ಶಿರಹಟ್ಟಿ: ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ವರ್ಷದಿಂದ ವರ್ಷಕ್ಕೆ ಇಳಿಕೆ ಕ್ರಮದಲ್ಲಿ ಸಾಗುತ್ತಿದ್ದು, ಇದಕ್ಕೆ ಶಿಕ್ಷಕರ ಅಪೂರ್ಣತೆಯೇ ಮೂಲ ಕಾರಣ ಎಂದು ಡಿಡಿಪಿಐ ಬಸವಲಿಂಗಪ್ಪ ಹೇಳಿದರು.

ಸ್ಥಳೀಯ ಡಿ.ದೇವರಾಜ ಅರಸು ಸಭಾಭವನದಲ್ಲಿ ಬುಧವಾರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕರಿಗಾಗಿ ನಡೆದ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣಾ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಲೋಪದೋಷಗಳಿಲ್ಲ. ವಿದ್ಯಾರ್ಥಿಗಳು ಶಿಕ್ಷಕರ ಶಿಕ್ಷಕ ಎಂದು ಹೇಳಬಹುದುಗಾಗಿದ್ದು, ಶಿಕ್ಷಕರು ಪಾಠ ಬೋಧನೆಯಲ್ಲಿ ಪರಿಪೂರ್ಣತೆ ಹೊಂದಿದರೆ ಮಾತ್ರ ವಿದ್ಯಾರ್ಥಿಗಳಲ್ಲಿ ಸರಿಯಾದ ಕಲಿಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಿಕ್ಷಕರ ಬೇಜವ್ದಾರಿತನದಿಂದ ಮಕ್ಕಳು ಅದೇ ಹಾದಿಯಲ್ಲಿ ಸಾಗುತ್ತಿದ್ದು, ಶಿಕ್ಷಕರು ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಶಾಲೆಯಲ್ಲಿ ಹಾಜರಿರಬೇಕು. ರಜೆ ಬೇಕಾದರೆ ಕಡ್ಡಾಯವಾಗಿ ಅರ್ಜಿ ಮುಖಾಂತರ ಸಲ್ಲಿಸಬೇಕು. ಅದನ್ನು ಬಿಟ್ಟು ಕೇವಲ ದೂರವಾಣಿ ಮೂಲಕ ಹೇಳಿದರೆ ಮುಖ್ಯೋಪಾಧ್ಯಯರು ರಜೆ ಮಂಜೂರು ಮಾಡಬಾರದು. ಇದಕ್ಕೆ ಅನುಗುಣವಾಗಿ ಆದೇಶವಿದ್ದು ಕಡ್ಡಾಯವಾಗಿ ಇದು ಪಾಲನೆಯಾಗಬೇಕು ಎಂದು ಹೇಳಿದರು.

ಫಲಿತಾಂಶ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದ್ದು, ಕಡಿಮೆ ಫಲಿತಾಂಶ ಮಾಡಿ ಬೀಗುವ ಬದಲು ಬಾಗಿ ಪಾಠ ಬೋಧನೆ ಮಾಡಬೇಕು. ವಿಷಯದಲ್ಲಿ ಪರಿಣಿತಗೊಂಡು ಮಕ್ಕಳ ಮನಸ್ಸಿನ ಆಳಕ್ಕಿಳಿದು ಪಾಠ ಬೋಧನೆ ಮಾಡಿದಾಗ ಮಾತ್ರ ವಿದ್ಯಾರ್ಥಿಗಳ ಪಲಿತಾಂಶ ಸುಧಾರಣೆಯಾಗಲು ಸಾಧ್ಯ ಆಗುತ್ತದೆ ಎಂದು ಹೇಳಿದರು.

ಡಿಡಿಪಿಐ ಅವರೆ ಒಪ್ಪಿಕೊಂಡಂತೆ

ಡಿಡಿಪಿಐ ಅವರ ಈ ಮಾತಿನಿಂದ ಇದೀಗ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಯ ವಿಚಾರ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ಇನ್ನು ಮುಖ್ಯವಾಗಿ ಸ್ವತ: ಡಿಡಿಪಿಐ ಅವರೆ ಫಲಿತಾಂಶ ಇಳಿಕೆಗೆ ಶಿಕ್ಷಕರ ಅಪೂರ್ಣತೆಯೆ ಕಾರಣ ಎಂದು ಒಪ್ಪಿಕೊಂಡಿರುವುದು ಮಾತ್ರ ಅಚ್ಚರಿಯ ಸಂಗತಿ. ಇನ್ಮುಂದೆ ನಿಗದಿತ ಸಮಯಕ್ಕೆ ಶಾಲೆಗೆ ಬರುವುದು ಹಾಗು ರಜೆ ಅರ್ಜಿ ಸಲ್ಲಿಸಿಯೇ ಶಾಲೆಗೆ ಗೈರಾಗಬೇಕು. ದೂರವಾಣಿ ಮೂಲಕ ರಜೆ ಕೇಳಿದರೆ ಸಾಲದು ಎಂದು ಖಡಕ್ ಸೂಚನೆ ನೀಡಿದರು. ಆದರೆ ಇಷ್ಟು ದಿನ ಕೆಲವು ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆಗೆ ಬಾರದೆ ಇರುವುದು, ರಜೆ ಹೇಳದೇ ಶಾಲೆಗೆ ಗೈರಾಗುತ್ತಿದ್ದರೆ? ಎನ್ನುವುದು ಪ್ರಶ್ನೆಯಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ, ಜಿ.ಡಿ.ದಾಸರ, ಎಂ.ಬಿ.ಹೊಸಮನಿ, ಶರಣು ಗೋಗೇರಿ, ಪಿ.ಜಿ.ಯಲವಿಗಿ, ಇಓ ನಿಂಗಪ್ಪ ಓಲೇಕಾರ, ವೈ.ಎಸ್.ನದಾಫ್, ಶರೀಫ್ಸಾಬ ನದಾಫ್, ರವಿ ಬೆಂಚಳ್ಳಿ, ಎಂ.ಕೆ.ಲಮಾಣಿ, ಎಂ.ಎ.ಮಕಾಂದಾರ ಮುಂತಾದವರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *

You May Also Like

ಅಕ್ಕಿ ಕೊಡಿ ಎಂದಿದ್ದಕ್ಕೆ ಸತ್ತು ಹೋಗು ಎಂದ ಅಹಾರ ಸಚಿವ

ಪಡಿತರದಲ್ಲಿನ ಅಕ್ಕಿ ಕಡಿತಗೊಳಿಸಿರುವುದನ್ನು ಪ್ರಶ್ನಿಸಿದ್ದ ರೈತ ಸಂಘದ ಕಾರ್ಯಕರ್ತರೊಬ್ಬರಿಗೆ, ಆಹಾರ ಸಚಿವ ಉಮೇಶ್ ಕತ್ತಿ ಸತ್ತು ಹೋಗು ಎಂದು ಹೇಳಿ ಉಡಾಫೆತನ ವರ್ತಿಸಿದ್ದಾರೆ.

ಬಸ್ ನಿಲುಗಡೆ ಸ್ಥಳದಲ್ಲೇ ಬೈಕ್ ಪಾರ್ಕಿಂಗ್, ಪ್ರಯಾಣಿಕರ ಪರದಾಟ

ಸ್ಥಳೀಯ ಬಸ್ ನಿಲ್ಧಾಣದ ನಿಲುಗಡೆ ಸ್ಥಳದಲ್ಲೇ ನಿತ್ಯ ಬೈಕ್ ಗಳ ಪಾರ್ಕಿಂಗ್ ಮಾಡುತ್ತಿದ್ದು ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಹೊಸ ಬಸ್ ನಿಲ್ಧಾಣ ಆರಂಭವಾದಾಗಿನಿಂದ ಬೈಕ ನಿಲ್ಲಿಸಲು ಪ್ರತ್ಯೇಕ ಜಾಗದ ವ್ಯವಸ್ಥೆ ಇಲ್ಲದಿರುವದು ಈ ಸಮಸ್ಯೆ ಉಂಟಾಗಿದೆ. ನಿಲ್ಧಾನದಲ್ಲಿ ಯಾವ ಸೂಚನಾ ಫಲಕವನ್ನು ಅಳಡಿಕೆಗೆ ಸಂಬಂಧಿಸಿದ ಸಾರಿಗೆ ಸಂಸ್ಥೆ ಸೂಕ್ತ ವ್ಯವಸ್ಥೆ ಮಾಡುತ್ತಿಲ್ಲ.

ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ

ಮೆಣಸಿನಕಾಯಿ ಬೆಳೆ ಬೆಳೆದು ನಿಂತ ಜಮೀನಿನಲ್ಲಿ ಕುರಿ ಹಾಗೂ ದನಕರುಗಳನ್ನು ಬಿಟ್ಟು ಬೆಳೆಯನ್ನು ನಾಶಪಡಿಸಲಾಗಿದೆ.

ನಾಡಪ್ರಭು ವಿಮಾನ ನಿಲ್ದಾಣದ ಟರ್ಮಿನಲ್‌–2 ಉದ್ಘಾಟಿಸಿದ ಮೋದಿ

ಉತ್ತರಪ್ರಭ ಸುದ್ದಿ ಬೆಂಗಳೂರ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಟರ್ಮಿನಲ್ 2 ಅನ್ನು…