ಶಿರಹಟ್ಟಿ: ಕಳೆದ ನಾಲ್ಕೈದು ದಿನಗಳ ಹಿಂದೆ  ಸುರಿದ ಭಾರೀ ಮಳೆಗೆ ಮಜ್ಜೂರು ಗ್ರಾಮದ ಕೆರೆ ಕೋಡಿ ಬಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾದ ಹೊಲಗಳಿಗೆ ತಹಶೀಲ್ದಾರ ಭೇಟಿ ನೀಡಿದರು.

ಸ್ಥಳೀಯ ರೈತರ ಮನವಿಗೆ ಸ್ಪಂದಿಸಿ ಮಂಗಳವಾರ ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ ಸ್ಥಳಕ್ಕೆ ಭೇಟಿ ನೀಡಿದರು. ಕೆರೆ ಕೊಡಿ ಬಿದ್ದು  ಕೆರೆಯ ಸುತ್ತಮುತ್ತಿಲಿನ ಬಹುತೇಕ ಜಮೀನುಗಳಿಗೆ ನೀರು ರಭಸವಾಗಿ ನುಗ್ಗಿದ್ದರಿಂದ

ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಅಲ್ಲದೆ ಪ್ರಸ್ತುತವಾಗಿ ಹೊಲಗಳಲ್ಲಿ ನೀರು ಶೇಖರಣೆ ಆಗಿರುವುದರಿಂದ  ಅಲ್ಪಸ್ಪಲ್ಪ ಇರುವ ಬೆಳೆ ಕೂಡಾ ನಾಶವಾಗುತ್ತಿದ್ದು, ರೈತರಿಗೆ ಸಮಸ್ಯೆಯಾಗಿರುವುದು ತಾಲೂಕಾಡಳಿತ ಗಮನಕ್ಕೆ ಬಂದಿರುತ್ತದೆ. ಇದನ್ನು ಗಂಬೀರವಾಗಿ ಪರಿಗಣಿಸಿ ಸರಕಾರದಿಂದ ಸಿಗುವ ಪರಿಹಾರವನ್ನು ಕೊಡಿಸಲಾಗುತ್ತದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಂದಾಯ ನಿರಿಕ್ಷಕ ಮಗದುಮ್ ಹಾಗೂ ರೈತರು ಹಾಜರಿದ್ದರು.

Leave a Reply

Your email address will not be published. Required fields are marked *

You May Also Like

ಮುಳ್ಳಿನ ಮೇಲೆ ಬಟ್ಟೆ ಹಾಕಿ ತಪ್ಪು ಮಾಡಿದೆ – ಕುಮಾರಸ್ವಾಮಿ!

ರಾಮನಗರ : ನಾನು ಮುಳ್ಳಿನ ಮೇಲೆ ಬಟ್ಟೆ ಹಾಕಿ ದೊಡ್ಡ ತಪ್ಪು ಮಾಡಿದೆ ಎಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಸೂರ್ಯಕಾಂತಿ ಕ್ಷೇತ್ರಕ್ಕೆ ಕೃಷಿ ಅಧಿಕಾರಿಗಳ ಭೇಟಿ ಕೀಟ ರೋಗ ನಿಯಂತ್ರಣಕ್ಕೆ ಸಲಹೆ

ಉತ್ತರಪ್ರಭ ಸುದ್ದಿನಿಡಗುಂದಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬೆಳೆಗಳಿಗೆ ಕೀಟ ಹಾಗೂ ರೋಗಗಳ…

ಕರ್ನಾಟಕದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕಿನ ಹಾವಳಿ..!

ರಾಜ್ಯದಲ್ಲಿ ಒಂದೇ ದಿನದಲ್ಲಿ 760 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 331 ಸೋಂಕಿತರು ಗುಣಮುಖರಾಗಿದ್ದು, ಆರು ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಕುರಿಕಾರ ಗೆಲುವು ಖಚಿತ: ಮಾಜಿ ಶಾಸಕ ಜಿ.ಎಸ್.ಪಾಟೀಲ

ಉತ್ತರಪ್ರಭ ನರೆಗಲ್: ವಿಧಾನ ಪರಿಷತ್‍ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರವಾಗಿ…