ಲಕ್ನೋ: ಬಾಬ್ರೀ ಮಸೀದಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ತೀರ್ಪು ಇಂದು ಹೊರ ಬಿದ್ದಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಆಪಾದಿತ ಎಲ್ಲಾ 32 ಮಂದಿ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
ಈ ಮೂಲಕ ಕೋರ್ಟ್ ನೀಡಿದ ಈ ತೀರ್ಪು ನಿಂದಾಗಿ 28 ವರ್ಷಗಳ ಸುದೀರ್ಘ ಪ್ರಕರಣಕ್ಕೆ ತೆರೆ ಎಳೆದಂತಾಗಿದೆ. ಹಾಗೇ ಪ್ರಕರಣದ ಪ್ರಮುಖ ದೋಷಿಗಳಾದ ಅಡ್ವಾಣಿ, ಉಮಾಭಾರತಿ, ಮುರುಳಿ ಮನೋಹರ್ ಜೋಷಿ ಸೇರಿದಂತೆ ಇತರರು ನಿರಾಳರಾಗಿದ್ದಾರೆ.

ಆರೋಪಿಗಳ ವಿರುದ್ದ ಸೂಕ್ತ ಸಾಕ್ಷ್ಯಗಳಿಲ್ಲದ ಕಾರಣ 32 ಜನರನ್ನು ಆರೋಪ ಮುಕ್ತ ಗೊಳಿಸುತ್ತಿರುವುದಾಗಿ ಲಕ್ನೋ ಸಿಬಿಐ ವಿಶೇಷ ಕೋರ್ಟ್ ತಿಳಿಸಿದೆ.

ತೀರ್ಪಿನ ಪ್ರಕಾರ ಮಸೀದಿ ದ್ವಂಸ ಕಾರ್ಯ ಆಕಸ್ಮಿಕ, ಉದ್ರಿಕ್ತ ಕರಸೇವಕರು ಮಸೀದಿ ದ್ವಂಸ ಮಾಡಿದ್ದಾರೆ, ನಾಯಕರು ಗಲಭೆ ತಡೆಯಲು ಮುಂದಾಗಿದ್ದರೇ ಹೊರತು ಅದಕ್ಕೆ ಪ್ರಚೋದನೆ ನೀಡಿಲ್ಲ. ಬಿಜೆಪಿ ಹಾಗೂ ಆರ್.ಎಸ್. ಎಸ್ ನಾಯಕರ ಪಾತ್ರ ಇದರಲ್ಲಿ ಇಲ್ಲ ಎಂಬ ವಿಚಾರಗಳನ್ನು ಉಲ್ಲೇಖಿಸಿ ತಮ್ಮ ತೀರ್ಪು ನೀಡಿದರು.

ಇಂದು ಮುಂಜಾನೆಯೇ ತೀರ್ಪು ಪ್ರಕಟಿಸಲು ಸಿದ್ದತೆ ನಡೆಸಿದ್ದ ಲಕ್ನೋ ಕೋರ್ಟ್ ಸಕಲ ಸಿದ್ದತೆ ಮಾಡಿಕೊಂಡಿತ್ತು. ಈ ಕಾರಣಕ್ಕೆ ಕೋರ್ಟ್ ಆವರಣದಲ್ಲೂ ಬಿಗಿ ಭದ್ರತೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

You May Also Like

ಟಿಕ್ ಟಾಕ್ App ಬ್ಯಾನ್ ಗೆ ಟಿಕ್ ಟಾಕ್ ನೀಡಿದ ಸ್ಪಷ್ಟಿಕರಣ

ನವದೆಹಲಿ: ಕೇಂದ್ರ ಸರ್ಕಾರವು 59 App ಗಳನ್ನು ನಿಷೇಧಿಸಿ‌ ಮದ್ಯಂತರ ಆದೇಶ ಹೊರಡಿಸಿದೆ. 59 App…

ನವದೆಹಲಿ : ದೇಶದ ಮೆಟ್ರೋ ನಗರಗಳು ರೆಡ್ ಜೋನ್ ನಲ್ಲಿ: ಆರೋಗ್ಯ ಸಚಿವಾಲಯ ನಿರ್ಧಾರ

ದೇಶದಲ್ಲಿನ ಎಲ್ಲ ಮೆಟ್ರೋ ನಗರಗಳನ್ನು ರೆಡ್ ಜೋನ್ ನಲ್ಲಿರಿಸಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ.

ವೀರಪ್ಪನ್ ಪುತ್ರಿಯೀಗ ಬಿಜೆಪಿ ಯುವ ಘಟಕದ ಉಪಾಧ್ಯಕ್ಷೆ

ಕುಖ್ಯಾತ ದಂತಚೋರ ವೀರಪ್ಪನ್ ಪುತ್ರಿ ವಿದ್ಯಾರಾಣಿಯನ್ನು ತಮಿಳುನಾಡು ಬಿಜೆಪಿ ಯುವ ಘಟಕದ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದೆ. ಕಳೆದ ಫೆಬ್ರವರಿಯಲ್ಲಿ ವಿದ್ಯಾರಾಣಿ ಬಿಜೆಪಿಗೆ ಸೇರಿದ್ದರು. ಈ ಕುರಿತು ಮಾತನಾಡಿರುವ ವಿದ್ಯಾರಾಣಿ, ಸಾಮಾಜಿಕ ಕೆಲಸ ಮಾಡುವುದು ನನ್ನ ಗುರಿ. ಯಾವುದೇ ಒಂದು ಸಮುದಾಯದ ಜೊತೆಗೆ ಗುರುತಿಸಿಕೊಳ್ಳುವುದಿಲ್ಲ. ಮಾನವೀಯತೆಯೇ ಮುಖ್ಯ’ ಎಂದಿದ್ದಾರೆ.