ಕೇಲೂರ ಘಟನೆ: ಸಂತ್ರಸ್ಥೆಯ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿಗಳು

ಗದಗ: ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿ ಒತ್ತುವರಿ ತೆರವು ಕರ‍್ಯಾಚರಣೆ…

ಮಜ್ಜೂರು ಕೆರೆಗೆ ತಹಶೀಲ್ದಾರ ಭೇಟಿ

ಕಳೆದ ನಾಲ್ಕೈದು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಮಜ್ಜೂರು ಗ್ರಾಮದ ಕೆರೆ ಕೋಡಿ ಬಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾದ ಹೊಲಗಳಿಗೆ ತಹಶೀಲ್ದಾರ ಭೇಟಿ ನೀಡಿದರು. ಳೀಯ ರೈತರ ಮನವಿಗೆ ಸ್ಪಂದಿಸಿ ಮಂಗಳವಾರ ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ ಸ್ಥಳಕ್ಕೆ ಭೇಟಿ ನೀಡಿದರು. ಕೆರೆ ಕೊಡಿ ಬಿದ್ದು ಕೆರೆಯ ಸುತ್ತಮುತ್ತಿಲಿನ ಬಹುತೇಕ ಜಮೀನುಗಳಿಗೆ ನೀರು ರಭಸವಾಗಿ ನುಗ್ಗಿದ್ದರಿಂದ

ಮುಳಗುಂದ ಅಬ್ಬಿ ಕೆರೆಗೆ ಜಿಲ್ಲಾಧಿಕಾರಿ ಭೇಟಿ: ಸಾರ್ವಜನಿಕರ ಸಯೋಗದಲ್ಲಿ ಕೆರೆ ಅಭಿವೃದ್ದಿಗೆ ಸಲಹೆ.

ಪಟ್ಟಣಕ್ಕೆ ಶನಿವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ಮಳೆಯಿಂದ ಭರ್ತಿಯಾಗಿರುವ ಅಬ್ಬಿ ಕೆರೆ ವೀಕ್ಷಣೆ ಮಾಡಿದರು. ನಂತರ ಸ್ಥಳಿಯ ಮುಖಂಡರೊಂದಿಗೆ ಚರ್ಚಿಸಿದ ಅವರು ಜಿಲ್ಲೆಯಲ್ಲಿ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕೆರೆಗಳನ್ನು ಜನಪ್ರತಿನಿಧಿಗಳು, ಸಾರ್ವಜನಿಕರು ಕೆರೆ ಅಭಿವೃದ್ದಿ ಸಮಿತಿ ರಚಿಸಿಕೊಂಡು ಕೆರೆಗಳ ಅಭಿವೃದ್ದಿಗೆ ಮುಂದಾಗಬೇಕು. ಕೆರೆಗಳ ಸಂರಕ್ಷಣೆಯಿಂದ ಅಂತರ್ಜಲ ವೃದ್ದಿಸುವುದರ ಜತೆಗೆ ರೈತರಿಗೂ ನೀರಿನ ಬವಣೆ ನೀಗಲಿದೆ. ಈಗಾಗಲೇ ಮಳೆಯಿಂದ ಕೆರೆಗಳು ಭರ್ತಿಯಾಗಿದ್ದು ಕೆರೆ ದಡದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಸಸಿ ನೆಡಬೇಕು ಎಂದು ಸಲಹೆ ನೀಡಿದರು.