ಗದಗ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಹಾಗೂ ತೆರವಾಗಿರುವ ಗ್ರಾಮ ಪಂಚಾಯತ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಜರುಗಿಸಲು ಚುನಾವಣೆ ವೇಳಾ ಪಟ್ಟಿಯನ್ನು ಹೊರಡಿಸಲಾಗಿದೆ.
ಮಾ.15 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗುವದು. ಮಾ.19 ರಂದು ನಾಮ ಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾ.20 ನಾಮಪತ್ರಗಳನ್ನು ಪರೀಶಿಲಿಸಲಾಗುವದು. ಮಾ.22 ಉಮೇದುವಾರಿಕೆಯನ್ನು ಹೊಂತೆಗೆದುಕೊಳ್ಳುವ ಕೊನೆಯ ದಿನವಾಗಿದೆ. ಮಾ.29 ಮತದಾನ ಅವಶ್ಯವಿದ್ದರೆ ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನವನ್ನು ನಡೆಸಲಾಗುವದು. ಮಾ.30 ರಂದು ಮರು ಮತದಾನ ಅವಶ್ಯವಿದ್ದರೆ ಮತದಾನ ನಡೆಸಲಾಗುವದು. ಮಾ.31 ರಂದು ಮತಗಳ ಎಣಿಕೆ ತಾಲೂಕು ಕೇಂದ್ರಗಳಲ್ಲಿ ಜರುಗಿಸಲಾಗುವದು. ಚುನಾವಣೆ ಜರುಗಲಿರುವ ಗ್ರಾ.ಪಂ ಗಳಿಗೆ ರಿಟರ್ನಿಂಗ/ಸಹಾಯಕ ರಿಟರ್ನಿಂಗ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ.
ಗದಗ ತಾಲೂಕಿನ ಹರ್ಲಾಪುರ ಗ್ರಾ.ಪಂ 12 ಸದಸ್ಯ ಸ್ಥಾನ, ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಗಾ.ಪಂ 14 ಸದಸ್ಯ ಸ್ಥಾನ, ಗಜೇಂದ್ರಗಡ ತಾಲೂಕಿನ ಕುಂಟೋಜಿ ಗ್ರಾ.ಪಂ 13 ಸದಸ್ಯ ಸ್ಥಾನ ಹಾಗೂ ಶಾಂತಗೇರಿ ಗ್ರಾ.ಪಂ 20 ಸದಸ್ಯ ಸ್ಥಾನಗಳಿಗೆ ಚುನಾವಣೆ ಜರುಗಲಿದೆ.
ಗದಗ ತಾಲೂಕಿನ ಚಿಂಚಲಿ ಗ್ರಾ.ಪಂ ವ್ಯಾಪ್ತಿಯ ನೀಲಗುಂದ ಕ್ಷೇತ್ರದ 7 ಸದಸ್ಯ ಸ್ಥಾನ, ಅಸುಂಡಿ ಗ್ರಾ.ಪಂ. 1 ಸದಸ್ಯ ಸ್ಥಾನ, ಕುರ್ತಕೋಟಿ ಗ್ರಾ.ಪಂ. 1 ಸದಸ್ಯ ಸ್ಥಾನಕ್ಕೆ, ರೋಣ ತಾಲೂಕಿನ ಹೊಸಳ್ಳಿ ಗ್ರಾ.ಪಂ. ವ್ಯಾಪ್ತಿಯ ಜಿಗಳೂರ ಕ್ಷೇತ್ರದ 5 ಸದಸ್ಯ ಸ್ಥಾನಕ್ಕೆ ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾ.ಪಂ ವ್ಯಾಪ್ತಿಯ ಗುಮ್ಮಗೋಳದ ಖಾಲಿ ಇರುವ 2 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಗಳು ಜರುಗಲಿವೆ.