ಗದಗ: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ ಗದಗ ಜಿಲ್ಲೆಗೆ ಸಂಬಂಧಿಸಿದಂತೆ ಚುನಾವಣೆಗೆ ಸಂಬಂಧಿತ ನೋಡಲ್ ಅಧಿಕಾರಿ ಹಾಗೂ ವಿಚಕ್ಷಣ ತಂಡ ರಚನೆ ಮಾಡಲಾಗಿದೆ.

ಮಾದರಿ ನೀತಿ ಸಂಹಿತೆ  ಕಾರ್ಯಾನುಷ್ಟಾನ, ಕಾನೂನು ಪಾಲನೆ, ಮಾಹಿತಿ ಮತ್ತು ತಂತ್ರಜ್ಞಾನದ ಉಸ್ತುವಾರಿಗಾಗಿ, ಸಾರಿಗೆ ವ್ಯವಸ್ಥೆ,  ತರಬೇತಿ ನಿರ್ವಹಣೆ, ಚುನಾವಣಾ ಸಾಮಗ್ರಿಗಳ ನಿರ್ವಹಣೆ, ಅಂಚೆ ಬ್ಯಾಲೆಟ್ ಪೇಪರ್, ವೀಕ್ಷಕರುಗಳ ಮೇಲುಸ್ತುವಾರಿ, ಮಾಧ್ಯಮ ಮತ್ತು ಸಂವಹನ, ಸಹಾಯವಾಣಿ ಮತ್ತು ದೂರು ಸ್ವೀಕಾರ,  ಮತಗಟ್ಟೆಗಳ ಸೂಕ್ತ ನಿರ್ವಹಣೆ, ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ವ್ಯವಸ್ಥೆ, ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ದತ್ತಾಂಶ ಕಂಪ್ಯೂಟರೀಕರಣ, ಸಭೆಗಳ ನಿರ್ವಹಣೆ, ಸಂಬಂಧಿತ ವರದಿ ಸಲ್ಲಿಸುವ ಕುರಿತು ಮೇಲುಸ್ತುವಾರಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ನೋಡಲ್ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನ ಹಾಗೂ ಮಾರ್ಗಸೂಚಿಯನ್ವಯ ವಹಿಸಿದಂತಹ  ಕರ್ತವ್ಯಗಳನ್ನು ನಿರ್ವಹಿಸಲು ಹಾಗೂ ಚುನಾವಣೆಗೆ ಸಂಬಂಧಿಸಿದ ಪ್ರತಿ ದಿನ ಕಾರ್ಯಗಳ ಚಟುವಟಿಕೆಗಳನ್ನು ಪ್ರಾದೇಶಿಕ  ಅಧಿಕಾರಿ/ ಜಿಲ್ಲಾ ಚುನಾವಣಾಧಿಕಾರಿ/ ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರಕ್ಕೆ ದ್ವೈವಾರ್ಷಿಕ ಚುನಾವಣೆ 2020 ನೇದ್ದಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವು ದಿನಾಂಕ: 29.09.2020 ರಂದು ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸಿದ್ದು, ಸದರಿ ವೇಳಾಪಟ್ಟಿಯನ್ವಯ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯು ದಿನಾಂಕ: 29.09.2020 ರಿಂದ 05.11.2020 ರವರೆಗೆ ಅಸ್ಥಿತ್ವದಲ್ಲಿ ಬಂದಿರುತ್ತದೆ. ಕನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರಕ್ಕೆ ನಾಮಪತ್ರಗಳನ್ನು ಚುನಾವಣಾಧಿಕಾರಿಗಳು / ಸಹಾಯಕ ಚುನಾವಣಾಧಿಕಾರಿಗಳು ದಿನಾಂಕ: 01.10.2020 ರಿಂದ 08.10.2020 ರವರೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯ ಧಾರವಾಡ ನೇದ್ದರಲ್ಲಿ ಸ್ವೀಕರಿಸುವರು. ನಾಮಪತ್ರಗಳನ್ನು ಸಲ್ಲಿಸಲು ಇಚ್ಚಿಸುವ ಉಮೇದುದಾರರು www.gadag.nic.in    ನೇದ್ದರಲ್ಲಿ ಲಭ್ಯವಿರುವ ನಾಮಪತ್ರಗಳ ಸಾಫ್ಟ ಪ್ರತಿಗಳನ್ನು ಡೌನಲೋಡ್ ಮಾಡಿಕೊಂಡು ನಾಮಪತ್ರವನ್ನು ಸಲ್ಲಿಸಬಹುದಾಗಿರುತ್ತದೆ. 

ಭಾರತ ಚುನಾವಣಾ ಆಯೋಗವು ಪ್ರಸ್ತುತ ಚುನಾವಣೆಗಳಿಗೆ ಹೆಚ್ಚುವರಿಯಾಗಿ ಅಂಚೆ ಮತಪತ್ರಗಳನ್ನು 80 ವರ್ಷ ಮೇಲ್ಪಟ್ಟ ಪದವೀಧರ ಮತದಾರರಿಗೆ, ದಿವ್ಯಾಂಗ ಚೇತನ ಪದವೀಧರ ಮತದಾರರಿಗೆ ಹಾಗೂ ಕೋವಿಡ್-19 ಸೋಂಕಿಗೆ ಒಳಪಟ್ಟ / ಶಂಕಿತ ಪದವೀಧರರ ಮತದಾರರಿಗೆ ನೀಡಲು ನಿರ್ಧರಿಸಿರುತ್ತಾರೆ. ಕಾರಣ, ಸದರಿ ಮತದಾರರು ನಮೂನೆ-12ಡಿ ಯಲ್ಲಿ ಚುನಾವಣಾ ತಿಳುವಳಿಕೆ ಪ್ರಕಟಿತ 5 ದಿನಗಳೊಳಗೆ ಜಿಲ್ಲೆಯ ನೋಡಲ್ ಅಧಿಕಾರಿಗಳಿಗೆ ಸಲ್ಲಿಸಲು ಈ ಮೂಲಕ ಕೋರಿದೆ. ಈ ಕುರಿತು ಗದಗ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಗದಗ ಇವರನ್ನು ಜಿಲ್ಲಾ ನೋಡಲ್ ಅಧಿಕಾರಿಗಳೆಂದು ನೇಮಿಸಿದೆ. ಅಂಚೆ ಮತಪತ್ರಗಳನ್ನು ಸಲ್ಲಿಸಲು ಇಚ್ಚಿಸುವ ಅರ್ಹ ಮತದಾರರು ಸದರಿ ಅಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.

ಮಾದರಿ ನೀತಿ ಸಂಹಿತೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಲು ತಾಲೂಕವಾರ ಮೂರರಂತೆ ಒಟ್ಟು 21 ಸಂಚಾರಿ ದಳ ತಂಡವನ್ನು, 07 ವಿಡಿಯೋ ಸರ್ವೆಲೆನ್ಸ್ ತಂಡ ಹಾಗೂ 07 ವಿಡಿಯೋ ವ್ಯೂವಿಂಗ್ ತಂಡವನ್ನು ರಚಿಸಲಾಗಿದ್ದು ಪ್ರಸ್ತುತ ಚುನಾವಣೆಯನ್ನು ಕೋವಿಡ್ – 19 ಸೋಂಕು ತಡೆಗಟ್ಟುವಿಕೆಯೊಂದಿಗೆ ಚುನಾವಣೆಯನ್ನು ಜರುಗಿಸಲಾಗುತ್ತಿದ್ದು, ಮತದಾರರು ಹಾಗೂ ಅಭ್ಯರ್ಥಿಗಳು ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ದ್ವೈವಾರ್ಷಿಕ ಚುನಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ನೀಡಲು ಈ ಮೂಲಕ ಕೋರಿದೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ನಡೆಯುವ ಗ್ರಾಪಂ ಚುನಾವಣೆ ವಿವರ

ರಾಜ್ಯ ಚುನಾವಣಾ ಆಯೋಗವು ರಾಜ್ಯದ 30 ಜಿಲ್ಲೆಗಳಲ್ಲಿನ ಒಟ್ಟು 6004 ಗ್ರಾಮ ಪಂಚಾಯತಿಗಳಲ್ಲಿ ಅವಧಿ ಮುಕ್ತಾಯವಾಗದ 162 ಗ್ರಾಮ ಪಂಚಾಯತಿಗಳು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ 6 ಗ್ರಾಮ ಪಂಚಾಯತಿಗಳು ಮತ್ತು 33 ಗ್ರಾಮ ಪಂಚಾಯತಿಗಳು ಪೂರ್ಣವಾಗಿ ಹಾಗೂ 41 ಗ್ರಾಮ ಪಂಚಾಯತಿಗಳು ಬಹುಶಃ ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿರುವುದರಿಂದ ಒಟ್ಟು 74 ಗ್ರಾಮ ಪಂಚಾಯತಿಗಳು ಒಟ್ಟಾರೆ 242 ಗ್ರಾಮ ಪಂಚಾಯತಿಗಳನ್ನು ಹೊರತು ಪಡೆಸಿ ಉಳಿದ ಎಲ್ಲ 5762 ಗ್ರಾಮ ಪಂಚಾಯತಿಗಳ 35,884 ಕ್ಷೇತ್ರಗಳಿಂದ ಒಟ್ಟು 92121 ಸ್ಥಾನಗಳಿಗೆ ಈ ಕೆಳಕಂಡ ವೇಳಾ ಪಟ್ಟಿಯಂತೆ ಚುನಾವಣೆ ನಡೆಸಲಾಗುವುದು.

ಹಿಂದೂ ಅಂತ ಭಾರತೀಯ ಭಾಷೆಯಲ್ಲಿ ಇಲ್ಲ: ಸಾಹಿತಿ ಸೂಳಿಭಾವಿ

ಉತ್ತರಪ್ರಭ ಸುದ್ದಿಗದಗ: ಹಿಂದು ಪದ ಭಾರತೀಯದ್ದಲ್ಲ ಅದು ಪರ್ಷಿಯನ್ ನಿಂದ ಬಂದಿದೆ. ಪರ್ಷಿಯನ್ ಹಾಗೂ ಇಸ್ಲಾಂದಲ್ಲಿ…

ಗದಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ನಡೆಯಲಿದೆ ಗ್ರಾಪಂ ಚುನಾವಣೆ

ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಹಾಗೂ ತೆರವಾಗಿರುವ ಗ್ರಾಮ ಪಂಚಾಯತ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಜರುಗಿಸಲು ಚುನಾವಣೆ ವೇಳಾ ಪಟ್ಟಿಯನ್ನು ಹೊರಡಿಸಲಾಗಿದೆ.

ಮುಳ್ಳಿನ ಮೇಲೆ ಬಟ್ಟೆ ಹಾಕಿ ತಪ್ಪು ಮಾಡಿದೆ – ಕುಮಾರಸ್ವಾಮಿ!

ರಾಮನಗರ : ನಾನು ಮುಳ್ಳಿನ ಮೇಲೆ ಬಟ್ಟೆ ಹಾಕಿ ದೊಡ್ಡ ತಪ್ಪು ಮಾಡಿದೆ ಎಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.