ಧಾರವಾಡ: ಇದೇ ದಿನಾಂಕ 28 ರಂದು ರೈತ ಸಂಘಟನೆಗಳು ನೀಡಿರುವ ಬಂದ್ ಕರೆ ಹಿನ್ನೆಲೆ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ಸ್ನಾತಕ ಪರೀಕ್ಷೆಗಳನ್ನು ಮುಂದೂಡಿದೆ.

ಬಂದ್ ಕರೆ ಹಿನ್ನೆಲೆ ಸಾರಿಗೆ ವ್ಯವಸ್ಥೆಯಲ್ಲಿ ಏರುಪೇರಾಗುವ ಸಂಭವವಿದೆ. ಇದರಿಂದ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಧಾರವಾಡ ವಿವಿ ಈ ನಿರ್ಧಾರ ತೆಗೆದುಕೊಂಡಿದೆ.

ಹೀಗಾಗಿ ಸೆ.28 ರಂದು ನಡೆಯಬೇಕಿದ್ದ ಎಲ್ಲ ಸ್ನಾತಕ, ದೂರ ಸಂಪರ್ಕ ಶಿಕ್ಷಣ ಅಡಿ ಬರುವ ಬಿ.ಎ, ಬಿಕಾಂ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದೂಡಲಾದ ಪರೀಕ್ಷೆಗಳ ದಿನಾಂಕವನ್ನು ಸದ್ಯದಲ್ಲೆ ತಿಳಿಸಲಾಗುವುದು ಎಂದು ಕರ್ನಾಟಕ ವಿವಿಯ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪ್ರೊ.ರವೀಂದ್ರನಾಥ್ ಎನ್.ಕದಮ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

I can't breathe: ಜಗತ್ತಿನಾದ್ಯಂತ ಕಪ್ಪುಜನರಿಗೆ ಮಿಡಿತ

ಫ್ಲಾಯ್ಡ್ ಅವರ ಕುತ್ತಿಗೆಯ ಮೇಲೆ ಮೊಣಕಾಲನ್ನು ಇಟ್ಟು, ನೆಲಕ್ಕೆ ಒತ್ತಿದ್ದರು. ಈ ವಿಡಿಯೋದಲ್ಲಿ ಫ್ಲಾಯ್ಡ್ “I can’t breathe” ಎಂದು ನಿರಂತರವಾಗಿ ಅವಲತ್ತುಕೊಂಡಿದ್ದರು. ಈ ವಿಡಿಯೋವನ್ನು ಯೂಟ್ಯೂಬ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಕೋಟ್ಯಂತರ ಜನ ನೋಡಿದ್ದಾರೆ.

ಹುಲಕೋಟಿ ಬಳಿ ಕಾರು-ಲಾರಿ ಡಿಕ್ಕಿ

ಕಾರ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೆ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಸಮೀಪದ ಹುಲಕೋಟಿ ಹೊರವಲಯದ ರೂರಲ್ ಇಂಜನಿಯರಿಂಗ್ ಕಾಲೇಜ್ ಬಳಿ ಘಟನೆ ನಡೆದಿದೆ.

ಲಾಕ್ ಡೌನ್ ಸಮಯದಲ್ಲಿ ಬಾಲಿವುಡ್ ನಟ ಸಲ್ಲು ಬಾಯ್ ಮಾಡಿದ್ದೆನು ಗೊತ್ತಾ..?

ಬಾಲಿವುಡ್ ನಟ ಸಲ್ಲು ಬಾಯ್ ಅಭಿಮಾನಿಗಳಿಗೆ ಮಾತ್ರ ಲಾಕ್ ಡೌನ್ ನಲ್ಲಿ ಸಲ್ಲುಭಾಯ್ ಏನು ಮಾಡ್ತಿದ್ದಾರೆ ಅಂತ ಕುತೂಹಲ ಇತ್ತು. ಆದ್ರೆ ಅಭಿಮಾನಿಗಳಿಗೆ ತಾವು ಈ ಬಿಡುವಿನಲ್ಲಿ ಏನು ಮಾಡ್ತಿದ್ದಾರೆ ಅಂತ ತೋರಿಸಿದ್ದಾರೆ.

ಬೀದರ್: ಅನಾವಶ್ಯಕ ವಾಹನಗಳೊಂದಿಗೆ ರಸ್ತೆಗಿಳಿದಿರಾ.. ಹುಷಾರ್..!

ಬೀದರ್: ಈಗಾಗಲೇ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದರಿಂದ ಬೀದರ್ ಜಿಲ್ಲೆಯನ್ನು ರೆಡ್ ಝೋನ್ ಎಂದು ಘೋಷಿಸಲಾಗಿದೆ.…