಯೇ…

ದೇಶ ಉದ್ಧೇಶಿಸಿ ಮಾತನಾಡಿದ ಪ್ರಧಾನಿ ಮೋದಿ! ಈ ಭಾಷಣದಲ್ಲಿ ಏನು ಹೇಳಿದರು?

ನವದೆಹಲಿ : ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಕಡಿಮೆಯಾಗಿರುವ ಸಂತಸ ಹಂಚಿಕೊಂಡಿದ್ದಾರೆ.

ನಿಡಗುಂದಿ: ಚರಕ ಕ್ಲಿನಿಕ್ ಉದ್ಘಾಟನಾ ಸಮಾರಂಭ ವೈದ್ಯ ವೃತ್ತಿ ವ್ಯಾಪಾರೀಕರಣದತ್ತ ಶಾಸಕ ಶಿವಾನಂದ ಪಾಟೀಲ ವಿಷಾಧ

ವರದಿ : ಗುಲಾಬಚಂದ ಜಾಧವನಿಡಗುಂದಿ : ವೈದ್ಯ ವೃತ್ತಿ ಅತ್ಯಂತ ಪವಿತ್ರ. ಎಲ್ಲ ವೃತ್ತಿಗಳಲ್ಲೇ ಶ್ರೇಷ್ಠ.…

ಲಕ್ಷ್ಮೇಶ್ವರದಲ್ಲಿ : ನಿಯಮ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಕೊರೋನಾ ಎರಡನೇ ಅಲೆ ಅತೀ ವೇಗವಾಗಿ ಹರಡುತ್ತಿರುವುದರಿಂದ ಶನಿವಾರ, ಭಾನುವಾರ ಸರಕಾರ ವಿಧಿಸಿರುವ ವೀಕೆಂಡ್ ಕರ್ಫ್ಯೂ ಅನ್ನು ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು.